ಹಾವೇರಿ :
ಬಸವಾದಿ ಶಿವಶರಣರು, ಸಮ ಸಮಾಜ ನಿರ್ಮಾಣಕೆ, ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು.ನಾವು ಹೋರಾಟ ಮಾಡದಿದ್ದರೆಜೀವನ ನಿರ್ವಹಣೆ ಮಾಡುವುದುಕಷ್ಟವಾಗುತ್ತದೆ,ಸಮಕಾಲಿನಜಿಜ್ಞಾಸೆಯಸಮಸ್ಯೆಗಳಿಗೆ ಹೋರಾಟ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದುಚಿತ್ರದುರ್ಗದಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಲಿಂ.ಜಗದ್ಗುರು ಶ್ರೀ.ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಅಥಣಿ ಶ್ರೀಮುರುಘೇಂದ್ರ ಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಮೂರು ದಿನಗಳ ಕಾಲ ಜರುಗಿದ ಶರಣ ಸಂಸೃತಿ ಉತ್ಸವ-2018ರ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಧಾರವಾಡದ ಮೃತ್ಯುಂಜಯಶ್ರೀಗಳು ಹರ್ಡೇಕರ ಮಂಜಪ್ಪನವರಿಗೆ ಲಿಂಗ ದೀಕ್ಷೆ ನೀಡುವಂತೆಅಥಣಿ ಮುರುಘೇಂದ್ರ ಶಿವಯೋಗಿಗಳನ್ನು ಕೇಳಿಕೊಂಡ ಸಂದರ್ಭದಲ್ಲಿಅವರೂ ಸಹ ಒಂದು ಹಂತದಲ್ಲಿ ಹಿಂದೆ ಸರಿದಿದ್ದರೂಆದರೆ ನೀವು ದೀಕ್ಷೆಯನ್ನು ನೀಡಲೇ ಬೇಕು ಎಂದುಒತ್ತಾಯ ಮಾಡಿದ ಸಂದರ್ಭದಲ್ಲಿ ಹರ್ಡೇಕರಅವರಿಗೆ ಮಧ್ಯರಾತ್ರಿಯಲ್ಲಿ ಲಿಂಗ ದೀಕ್ಷೆಯನ್ನು ನೀಡಲಾಗಿತ್ತುಎಂದರೆ ಹಲವು ದಶಕಗಳ ಹಿಂದೆನೇ ಈ ಮಹಾನ್ ಪುರುಷರಿಗೂ ಸಹ ಸಮಾಜವನ್ನುಎದಿರು ಹಾಕಿಕೊಳ್ಳುವ ಧೈರ್ಯವನ್ನು ಮಾಡಿದ್ದಿಲ್ಲಎನ್ನುವುದು ತಿಳಿಯುತ್ತದೆ. ಆದ್ದರಿಂದಇಂದು ಪರಿವರ್ತನಾಪರ ಹೋರಾಟಗಳ ಅವಶ್ಯಕತೆಇದೆಎಂದರು.
ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡುಉತ್ತಮರೀತಿಯಿಂದ ಬದುಕಬೇಕಾಗಿದೆಯೇ ಹೊರತು, ಸ್ವಾತ್ಯಂತ್ರ್ಯವನ್ನು ಸ್ವೇಚ್ಛಾಚಾರವೆಂದುಭಾವಿಸಿ ಮನಸ್ಸಿಗೆ ತಿಳಿದಂತೆ ಬದುಕಬಾರದುಎಂದರು.
ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದಧಾರವಾಡದ ಸಾಹಿತಿಡಾ.ಮಲ್ಲಿಕಾರ್ಜುನ ಗುಮ್ಮಗೋಳ, ತಿಥಿ, ಮಹೂರ್ತ, ಹೋಮ, ಹವನಗಳನ್ನು ತಿರಸ್ಕರಿಸಿ ಅಮವಾಸ್ಯೆ, ಹುಣ್ಣಿಮೆ, ಗ್ರಹಣ ದಿನಗಳಂದು ಶುಭ ಕಾರ್ಯಗಳನ್ನು ಆಯೋಜಿಸುವಮುರುಘಾ ಶರಣರುಮೂಲಕ ಮೌಡ್ಯಗಳನ್ನು ತೊಡೆಯುವ ಕೆಲಸ ಮಾಡಿದರುಎಂದರು.
ಬಸವಣ್ಣನವರ ಸಮಾನತೆ, ಸಮಾಜವಾದ ಮೌಲ್ಯಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸಿದರು.ಧಾರ್ಮಿಕ ಸಾಮ್ರಾಜ್ಯ ಶಾಹಿಗಳು ಧರ್ಮವನ್ನುತುಂಡರಿಸಲು ಯತ್ನಿಸಿದರೆ ಮುರುಘಾ ಶರಣರುಧರ್ಮ ನಿರಪೇಕ್ಷತೆಯಿಂದ ಸಣ್ಣ ಪುಟ್ಟ ಧರ್ಮಗಳೆಲ್ಲವನ್ನು ಒಳಗೊಳ್ಳುವಂತೆ ಮಾಡಿದರು.ಓದುಧ್ಯಾನವಾದರೆ, ಬರಹಯೋಗ ಮನುಷ್ಯನಅತಃಶಕ್ತಿಯನ್ನು ಹೊರ ಹಾಕುವ ಮೂಲಕ ಧರ್ಮ ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವನ್ನು ಮುರುಘಾ ಶರಣರು ಮಾಡತ್ತಿದ್ದಾರೆಎಂದರು.
ಶಾಸಕ ನೆಹರುಓಲೇಕಾರ ಮಾತನಾಡಿ, ಶಕ್ತರುಅಶಕ್ತರನ್ನು ಅನಾದಿ ಕಾಲದಿಂದಲೂ ತುಳಿದು ಶೋಷಣೆಯನ್ನು ಮಾಡುತ್ತಾ ಬಂದಿದ್ದಾರೆ.ದಾರ್ಮಿಕ, ಸಾಹಿತ್ಯ, ರಂಗ ಕಲೆ ಸೇರಿದಂತೆಎಲ್ಲಾ ರಂಗಗಳಲ್ಲಿಯೂ ಹೋರಾಟವನ್ನು ಮಾಡಿತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದರು.
ಮಾಜಿ ಸಚಿವರುದ್ರಪ್ಪ ಲಮಾಣಿ ಮಾತನಾಡಿ, 12 ನೇ ಶತಮಾನದಲ್ಲಿಜಾತಿ ಬೇಧಎಲ್ಲವನ್ನು ಮೀರಿ ಬಸವಣ್ಣನವರು ಸಮಾನತೆತರಲು ಹೋರಾಟ ಮಾಡಿದರು.ಬಸವಣ್ಣನವರತತ್ವದ ಹಾದಿಯಲ್ಲಿ ಮುರುಘಾ ಶರಣರು ನಡೆಯುತ್ತಿದ್ದು, ಮೌಡ್ಯತೆಯ ವಿರುದ್ದ ದಿಟ್ಟತನದ ಹೋರಾಟ ಪ್ರದರ್ಶನ ಮಾಡುತ್ತಾ, ಸಮಾಜಕ್ಕೆ ಸತ್ಯದದರ್ಶನ ಮಾಡಿಸುತ್ತಿದ್ದಾರೆಎಂದರು.
ಸವಣೂರಿನದೊಡ್ಡಹುಣಸೆಕಲ್ಮಠದಚನ್ನಬಸವ ಸ್ವಾಮಿಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ, ಡಾ.ಶಿಮೂಶ ಪ್ರಶಸ್ತಿ ಪುರಸ್ಕತ ಹಿರಿಯ ಸಾಹಿತಿ ಸತೀಶಕುಲಕರ್ಣಿ ಮಾತನಾಡಿದರು.
ವೇದಿಕೆಯಲ್ಲಿ ನಾಗೇಂದ್ರ ಕಟಕೋಳ, ಪ್ರಕಾಶ ಶೆಟ್ಟಿ, ಇಂದುಧರ ಯರೇಶಿಮಿ, ಡಾ.ಮೃತ್ಯುಂಜಯತುರಕಾಣಿ, ಮಲ್ಲಿಕಾರ್ಜುನ ಹಿಂಚಿಗೇರಿಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ