ಹಗರಿಬೊಮ್ಮನಹಳ್ಳಿ:
ತಾಲೂಕಿನ ಸೊನ್ನ ಗ್ರಾಮದಲ್ಲಿ ಕೌಶಲಾಭಿವೃದ್ಧಿ ಹಾಗೂ ಮುಜರಾಯಿ ರಾಜ್ಯ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್ ಅವರಿಂದ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು.
ಗ್ರಾಮದ ಆಂಜನೇಯ ಸ್ವಾಮಿ ಮತ್ತು ವೀರಭದ್ರೇಶ್ವರ ದೇಗುಲಗಳ ಅಭಿವೃದ್ಧಿ ಕಾಮಗಾರಿಗಾಗಿ ತಲಾ 5ಲಕ್ಷ ರೂ.ಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿತು. ಇದರೊಂದಿಗೆ ಗ್ರಾಮದ ಅಡವಿತಾತನ ರಸ್ತೆ ಸಿಸಿ ರಸ್ತೆ ನಿರ್ಮಾಣಕ್ಕಾಗಿ 45ಲಕ್ಷ ರೂ.ಗಳ ವೆಚ್ಚದಲ್ಲಿನ ಯೋಜನೆಗೆ ಭೂಮಿ ಪೂಜೆ ನೆರವೇರಿತು.
ಪೂಜೆಯ ಬಳಿಕ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೇರಿದ ಸಾರ್ವಜನಿಕರು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಮಾತನಾಡಿ, ಗ್ರಾಮದಲ್ಲಿ ನಡೆಯುವ ಈ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕು.
ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ಡಿಗ್ಗಿಂಗ್ ಮಾಡದೆ ಸಿಸಿ ರಸ್ತೆಮಾಡಬೇಡಿ, ನೆಲದ ಮಟ್ಟದಲ್ಲಿ ರಸ್ತೆ ನಿರ್ಮಾಣವಾಗಲಿ ಎಂದು ಆದೇಶಿಸಿದರು. ಈಗಾಗಲೇ ಗ್ರಾಮವು ಮುಖ್ಯಮಂತ್ರಿಗಳ ಮಾದರಿ ಗ್ರಾಮಕ್ಕೆ ಈ ಸೊನ್ನ ಆಯ್ಕೆಯಾಗಿದೆ. ಇಲ್ಲೆ ವಿಶೇಷ ಯೋಜನೆಯ 1ಕೋಟಿ ರೂ.ಗಳ ಅನುದಾನ ನೀಡಲಾಗುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮುಂದಿನ ತಿಂಗಳು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂತಾಪ:
ಬರಹಗಾರ, ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್‍ರವರ ನಿಧನದ ವಾರ್ತೆಯನ್ನು ತಿಳಿದ ಸಚಿವರು ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಹಿಂದುಳಿದ ವರ್ಗಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹೇಶ್, ತಾ.ಪಂ.ಸದಸ್ಯ ಪ್ರಭಕರ, ಗ್ರಾ.ಪಂ.ಅಧ್ಯಕ್ಷ ದುರುಗಪ್ಪ, ಜಿ.ಪಂ.ಮಾಜಿ ಸದಸ್ಯ ವಸಂತ, ಗುರುವಯ್ಯ, ಚಂದ್ರನಾಯ್ಕ್, ಬನ್ನಿಕಲ್ಲು ಸಿದ್ದನಗೌಡ, ಮಹೇಶ್‍ಗೌಡ, ಕುಂಟೂರು ಸೋಮಶೇಖರ, ಕರಂಗಿ ಸುಭಾಷ್, ಪಕ್ಕೀರಸಾಬ್, ಸಂಚಿಬಸವರಾಜ್, ರಾಮನಾಥ್, ರಾಮಮೂರ್ತಿ, ಕಾಶಿನಾಥ, ದೇವಪ್ಪ, ಕಂಪ್ತನಾಗಪ್ಪ, ಎಚ್.ಪ್ರಕಾಶ, ತಹಸೀಲ್ದಾರ್ ವಿಜಯಕುಮಾರ್, ಜಿ.ಪಂ.ಎಇಇ ಸತೀಶ್ ಪಾಟೇಲ್, ಕೃಷಿ ಇಲಾಖೆಯ ಪ್ರಭಾರಿ ಎ.ಡಿ. ನಾಗರಾಜ್, ತಾ.ಪಂ. ಉಮೇಶ್, ನೀರು ಸರಬರಾಜು ಮಂಡಳಿಯ ಎಇ ಬಸವರಾಜ ರೆಡ್ಡಿ, ಜೆಇ ಸುಭಾಷ್, ಬಿಇಒ ಶೇಖರಪ್ಪ ಹೊರಪೇಟೆ, ಗುರುರಾಜ್ ಮತ್ತು ಪಿ.ಡಿ.ಒ ಪರಸಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ