ತುರುವೇಕೆರೆ:
ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಹಾಗೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರಕಿಸಿ ಕೊಡುವಂತೆ ಸಂಸದ ಜಿ.ಎಸ್.ಬಸವರಾಜುರವರನ್ನು ಒತ್ತಾಯಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಕೆ.ಹಿರಣಯ್ಯ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತ ಹಾಗು ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಗುಬ್ಬಿ ತಾಲೂಕಿನ ಕುಂದರನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಎಚ್‍ಎಎಲ್ ಕಾರ್ಖಾನೆಯಲ್ಲಿ ಜಿಲ್ಲೆಯ ಯುವಕರಿಗೆ ಹೆಚ್ಚು ಉದ್ಯೋಗ ದೊರಕಬೇಕು ಎಂದು ಒತ್ತಾಯಿಸಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಅವಿರತ ಶ್ರಮಿಸಿದ ಹೋರಾಟಗಾರರನ್ನು ನಾವಿಂದು ಆತ್ಮೀಯತೆಯಿಂದ ಸ್ಮರಿಸಬೇಕಿದೆ ಎಂದರು.
ತಹಶೀಲ್ದಾರ್ ಆರ್.ನಯೀಂಉನ್ನೀಸಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಆಡಳಿತ ಭಾಷೆಯನ್ನಾಗಿ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು. ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಂರಾಜುಮುನಿಯೂರು ಮಾತನಾಡಿ ಭಾರತದಲ್ಲಿಯೇ ಅತಿ ಹೆಚ್ಚು ರಾಜಮಹಾರಾಜುರುಗಳು ಆಳಿದ್ದು ಕರ್ನಾಟಕದಲ್ಲ್ಲೆ ಎಂಬುದು ಹೆಮ್ಮೆಯ ಸಂಗತಿ. ‘ಕನ್ನಡ’ ಎಂಬುದು ಕೇವಲ ಭಾಷೆಯಲ್ಲ ಅದು ಕರ್ನಾಟಕದ ಜನತೆಯ ಬದುಕಿನ ಪ್ರತೀಕ ಹಾಗು ಪರಂಪರೆಯ ಸೊಗಡಿನ ದ್ಯೋತಕ. ಜಲಸಂರಕ್ಷಣೆ ಹಾಗು ಹಸಿರು ಉಳಿಸಿ, ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಲು ಯುವಕರು ದೃಢ ಸಂಕಲ್ಪ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಪೂರ್ತಿ ಮಾತನಾಡಿ ಕನ್ನಡ ನಾಡು ಜ್ಞಾನ, ಆಧ್ಯಾತ್ಮ, ಭಕ್ತಿ ಕಲೆಗಳ ಸಂಗಮವಾಗಿದೆ ಎಂದರು.ಈ ಸಂದರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣೀಯ ಸೇವೆ ಸಲ್ಲಿಸಿದ ಗಂಗಮ್ಮ ಕ್ರೀಡೆ, ಶ್ರೀನಿವಾಸ್ ರಂಗಭೂಮಿ, ಧಾರವಾಹಿ ಕಲಾವಿದ ಕುರಿರಂಗಸ್ವಾಮಿ, ಶಿವಾನಂದಯ್ಯ ಸಮಗ್ರಕೃಷಿ, ಶಂಕರರಾಜ್ ಅರಸ್ ಕುಸ್ತಿ ಪಟು, ಅಶೋಕ್ ಶಿಕ್ಷಣ ಕ್ಷೇತ್ರ, ಶಿವಣ್ಣ ತೊಗಲುಗೊಂಬೆ, ರಮೇಶ್ ತಮಟೆ ಕಲಾವಿದ, ಗಿರೀಶ್ ಪೌರಕಾರ್ಮಿಕ, ಲೋಕೇಶ್‍ದುಂಡಾ ಸೋಮನಕುಣಿತ, ಜ್ಯೋತಿಪ್ರಕಾಶ್ ಕೃಷಿ, ಪಾಂಡುರಂಗಯ್ಯ ಎ.ಹೊಸಹಳ್ಳಿ ಪತ್ರಿಕೋದ್ಯಮ ಇವರುಗಳನ್ನು ಸನ್ಮಾನಿಸಲಾಯಿತು.
ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರನ್ನು ರಂಜಿಸಿತು. ಕಾರ್ಯಕ್ರಮಕ್ಕೂ ಮುನ್ನಾ ಕನ್ನಡ ರಾಜರಾಜೇಶ್ವರಿ ದೇವಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಮಹಲಿಂಗಯ್ಯ, ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮಯ್ಯ, ಪ್ರಸನ್ನಕುಮಾರ್, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಎನ್.ಆರ್.ಜಯರಾಮ್, ತಾಲೂಕು ಬಿಜೆಪಿ ಅಧ್ಯಕ್ಷ ದುಂಡಾರೇಣುಕಪ್ಪ, ತಾಲೂಕು ಪಂಚಾಯ್ತಿ ಸದಸ್ಯರು ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರು ಬಿ.ಇ.ಒ.ರಂಗಧಾಮಯ್ಯ, ಇ.ಒ.ಜಯಕುಮಾರ್, ಪ್ರಹ್ಲಾದ್, ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಮತ್ತು ಮುಖಂಡರು ಇದ್ದರು. ಶಿಕ್ಷಕ ಪ್ರಕಾಶ್ ನಿರೂಪಿಸಿ, ಬಿಆರ್‍ಪಿ ಶಿವಶಂಕರ್ ಸ್ವಾಗತಿಸಿ, ಶಿಕ್ಷಕಿ ಸಾವಿತ್ರಮ್ಮ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
