ಬೆಂಗಳೂರು
ಕ್ಯಾಬ್‍ನಲ್ಲಿ ಪ್ರಯಾಣಿಸಿದ ಬಾಡಿಗೆ ಹಣವನ್ನು ಪೇಟಿಎಂ ಮೂಲಕ ಪಾವತಿಸುತ್ತೇನೆ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡು ಪ್ರಯಾಣಿಕನ ಮೇಲೆ ಕಲ್ಲಿನಿಂದ ಉಬರ್ ಚಾಲಕನೋರ್ವ ಹಲ್ಲೆ ಮಾಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.ಬಾಂಬೆ ಮೂಲದ ಯಾದವ್ ಗುಪ್ತಾ ಮೇಲೆ ಉಬರ್ ಚಾಲಕ ಶಶಿಕುಮಾರ್ ಎಂಬಾತ ಹಲ್ಲೆ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ಗಾಯದ ಪೋಟೋ ಹಾಕಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಪ್ತಾ ನೋವು ತೋಡಿಕೊಂಡಿದ್ದಾರೆ.
ಕಳೆದ ಮಾ.16ರ ಸಂಜೆ ಥಣಿಸಂದ್ರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಲು ಗುಪ್ತಾ ಕ್ಯಾಬ್ ಬುಕ್ ಮಾಡಿದ್ದರು.ಟ್ರಿಪ್ ಹಣವನ್ನು ಪೇಟಿಎಂ ಮೂಲಕ ನೀಡುತ್ತೇನೆ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಚಾಲಕ ಸಿಟ್ಟಿಗೆದ್ದಿದ್ದಾನೆ.
ಹಣದ ಮೂಲಕವೇ ನೀಡಿ ಎಂದು ಕ್ಯಾಬ್ ಚಾಲಕ ಹೇಳಿದ್ದಕ್ಕೆ ಪೇಟಿಎಂ ಮೂಲಕವಾದರೆ ಟ್ರಿಪ್ ಓಕೆ, ಇಲ್ಲವಾದರೆ ಕ್ಯಾನ್ಸಲ್ ಮಾಡುತ್ತೇನೆ ಎಂದಿದ್ದಾನೆ.
ಇದರಿಂದ ಕುಪಿತನಾದ ಕ್ಯಾಬ್ ಚಾಲಕ ಶಶಿಕುಮಾರ್ ಅಲ್ಲೇ ಬಿದ್ದಿದ್ದ ಕಲ್ಲು ತೆಗೆದು ಗುಪ್ತಾ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗುಪ್ತ ಮುಖದ ಮೇಲೆ ಗಾಯವಾಗಿದ್ದು, ಸಾರ್ವಜನಿಕರ ಸಹಾಯದಿಂದ ಗುಪ್ತಾ ಬಚಾವ್ ಆಗಿದ್ದಾನೆ.ನಂತರ ಹಾಗೆ ದೇವನಹಳ್ಳಿ ಏಪೆರ್ರ್ಟ್‍ಗೆ ತೆರಳಿ ಬಾಂಬೆ ತಲುಪಿದ್ದಾರೆ. ಬಾಂಬೆಗೆ ತೆರಳಿ ಬೆಂಗಳೂರಿನ ಉಬರ್ ಚಾಲಕನ ದೌರ್ಜನ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
