ವರದಾ ನದಿಯಲ್ಲಿ ಅಪರಿಚಿತ ಶವ ಪತ್ತೆ

ಹಾನಗಲ್ಲ :

         ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮದ ವರದಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ತೇಲಿ ಬಂದಿದ್ದು, ಮಹಿಳೆಯ ಗುರುತು ಪತ್ತೆಯಾಗಿಲ್ಲ.

        ಶನಿವಾರ ಮಧ್ಯಾಹ್ನ ವರದಾ ನದಿಯಲ್ಲಿ ಈ ಶವ ಪತ್ತೆಯಾಗಿದ್ದು, ಸುಮಾರು 50 ವರ್ಷದ ಮಹಿಳೆಯದಿರಬಹುದೆಂದು ಅಂದಾಜಿಸಲಾಗಿದೆ. ಸುತ್ತಲಿನ ಯಾವ ಗ್ರಾಮದವಳೆಂದು ತಿಳಿದುಬಂದಿಲ್ಲ. ಗ್ರಾಮಸ್ಥರಿಂದ ಸುದ್ದಿ ತಿಳಿದ ಆಡೂರು ಪೊಲೀಸರು ಮೃತದೇಹವನ್ನು ಹೊರತೆಗೆದು ಪರಿಶೀಲಿಸಿದ್ದಾರೆ.

        ವರದಾನದಿ ಪಾತ್ರ ಶಿವಮೊಗ್ಗ ಜಿಲ್ಲೆಯಲ್ಲಿದ್ದು, ಗೊಂದಿ ಗ್ರಾಮದಿಂದ ಹಾನಗಲ್ಲ ತಾಲೂಕನ್ನು ಪ್ರವೇಶಿಸುತ್ತದೆ. ಈ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮದಿಂದ ಈ ಮೃತದೇಹ ತೇಲಿ ಬಂದಿರಬಹುದೆಂಬ ಸಂದೇಹದಿಂದ ಸೊರಬ ತಾಲೂಕಿನ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link