ಹರಪನಹಳ್ಳಿ
ತಾಲ್ಲೂಕು ವಾಲ್ಮೀಕಿ ಸಮಾಜ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯೋತ್ಸವದ ಮೆರವಣಿಗೆಗೆ ಸಣ್ಣ ಹಾಲಸ್ವಾಮಿಗಳು ನೇತೃತ್ವದಲ್ಲಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಂಗಳವಾರ ಚಾಲನೆ ನೀಡಿದರು.
ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ವೃತ್ತದಿಂದ ವಾಲ್ಮೀಕಿ ಮರ್ಹಷಿಗಳ ಭಾವಚಿತ್ರ ಹಾಗೂ ಬೇಡರ ಕಣ್ಣಪ್ಪ ಅವರ ಸ್ಥಬ್ದಚಿತ್ರಗಳ ಮೆರವಣಿಗೆಯೊಂದಿಗೆ ಡಿಜಿ ಗಾನಕ್ಕೆ ಸಮಾಜ ಬಂಧುಗಳು ಹೆಜ್ಜೆ ಹಾಕುತ್ತಾ ಸಾಗಿದರು.
ಶಾಸಕ ಎಸ್.ವಿ.ರಾಮಚಂದ್ರ ಟ್ಯಾಕ್ಟರ್ ನಡೆಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಸಮಾಜಕ್ಕೆ ಶಕ್ತಿ ಭಕ್ತಿಯನ್ನು ನೀಡಿದ ಮಹರ್ಷಿಗಳು. ಪಟ್ಟದಲ್ಲಿ ಅಪೂರ್ಣಗೊಂಡಿರುವ ವಾಲ್ಮೀಕಿ ಭವನ ತಾಲ್ಲೂಕಿನಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮಂಜೂರಾಗಿದ್ದು ಇಲ್ಲಿಯವರೆಗೂ ಸಂಪೂರ್ಣಗೊಳಿಸದಿರುವುದು ವಿಷಾಧನೀಯ. ಇಂತಹ ದೊಡ್ಡ ಸಮಾಜಕ್ಕೆ ಸರ್ಕಾರದ ನಿರ್ಲಕ್ಷದಿಂದ ಕಾಮಗಾರಿ ಪೂರ್ಣವಾಗಿಲ್ಲ. ಹಾಲಿ ಶಾಸಕರಾದ ಕರುಣಾಕರೆಡ್ಡಿ ಅನುದಾನದಲ್ಲಿ ಅಥವಾ ಸಮಾಜವೇ ದೇಣಿಗೆ ಸಂಗ್ರಹಿಸಿ ಈ ವರ್ಷ ಪೂರ್ಣಗೊಳಿಸುತ್ತೇವೆ ಎಂದರು.
ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಹಾಗೂ ದೇವೇಂದ್ರಪ್ಪ ಡೊಳ್ಳು ಬಾರಿಸಿ ಸಮಾಜ ಬಂಧುಗಳಿಗೆ ಪ್ರೋತ್ಸಹಿಸಿದರು. ಹೊಸಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತದ ಮೂಲಕ ಹಡಗಲಿ ರಸ್ತೆಯ ಗುಡಿಕೋಟೆ ಕೇರಿವರೆಗೂ ಮೆರವಣಿಗೆ ತೆರಳಿತು.
ಸಮಾಜದ ಅಧ್ಯಕ್ಷ ಪರಶುರಾಮಪ್ಪ, ಪುರಸಭೆ ಸದಸ್ಯರಾದ ಅರುಣ ಪೂಜಾರ, ಕೃಷ್ಣಪ್ಪ, ಮ್ಯಾಕಿ ದುರುಗಪ್ಪ ಮುಖಂಡರಾದ ಆಲದಹಳ್ಳಿ ಷಣ್ಮಮುಖಪ್ಪ, ಪಟ್ನಾಮದ ಪರಶುರಾಮ, ದ್ಯಾಮಜ್ಜಿ ಹನುಮಂತಪ್ಪ, ಪೂಜಾರ ರಾಜು, ಮಂಡಕ್ಕಿ ಸುರೇಶ್, ಕೋರಿಶೆಟ್ಟಿ ಉಚ್ಚಂಗೆಪ್ಪ, ಕವಸರ ಬಸವರಾಜ, ಪ್ರಕಾಶ ವಕೀಲರು, ಎಂ ಸಣ್ಣ ಹಾಲಪ್ಪ, ಲೊಕೇಶ, ಪಿ.ವೆಂಕಟೇಶ್, ಕ್ವಾರಿ ದುರುಗಪ್ಪ, ಟಿ.ವೆಂಕಟೇಶ, ಹೆಚ್.ಎ.ವೇಣುಗೋಪಾಲ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ