ಭ್ರಮೆಯಿಂದ ಹೊರಬಂದು ಪಕ್ಷ ಕಟ್ಟೊಣ : ಸತೀಶ್ ಜಾರಕೀಹೊಳಿ

ಹಾವೇರಿ:

     ಇಷ್ಟು ದಿನ ನಾವು ಕಾಂಗ್ರೆಸ್ ಪಕ್ಷ ಎಂದರೆ ಮಾಸ್ ಬೇಸ್ ಪಕ್ಷ ಎಂಬ ಭ್ರಮೆಯಲ್ಲಿ ಕಾಲ ಕಳೆದೇವು. ಆ ಯೋಚನೆಯಿಂದ ಹೊರಬಂದು ಕೆಡರ್ ಬೇಸ್ ಮೂಲಕ ಪಕ್ಷವನ್ನು ಸಂಘಟಿಸಬೇಕು. ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ಹಿನ್ನೇಲೆಯನ್ನು ಮರೆಮಾಚಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪಕ್ಷದ ಮುಖವಾಡ ಕಳಚುವ ಮಟ್ಟಿಗೆ ಪಕ್ಷದ ಕಾರ್ಯಕರ್ತರನ್ನು ನಾವು ತಯಾರಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಬೇಕಾಗಿದೆ. ಸಾಮಾಜಿಕ ನ್ಯಾಯ ತತ್ವವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ವಿಚಾರ ಸಂಕೀರಣಗಳನ್ನು, ತರಬೇತಿಗಳನ್ನು ನಡೆಸುವ ಮೂಲಕ ಪ್ರಬುದ್ಧ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗಿದೆ. ಅಂದಾಗ ಸಾಮಾನ್ಯ ಪ್ರಜೆಗೆ ದೇಶ ಇತಿಹಾಸವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

     ಕಳೆದ ಎರಡು ತಿಂಗಳ ಹಿಂದೆ ನೇಮಕಗೊಂಡಿರುವ ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 7. ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, 8 ಸಾವಿರ ಟವಿಗಳಲ್ಲಿ 4 ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯದಂತೆ ಈ ಸಮಾರಂಭವನ್ನು ಅದ್ದೂರಿಯಾಗಿ ಮಾಡುವ ಚಿಂತನೆ ಇತ್ತು. ಕೊರೊನಾ ಸಂಕಷ್ಟ ಸಮಯದಲ್ಲಿ ಅಂತಹ ಸಮಾರಂಭ ಮಾಡಿದರೆ, ವಿರೋಧಿಗಳ ಬಾಯಿ ತುತ್ತಾಬೇಕಾಗುತ್ತದೆ ಎಂಬ ಕಾರಣದಿಂದ ಹಿರಿಯ ನಾಯಕ ಸಲಹೆ ಮೇರೆ ಬರಿ 200 ಜನರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡಿದೆ.

     ಆದರೆ, ಈ ಸಮಾರಂಭದಲ್ಲಿ ರಾಜ್ಯದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾಗಲಿ ಎಂಬ ಉದ್ಧೇಶದಿಂದ 8 ಸಾವಿರ ಭಾಗದಲ್ಲಿ 8 ಸಾವಿರ ಟಿವಿ ಪರದೇ ಮೇಲೆ ಕಾರ್ಯಕ್ರಮ ನೋಡುವಂತಾಗಲು ಕ್ರಮ ಕೈಗೊಂಡಿದ್ದ ಎಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ 50 ಜನರ ಮಿತಿಯಲ್ಲಿ ಸಮಾರಂಭ ವಿಕ್ಷಣೆ ಮಾಡಬೇಕು. ಈ ರೀತಿ ಮಾಡಿದರೆ ಸುಮಾರು 4 ಜನರು ಟಿವಿ ಪರದೇಯ ಮೇಲೆ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದು ತಿಳಿಸಿದರು.

     ಎರಡು ತಿಂಗಳಿನಿಂದ ನಮ್ಮ ಪಕ್ಷ ಕೊವಿಡ್ ನಲ್ಲಿ ಸಕ್ರೀಯ ಕೆಲಸ ಮಾಡಿದೆ. ಬಿಜೆಪಿ ಸರಕಾರ ಇದ್ದರು, ಅವರಿಗಿಂತ ಹೆಚ್ಚು ಜನರು ಸಂಕಷ್ಟ ದೂರ ಮಾಡಿದ ಕಿರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಮಗೆ ಮೋಟಿವೆಟ್ ಮಾಡಿದಾರೆ. ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅಗತ್ಯ ವಸ್ತುಗಳ ಪೂರೈಸುವ ಕೆಲಸ ಮಾಡಿದ್ದಾರೆ. ಸರಕಾರ ಗನಮ ಸೇಳೆದು ಕೊರೊನಾ ಸಂಕಷ್ಟ ನಿವಾರಿಸುವಂತ ಕೆಲಸ ಮಾಡಿದ್ದಾರೆ. ಜೊತೆಗೆ ಈಗಿರುವ ಅಧ್ಯಕ್ಷರು ತುಂಬಾ ಸಮರ್ಥವಾಗಿದ್ದಾರೆ. ಹಾಗಾಗಿ ಅವರ ಜೊತೆಗೆ ಕೂಡಿ ಕೆಸಲ ಮಾಡಲು ಯಾರು ಯಾರು ಸಮರ್ಥವಾಗಿದ್ದಿರೋ, ಅವರೆಲ್ಲರಿಗೆ ಪಕ್ಷದ ಕಾರ್ಯದಲ್ಲಿ ಸೂಕ್ತ ಸ್ಥಾನಮಾನಗಳ ಸಿಗುತ್ತವೆ. ಆದ್ದರಿಂದ ಹೆಚ್ಚು ಪಕ್ಷ ಸಂಘಟನೆ ಕಾರ್ಯದಲ್ಲಿ ಭಾಗವಹಿಸಲು ಆಧ್ಯತೆ ನೀಡಿ ಎಂದರು.

      ಈ ಸಮಯದಲ್ಲಿ ಮಾಜಿ ಸಚಿವರಾದ ಮನೋಹರ ತಹಶೀಲ್ದಾರ, ಬಸವರಾಜ ಶಿವಣ್ಣನವರ, ಡಿ.ಆರ್.ಪಾಟೀಲ, ಶ್ರೀನಿವಾಸ ಮಾನೆ, ಬಸನಗೌಡ ದೇಸಾಯಿ, ಬಿ.ಎಚ್.ಬನ್ನಿಕೋಡ್, ಎಂ.ಎಂ.ಹಿರೇಮಠ, ಪ್ರಕಾಶ ಹಾದಿಮನಿ, ಟಿ.ಈಶ್ವರ, ಸಂಜೀವ ನೀರಲಗಿ, ಪ್ರೇಮಾ ಪಾಟೀಲ, ಎಸ್ ಎಫ್ ಎನ್ ರಾಜೀಗೌಡ್ರ, ಕೆ.ಆರ್.ಬಸೇಗಣ್ಣಿ, ಪ್ರಭುಗೌಡ ಭಿಷ್ಟನಗೌಡ್ರ ಸೇರಿದಂತೆ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link