ಶಿಗ್ಗಾವಿ :
ಪಟ್ಟಣದ ತಾಲೂಕಾ ಗ್ರಾಹಕರ ಸಗಟು ಮಾರಾಟ ಸಹಕಾರಿ ಸಂಘದ (ಜನತಾ ಬಜಾರ) ಆಡಳಿತ ಮಂಡಳಿಯ ಅದ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ನೂತನ ಅದ್ಯಕ್ಷರಾಗಿ ದಲಿತ ಮುಖಂಡ ಕರೆಪ್ಪ ಕಟ್ಟಿಮನಿ ಆಯ್ಕೆಯಾದರೆ ಉಪಾದ್ಯಕ್ಷರಾಗಿ ಗಣಪತಿ ಗುಣೋಜಿ ಅವಿರೋದ ಆಯ್ಕೆಯಾದ ಕಾರಣ ಸರ್ವ ಸದಸ್ಯ ಮಂಡಳಿ ಆತ್ಮೀಯವಾಗಿ ಸನ್ಮಾನಿಸಿದರು.
ಅದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಕಾಶ ಬಡಿಗೇರ ಮತ್ತು ಕರೆಪ್ಪ ಕಟ್ಟಿಮನಿ ನಾಮಪತ್ರ ಸಲ್ಲಿಸಿದ್ದರು, ನಂತರ ಪ್ರಕಾಶ ಬಡಿಗೇರ ನಾಮಪತ್ರ ವಾಪಸ್ ಪಡೆದ ಕಾರಣ ಕರೆಪ್ಪ ಕಟ್ಟಿಮನಿ ಅದ್ಯಕ್ಷರಾಗಿ ಆಯ್ಕೆಯಾದರೆ ಉಪಾದ್ಯಕ್ಷ ಸ್ಥಾನಕ್ಕೆ ಗಣಪತಿ ಗುಣೋಜಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರೇ ಉಪಾದ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರಿ ಸಂಘದ ಅಭಿವೃದ್ದಿ ಅಧಿಕಾರಿ ನಾಗಪ್ಪ ಕುಮ್ಮೂರ ತಿಳಿಸಿದ್ದಾರೆ.ಸಹಾಯಕ ಅಧಿಕಾರಿಯಾಗಿ ಎಸ್ ವಿ ಮಾಡಳ್ಳಿ, ಮ್ಯಾನೇಜರ್ ಎಂ ಎಫ್ ಶಿರಬಡಿಗಿ ಕಾರ್ಯನಿರ್ವಹಿಸಿದರು.
ಆಡಳಿತ ಮಂಡಳಿ ನಿರ್ದೇಶಕರಾಗಿ ಫಕ್ಕೀರಪ್ಪ ಯಲಿಗಾರ, ಶೇಖಪ್ಪ ಹಾದಿಮನಿ, ನಿಂಗನಗೌಡ ಕಾಡಪ್ಪಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ವೀರಣ್ಣ ಬಡ್ಡಿ, ಸಶಿಧರ ಯಲಿಗಾರ, ರುದ್ರವ್ವ ವಾಲ್ಮೀಕಿ, ಲಲಿತಾ ಹಿರೇಮಠ, ಅಶೋಕ ಕಾಳೆ, ಶಾಂತಪ್ಪ ತಳವಾರ, ಇಬ್ರಾಹಿಂ ಕಳಸಗೇರಿ, ಪ್ರಕಾಶ ಬಡಿಗೇರ, ಆಯ್ಕೆಯಾದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅದ್ಯಕ್ಷ ಕರೆಪ್ಪ ಕಟ್ಟಿಮನಿ ಮಾತನಾಡಿ ಎಲ್ಲರ ಸಹಕಾರವಿದ್ದರೆ ಅಭಿವೃದ್ದಿ ಸಾದ್ಯವಿದೆ ಆದ್ದರಿಂದ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಒಮ್ಮತದ ಅಭಿಪ್ರಾಯದಂತೆ ನಿಶ್ವಾರ್ಥ ಸೇವೇ ಸಲ್ಲಿಸುವುದಾಗಿ ತಿಳಿಸಿದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಎಪಿಎಂಸಿ ಅದ್ಯಕ್ಷ ತಿಪ್ಪಣ್ಣ ಸಾತಣ್ಣವರ, ಮುಖಂಡರಾದ ಹನುಮರೆಡ್ಡಿ ನಡುವಿನಮನಿ, ವೀರೇಶ ಆಜೂರ, ಪಾಲಾಕ್ಷಪ್ಪ ಹಾವಣಗಿ, ಎನ್ ಸಿ ಪಾಟೀಲ, ಡಾ ಮಲ್ಲೆಶಪ್ಪ ಹರಿಜನ, ಭರಮಜ್ಜ ನವಲಗುಂದ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಹನುಮಂತಪ್ಪ ಮಾದರ, ಸಂಗಮೇಶ ಕಂಬಾಳಿಮಠ, ನ್ಯಾಯವಾದಿ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ