ಚಳ್ಳಕೆರೆ
ನಗರದ 8ನೇ ವಾರ್ಡ್ ವ್ಯಾಪ್ತಿಯ ರಹೀಂನಗರದ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕೊರೋನಾ ಪಾಸಿಟಿವ್ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರನ್ನು ಇಲ್ಲಿನ ಹಳ್ಳದಲ್ಲಿಯೇ ಹೂತುಹಾಕಲು ಅವರು ಬಂಧುಗಳು ಪ್ರಯತ್ನಿಸಿದ್ದು, ಸುದ್ದಿ ತಿಳಿದ ರಹೀಂನಗರದ ನೂರಾರು ಜನರು ಮೃತರ ಸಂಬಂಧಿಕರನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡು ವಾಪಾಸ್ ಕಳುಹಿಸಿದ ಘಟನೆ ನಡೆದಿದೆ.
ನಗರದ ಜಾಮೀಯ ಮಸೀದಿ ಅಧ್ಯಕ್ಷ ಅತಿಕೂರ್ ರೆಹಮಾನ್‍ರವರ ಅತ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕೊರೋನಾ ಕೋವಿಡ್ ಸೆಂಟರ್‍ಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಸುಮಾರು 12ರ ಸಮಯದಲ್ಲಿ ಮೃತಪಟ್ಟಿತ್ತಾರೆ.
ಅವರನ್ನು ಇಲ್ಲಿನ ರಹೀಂ ನಗರದ ಹಳ್ಳದಲ್ಲಿ ಹೂತುಹಾಕುವ ಹಿನ್ನೆಲೆಯಲ್ಲಿ ರಾತ್ರಿ ಸಮಯದಲ್ಲಿ ಜೆಸಿಬಿ ಸಹಾಯದಿಂದ ಗುಂಡಿತೋಡುತ್ತಿದ್ದು, ಇದನ್ನು ವೀಕ್ಷಿಸಿದ ನೂರಾರು ಜನರು ಪ್ರಶ್ನಿಸಿದಾಗ ಪ್ರಾರಂಭದಲ್ಲಿ ಅವರಿಂದ ಸೂಕ್ತ ಉತ್ತರ ಬರಲಿಲ್ಲ. ಕೊನೆಗೆ ವಿರೋಧಿಸುವವರ ಗುಂಪು ಹೆಚ್ಚಾದಾಗ ಸ್ವಷ್ಟ ಮಾಹಿತಿ ತಿಳಿದಾಗ ಅಲ್ಲಿನ ಮಹಿಳೆಯರು ಹಾಗೂ ಯುವಕರು ಅತಿಕೂರ್ ರೆಹಮಾನ್ ಹಾಗೂ ಇತರರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗೆ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಜನರ ವಿರೋಧ ಹೆಚ್ಚಾದಾಗ ಆತಂಕಗೊಂಡ ಅತಿಕೂರ್ ರೆಹಮಾನ್ ಮತ್ತು ಸಹಚರರು ತೋಡಿದ್ದ ಏಳು ಅಡಿಯ ಗುಂಡಿಯನ್ನು ಜೆಸಿಬಿ ಸಹಾಯದಿಂದ ಮುಚ್ಚಿ ಅಂತ್ಯಸಂಸ್ಕಾರವನ್ನು ಬೇರೆ ಕಡೆ ಮಾಡುವುದಾಗಿ ತಿಳಿಸಿದ ಅಲ್ಲಿಂದ ಹೊರಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ