ಪಂಜಾಬ್ ಕಾರ್ಯಕ್ರಮ ರದ್ದಾಗೋದಕ್ಕೆ ಕಾರಣ

ಪಂಜಾಬ್:

ಪಂಜಾಬ್ ಕಾರ್ಯಕ್ರಮ ರದ್ದಾಗೋದಕ್ಕೆ ಕಾರಣ ಖಾಲಿ ಕುರ್ಚಿಗಳೇ ಹೊರತು ಭದ್ರತಾ ಲೋಪವಲ್ಲ: ಕಾಂಗ್ರೆಸ್ ಹೇಳಿಕೆ

          ನಿನ್ನೆ ನಡೆಯಬೇಕಿದ್ದ ಪ್ರಧಾನಿಯವರ ಪಂಜಾಬ್ ಕಾರ್ಯಕ್ರಮ ರದ್ದಾಗಿರುವುದಕ್ಕೆ ಭದ್ರತಾ ಲೋಪ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಬಿಜೆಪಿಯ ಹಲವು ನಾಯಕರು ಈ ಘಟನೆಗೆ ಪಂಜಾಬ್ ನ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪಿಸಿದ್ದಾರೆ.

ಈ ಆರೋಪವನ್ನ ಅಲ್ಲಗಳೆದಿರುವ ಕಾಂಗ್ರೆಸ್ ಕಾರ್ಯಕ್ರಮ ರದ್ದಾಗೋದಕ್ಕೆ ಭದ್ರತಾ ಲೋಪವಲ್ಲ ಬದಲಿಗೆ ಪಂಜಾಬ್ ಜನರ ನಿರಾಕರಣೆ ಕಾರಣ ಎಂದಿದೆ‌.

         ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಿರಿಯ ವಕ್ತಾರ ರಂದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರಿಗೆ ಟಾಂಗ್ ಕೊಟ್ಟಿದ್ದಾರೆ.‌

ನಿಮ್ಮ ಪ್ರಧಾನಿಯವರು ರ್ಯಾಲಿಗೆ ಬರದೆ ಹಿಂತಿರುಗಿದ್ದು ಭದ್ರತಾ ಲೋಪದಿಂದಲ್ಲ, ಕಾರ್ಯಕ್ರಮದ ಸ್ಥಳದಲ್ಲಿದ್ದ ಖಾಲಿ ಕುರ್ಚಿಗಳಿಂದ. ಖಾಲಿ ಕುರ್ಚಿಗಳಿರೋ ವಿಡಿಯೋ ಹಂಚಿಕೊಂಡಿರುವ ಸುರ್ಜೇವಾಲಾ, ನಿಮ್ಮ ರೈತವಿರೋಧಿ ನಡವಳಿಕೆಯೆ ಇದಕ್ಕೆ ಕಾರಣ.

ಆತ್ಮಾವಲೋಕನ ಮಾಡಿಕೊಂಡು ಸತ್ಯವನ್ನ ಸ್ವೀಕರಿಸಿ. ನಿಮ್ಮ ತಪ್ಪಿನಿಂದಾಗಿರುವ ಪ್ರಮಾದಕ್ಕೆ ಕಾಂಗ್ರೆಸ್ಸನ್ನ ಆರೋಪಿಸುವುದನ್ನ ನಿಲ್ಲಿಸಿ. ಪಂಜಾಬ್ ನ ಜನತೆ ರ್ಯಾಲಿಯಿಂದ ದೂರ ಉಳಿದು, ನಿಮ್ಮ ಅಹಂಕಾರದ ಆಡಳಿತಕ್ಕೆ ಕನ್ನಡಿ ಹಿಡಿದು ಸತ್ಯದರ್ಶನ‌ ಮಾಡಿಸಿದ್ದಾರೆ ಎಂದಿದ್ದಾರೆ.

ಅಲ್ಲದೆ ಪ್ರಧಾನಿ ಮೋದಿ ಮೊದಲು ಕಾರ್ಯಕ್ರಮದ ಯೋಜನೆಯ ಬೇರೆ ಇತ್ತು ಎಂದಿರುವ ಅವರು, ಪಂಜಾಬ್ ರೈತರು ಮೋದಿ ಭೇಟಿಯನ್ನ ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ.

ಅವರು ಪ್ರತಿಭಟಿಸುತ್ತಿರುವುದಕ್ಕೆ ಕಾರಣ ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ರೈತರ ಮೇಲೆ ಹಾಕಿರುವ ಕ್ರಿಮಿನಲ್ ಕೇಸ್ ಗಳನ್ನ ಹಿಂಪಡೆಯಲು. ಈವರೆಗೂ ಸತ್ತಿರುವ 700 ರೈತ ಕುಟುಂಬಕ್ಕೆ ಪರಿಹಾರ ನೀಡಿ ಎಂಬ ಬೇಡಿಕೆ ಅವರದ್ದು ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap