ಮಾಯಾವತಿಯವರ 63 ನೇ ಹುಟ್ಟುಹಬ್ಬ

ಹಾವೇರಿ :

       ನಗರದ ನೌಕರ ಭವನದಲ್ಲಿ ಅಕ್ಕ ಮಾಯಾವತಿಯವರ 63 ನೇ ಹುಟ್ಟುಹಬ್ಬವನ್ನು ಬಹುಜನ ಸಮಾಜ ಪಕ್ಷದ ವತಿಯಿಂದ ಆಚರಿಸಲಾಯಿತು. ದೇಶಕ್ಕೆ ಅಕ್ಕ ಮಾಯಾವತಿ ತಮ್ಮ ಅಧಿಕಾರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಮಾದರಿ ಆಡಳಿತ ಮಾಡುವ ಮೂಲಕ ಪ್ರಜಾಪ್ರಭುತ್ವದ ಗುರಿ ಉದ್ದೇಶ ಇಡೇರಿಸುವ ಪಯತ್ನ ಮಾಡಿದ್ದು, ನಿರಂತರವಾಗಿ ಎಲ್ಲ ವರ್ಗದ ಜನರ ಏಳಿಗೆಗಾಗಿ ಬಿಎಸ್ಪಿ ಪಕ್ಷದ ಬದ್ದವಾಗಿದೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ ಎಂದು ಬಿಎಸ್‍ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹೇಳಿದರು. ಪ್ರಜಾಪ್ರಭುತ್ವದ ತತ್ವ- ಸಿದ್ದಾಂತಗಳ ಜಾರಿಗಳಿಗಾಗಿ ಬಹುಜನ ಸಮಾಜ ಪಕ್ಷವನ್ನು ಮುನ್ನಡಿಸುವುದು ಅಕ್ಕ ಮಾಯಾವತಿಯವರ ಉದ್ದೇಶವಾಗಿದೆ.

         ದೇಶದ ಮಹನೀಯ ವ್ಯಕ್ತಿಗಳಾದ ಮಹಾತ್ಮ ಪುಲೆ, ಸಾವಿತ್ರಿ ಬಾಯಿ ಪುಲೆ,ತಂದೆ ಪೆರಿಯಾರ್ ರಾಮಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡಯರ್, ಶ್ರೀ ನಾರಾಯಣ ಗುರು,ಬಸವಣ್ಣನವರ,ಡಾ||ಬಿ.ಆರ್ ಅಂಬೇಡ್ಕರ್ ಇವರ ಆದರ್ಶ ಪಾಲನೆಗಾಗಿ ಅಕ್ಕ ಮಾಯಾವತಿ ಶ್ರಮವಹಿಸುತ್ತಿದ್ದಾರೆ. ದೇಶಕ್ಕೆ ಉತ್ತಮ ಆಡಳಿತ ನೀಡುವ ಪಕ್ಷದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಬಿಎಸ್ಪಿ ಪಕ್ಷದ ಕಾರ್ಯ ಯೋಜನೆಗಳೊಂದಿಗೆ ಪ್ರತಿ ಮನೆ ಮನೆಗೆ ತೆರಳಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ಮೂಲಕ ಅವರ ಕೈ ಬಲಪಡಿಸಬೇಕಾಗಿದೆ.

         ಅಕ್ಕ ಮಾಯಾವತಿಯವರಿಗೆ ದೇವರು ಆರೋಗ್ಯ ಆಯುಷ್ಯ ನೀಡಲಿ, ನಮ್ಮೇಲ್ಲರ ಧ್ವನಿಯಾಗಿ ಕೆಲಸ ಮಾಡುವ ರಾಜಕೀಯ ಬಲ ಬರಲಿ ಎಂದು ಆಶೋಕ ಮರೆಣ್ಣನವರ ಹಾಗೂ ಜಿಲ್ಲಾ ಸಮಿತಿ ವತಿಯಿಂದ ಹುಟ್ಟು ಹಬ್ಬದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಎನ್‍ಟಿ ಮಂಜುನಾಥ. ವಿಜಯಕುಮಾರ ವ್ಹಿ. ಎಂಕೆ ಮಖಬೂಲ್. ಟಿ ಶಿವಕುಮಾರ.ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರೂಪಾ ಎನ್.ರೇಖಾ ಮಂಗಳೂರ.ಅಬ್ದುಲ್ ಖಾದರ ಧಾರವಾಡ.ರಾಘವೇಂದ್ರ ಕಲಾಲ. ಶರೀಪ್ ಮಂಗಳೂರ.ರಘು ಮಾಳಗಿ.ಪ್ರಲ್ಹಾದ್ ಕುಲಕರ್ಣಿ. ಶಂಭುಲಿಂಗ ಹನಗೊಡಿಮಠ.ಶಿವಾಜಿ ದೇವಿಹೊಸೂರ.ನೀಲಮ್ಮ.ಶಶಿಕಲಾ. ಮಾರುತಿ ಅಕ್ಕಿಆಲೂರ.ನಾಗರಾಜ ಬ್ಯಾಡಗಿ ಸೇರಿದಂತೆ ಪಕ್ಷದ ಜಿಲ್ಲಾ, ತಾಲೂಕ ಪದಾಧಿಕಾರಿಗಳು,ವಿವಿಧ ಘಟಕಗಳ ಮುಖಂಡರು,ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap