ಹರಪನಹಳ್ಳಿ:
`ನಾನು ದೇಶ ಕಾಯುವ ವಾಚಮನ್ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಮೊದಲು ರೈತರ ಹಿತ ಕಾಪಾಡುವ ವಾಚಮನ್ ಎಂದು ಸಾಬೀತುಪಡಿಸಲಿ’ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಉಮೇಶಬಾಬು ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹದಾಯಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿರುವ ಪ್ರಧಾನಿ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ರಾಜ್ಯವನ್ನು ನಿರ್ಲಕ್ಷ್ಯ ಮಾಡಿ ರಾಜ್ಯ ರಾಜ್ಯಗಳ ಮಧ್ಯೆ ಕಿತ್ತಾಡುವಂತೆ ಮಾಡಿದ್ದಾರೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮೋದಿ ತಾನು ದೇಶ ಕಾಯುವ ಯೋಧ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಸಿ ಘಟಕದ ಅಧ್ಯಕ್ಷ ಹಲಗೇರಿ ಮಂಜಪ್ಪ ಮಾತನಾಡಿ, `ಹಿಂದಿನ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಸಮಬಾಳು, ಸಮಪಾಲು ತತ್ವದಡಿ ರಾಜ್ಯದ ಅಭಿವೃದ್ಧಿ ಶ್ರಮಿಸಿದೆ. ಅಲ್ಪಸಂಖ್ಯಾತರು, ಅಹಿಂದ ವರ್ಗದ ಪ್ರತಿಯೊಂದು ಜನಾಂಗವೂ ನಿಷ್ಠೆಯಿಂದ ಮಂಜಪ್ಪ ಅವರನ್ನು ಬೆಂಬಲಿಸಬೇಕು’ ಎಂದರು.
ಕಾಂಗ್ರೆಸ್ ಓಬಿಸಿ ಘಟಕ ಜಿಲ್ಲಾಧ್ಯಕ್ಷ ನಲ್ಕುಂದ ಹಾಲೇಶ ಮಾತನಾಡಿ, ಅಹಿಂದ ವರ್ಗದ ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಹಣ ಇಲ್ಲ ಇರಬಹುದು, ಆದರೆ ಜನಬಲ ಗಟ್ಟಿಗೊಳ್ಳಬೇಕು. ಉಳ್ಳವರಿಗೆ ಪಾಠ ಕಲಿಸುವು ಚುನಾವಣೆ ಇದಾಗಬೇಕು ಎಂದು ಹೇಳಿದರು.
ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಲತಾ ಮಲ್ಲಿಕಾರ್ಜುನ, ಒಬಿಸಿ ಮಹಿಳಾ ರಾಜ್ಯ ಕಾರ್ಯದರ್ಶಿ ಗೀತಾ,
ಜಿಲ್ಲಾ ಪಂಚಾಯಿತಿ ಸದಸ್ಯ ಪರಶುರಾಮಪ್ಪ, ಒಬಿಸಿ ಘಟಕ ತಾಲ್ಲೂಕು ಅಧ್ಯಕ್ಷ ಬಸವರಾಜ್, ಬಳಿಗನೂರು ಪರಶುರಾಮ, ಕಂಚಿಕೆರಿ ಕೆಂಚಪ್ಪ, ಬಸವರಾಜ್ ಮತ್ತೂರು, ಶಂಕರ್, ಗುಡಿ ನಾಗರಾಜ್ ಮಾತನಾಡಿದರು.ಎರಡತ್ತಿನಹಳ್ಳಿ ಟಿ.ಮಂಜುನಾಥ, ಎಂ.ಶಿವಕುಮಾರ, ರಮೇಶ್, ಜಮ್ಮನಹಳ್ಳಿ ನಾಗರಾಜ, ಶೇಷಣ್ಣ, ಮಂಜಪ್ಪ, ಬೀರಪ್ಪ, ಕೆ.ಗೋಣೆಪ್ಪ, ಶಿವರಾಜ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/18-HRP-1.gif)