ಚಿತ್ರದುರ್ಗ:
ಟಿ.ನುಲೇನೂರು ಗ್ರಾ.ಪಂ.ಅಧ್ಯಕ್ಷರಾಗಿ ಮಹಾಂತೇಶ್ ತೊಡರನಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಂಚಾಯಿತಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಮಹಾಂತೇಶ್ ತೊಡರನಾಳ್ ಅವಿರೋಧ ಆಯ್ಕೆಯನ್ನು ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಘೋಷಿಸಿದರು.
ಗ್ರಾಮ ಪಂ.ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಮಹಾಂತೇಶ್ ತೊಡರನಾಳ್ ಒಮ್ಮತದಿಂದ ಎಲ್ಲರೂ ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಬೇಸಿಗೆ ಆರಂಭಗೊಂಡಿರುವುದರಿಂದ ಟಿ.ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದ್ದು, ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಟ್ಯಾಂಕರ್ ಮೂಲಕವಾಗಲಿ ನೀರು ಪೂರೈಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಹೊಳಲ್ಕೆರೆ ಶಾಸಕರು, ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರ ವರ್ಗದವರ ಸಲಹೆ ಸೂಚನೆ ಮೇರೆಗೆ ಎಲ್ಲರ ಮಾರ್ಗದರ್ಶನ ಪಡೆದು ಗ್ರಾಮಗಳಲ್ಲಿರುವ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.ತಹಶೀಲ್ದಾರ್ ನಾಗರಾಜ್ ಮಾತನಾಡಿ ಬ್ರಹ್ಮಪುರ, ಬಂಜಗೊಂಡನಹಳ್ಳಿ, ತೊಡರನಾಳ್, ತಿರುಮಲಾಪುರ, ನುಲೇನೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಜೊತೆ ಮಾತನಾಡಿ ಅವಶ್ಯಕತೆಯಿದ್ದಲ್ಲಿ ಬೋರ್ ಕೊರೆಸಿ ಕುಡಿಯುವ ನೀರು ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಮ್ಮ, ಪಿ.ಡಿ.ಓ.ದೀಪ, ಕಾರ್ಯದರ್ಶಿ ಬಸವರಾಜಪ್ಪ, ನಿಕಟಪೂರ್ವ ಅಧ್ಯಕ್ಷ ಕೆ.ಜಯಪ್ಪ, ಸದಸ್ಯರಾದ ದಗ್ಗೆಶಿವಪ್ರಕಾಶ್, ನುಲೇನೂರು ಶಂಕರಪ್ಪ, ಕವಿತ ಶೇಖರ್, ರತ್ನಮ್ಮ, ರಾಜಪ್ಪ, ಮಂಜಮ್ಮ, ಮಂಜುನಾಥ್, ಕೌಸಲ್ಯಮ್ಮ, ರಂಗಪ್ಪ, ಸುನಿತ, ಮುಖಂಡರುಗಳಾದ ಟಿ.ಎಸ್.ರಾಜಪ್ಪ, ಮಲ್ಲಿಕಾರ್ಜುನಪ್ಪ, ರವಿಕುಮಾರ್, ಸಿದ್ದಪ್ಪ, ಈರಣ್ಣ, ಕುಮಾರಣ್ಣ ಸಹಾಯಕ ಚುನಾವಣಾಧಿಕಾರಿ ಸನಾವುಲ್ಲಾ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ