ಬಿಜೆಪಿ ಮೈತ್ರಿ ಕೂಟಕ್ಕೆ ಆಘಾತ ನೀಡಲು ಮುಂದಾದ ಮತ್ತೊಂದು ಪಕ್ಷ ….???

ಮಿಜೋರಾಂ :

           ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆಯಷ್ಟೇ ಪ್ರಸ್ತುತ ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯದೇ ಹೋದಲ್ಲಿ ಎನ್ ಡಿ ಎ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯಲು ಹಿಂದೆ ಮುಂದೆ ಸಹ ನೋಡುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಜೊರಮತಂಗ ಅವರು ಹೇಳಿದ್ದಾರೆ.

            ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಕಾಯ್ದೆಯನ್ನು ಕೈ ಬಿಡಲು ಪಕ್ಷ ಎಲ್ಲಾ ರೀತಿಯ ಯತ್ನವನ್ನು ಮಾಡಲಿದೆ. ಕೇಂದ್ರ ಈ ಮಸೂದೆಯನ್ನು ಹಿಂಪಡೆಯದೇ ಹೋದಲ್ಲಿ ಮೈತ್ರಿಯನ್ನು ವಾಪಸ್ ಪಡೆಯಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. 

           2014 ಡಿಸೆಂಬರ್ 31ಕ್ಕಿಂತ ಮೊದಲು  ಧಾರ್ಮಿಕ ಕಾರಣಗಳಿಂದ ಪಾಕ್, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ  ವಲಸೆ ಬಂದ ಮುಸ್ಲೀಮೇತರರಿಗೆ ಭಾರತೀಯ ಪೌರತ್ವವನ್ನು ನೀಡುವ ಮಸೂದೆಯನ್ನು ಲೋಕಸಭೆ ಜನವರಿ 8ರಂದು ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಅಂಗೀಕರಿಸಿತು. ಈ ಮಸೂದೆಗೆ ಇದೀಗ ಎಮ್ ಎನ್ ಎಫ್ ತೀವ್ರ ವಿರೋಧ ವ್ಯಕ್ತಪಡಿಸಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link