ಸಿರುಗುಪ್ಪ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಿದ್ಧತೆ ಆರಂಭ

ಸಿರುಗುಪ್ಪ 

       10ನವೆಂಬರ್ ರಂದು ಮೈಸೂರು ಹುಲಿ ಶೇರ್-ಎ-ಹಿಂದ್ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತ್ಯುತ್ಸವ ಆಚರಣೆ ಪ್ರತಿ ವರ್ಷದಂತೆ ಈ ಸಲವೂ ಸಹ ಶ್ರದ್ಧಾ ಸಡಗರ ಸಂಭ್ರಮ ಹಾಗೂ ಶಾಂತಿ ರೀತಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಈದ್ ಗಾ- ಖಬರಸ್ಥಾನ್ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳು ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದು

       ಖಾಜಿ ಸೈಯದ್ ಅಬ್ದುಲ್ ಖಾದ್ರಿ ಹಾಗೂ ಎಲ್ಲಾ ಮುಸ್ಲಿಂ ಮುಖ್ಯಸ್ಥರ ಸಮ್ಮುಖದಲ್ಲಿ ಸುದೀರ್ಘವಾಗಿ ಚರ್ಚಿಸಿ ನಗರಸಭಾ ಸದಸ್ಯ ಕೆ.ಗೌಸ್ ಸಾಬ್,ಮಾಜಿ ಸದಸ್ಯ ಸಲ್ವಾದ್,ಹಂಡಿ ಹಾಶಿಂ, ಮುಲ್ಲಾ ಬಾಬು,ಎಂ.ರಹಮತುಲ್ಲಾ,ಜಿಕ್ರಿಯಾ ಮತ್ತು ಇತರರು ಮಾತನಾಡಿ ಸರಕಾರದಿಂದ ಆಚರಿಸುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ಜಿಲ್ಲಾಧಿಕಾರಿ,ತಹಸೀಲ್ದಾರ್, ಅವರು ಪೂರ್ವಭಾವಿ ಸಿದ್ಧತೆ ಸಭೆ ತೀರ್ಮಾನಿಸಿರುವುದಿಲ್ಲ

        ಆದರೂ ಸಮಾಜದ ಬಾಂಧವರು,ಯುವಕರು,ಕರೆದು ಚರ್ಚಿಸಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ, ಈದ್- ಮಿಲಾದುನ್-ನಬಿ “ಸೊ” ಸಂದರ್ಭದಲ್ಲಿ ಸರ್ವರ ಸಮಾಜದ ಬಾಂಧವರನ್ನು ಆಹ್ವಾನಿಸಲು ಅದೇ ರೀತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಏಪ್ರಿಲ್ ನಲ್ಲಿ ಜರುಗುವ ಜಯಂತಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆಯು ಮತ್ತು ತಾಲ್ಲೂಕಿನಿಂದ ಮುಸ್ಲಿಂ ಬಾಂಧವರನ್ನು ಆಹ್ವಾನಿಸಲು ಅನ್ನದಾನ ಪ್ರಸಾದ ಸಂಪರ್ಕಿಸುವುದು ವಿತರಣೆ ಕಾರ್ಯಕ್ರಮ ಏರ್ಪಡಿಸಲು ನಿರ್ಣಯಿಸಿದರು.ಹಾಜಿ ಎಚ್.ಹುಸೇನ್ ಬಾಷಾ, ಎ.ಅಬ್ದುಲ್ ನಬಿ,ಹಮಿದ್ ಸಾಬ್, ಅಜೀಮ್, ಸುಭಾನ್,ಮೆಹಮುದ್, ಹಾರೂನ್ ಸಾಬ್,ಜಿನ್ನಾ ಸಾಬ್, ಗೌಸುಲ್‍ಅಜಂ, ಜಿ.ಜಿಕ್ರಿಯಾ,ಎಲ್ಲಾ ಮಸೀದಿಗಳ ಮುಖ್ಯಸ್ಥರು ಸಲಹೆ ಸೂಚನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link