ಪ್ರಗತಿ ಪರಿಶೀಲನಾ ಸಭೆ

ಹೂವಿನಹಡಗಲಿ

       ಬರಗಾಲದ ಮಧ್ಯೆ ನಾವುಗಳೆಲ್ಲರೂ ಇದ್ದು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನತೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕದ ಜೊತೆಗೆ ನೀರಾವರಿಗೂ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸುವಂತೆ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಸೂಚನೆ ನೀಡಿದರು.

        ತಾ.ಪಂ.ಯ.ರಾಜೀವಗಾಂಧಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಕಷ್ಟದ ಸ್ಥಿತಿಯಲ್ಲಿರುವ ರೈತರಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಈಗಾಗಲೇ ಕರೆಗಳಿಗೆ ನೀರು ತುಂಬಿಸಿದ್ದು, ಜನ-ಜಾನುವಾರುಗಳಿಗೆ ಅನುಕೂಲವಾಗುವ ಹಾಗೆ ಕಾಲುವೆಗಳ ಮೂಲಕ ನೀರು ಹರಿಸಿ ಅನುಕೂಲ ಕಲ್ಪಿಸಿಕೊಡುವನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದರು.

        ತಾಲೂಕಿನ ಕೆ.ಎಂ.ತಾಂಡದ ಕೆರೆಗೆ ಬೂಸ್ಟರ್ ಮಾದರಿಯಲ್ಲಿ ನೀರು ಹರಿಸುವಂತೆ ತಿಳಿಸಿದ ಸಚಿವರು, ಸೋವೇನಹಳ್ಳಿ ಕೆರೆಗೆ ಕೋಡಿಕಟ್ಟುವ ಕಾಮಗಾರಿ ಪೂರೈಸಿ ನೀರು ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿ, ಹೆಚ್ಚುವರಿಯಾಗಿ ಮಂಜೂರಾಗಿರುವ ಜಿ.ಜಿ.ತಾಂಡದ ಕೆರೆಗೆ ಖಾಸಗೀ ರೈತರ ಪಂಪಸೆಟ್‍ನಿಂದ ಪೈಪ ಅಳವಡಿಸಿ ನೀರು ಹರಿಸುವುದರ ಜೊತೆಗೆ ದಾಸನಹಳ್ಳಿ, ಬೂದನೂರು ಕರೆಗೆ 50 ಲಕ್ಷ ರೂ ಅನುದಾನ ನೀಡಿದ್ದು, ಹುಲಿಗುಡ್ಡದ ಪಕ್ಕದಲ್ಲಿ ದೊಡ್ಡ ದಾದಾ ವಾಲ್ ಕಟ್ಟಿ ನೀರು ಶೇಖರಿಸಲು 30 ಕೋಟಿ ರೂ ತೆಗೆದಿರಿಸಲಾಗಿದ್ದು, 12 ಕೋಟಿ ರೂ ವೆಚ್ಚದಲ್ಲಿ ಮಾಗಳ-ಹಿರೇಹಡಗಲಿ, ಐಯ್ಯನಹಳ್ಳಿ ಹಗರನೂರಿಗೆ ಕುಡಿಯುವ ನೀರು ಪೂರೈಸಿ ಸಾಧ್ಯವಾಧಷ್ಟು ಮುಂದಿನ ಹೊಸ ಕೆರೆ ನಿರ್ಮಾಣ ಮಾಡುವುದಕ್ಕೆ ಒತ್ತು ನೀಡುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಹಳ್ಳಗಳಿಗೆ ಸರಣಿ ಚೆಕ್‍ಡ್ಯಾಂ ನಿರ್ಮಿಸಿ, ಅಂತರ್ಜಲ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಕುಡಿಯುವ ನೀರಿನ ನಿರ್ವಹಣೆಗೆ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸರ್ಕಾರವು ತಾಲೂಕಿನ ತಹಶೀಲ್ದಾರ್ ಜೊತೆಗೆ ಒಂದು ಕೋಟಿ ರೂಗಳನ್ನು ಎರಡು ಹಂತದಲ್ಲಿ ಜಮಾ ಮಾಡಲಿದ್ದು, ಅಧಿಕಾರಿಗಳು ತಹಶೀಲ್ದಾರರ ನಿಕಟ ಸಂಪರ್ಕ ಹೊಂದಿ ಸಮಸ್ಯೆ ನಿವಾರಣೆಗೆ ಸಹಕರಿಸಬೇಕೆಂದರು.
ಹಡಗಲಿ ವಿಧಾನಸಭಾ ಕ್ಷೇತ್ರದ ಹಗರಿಬೊಮ್ಮನಹಳ್ಳಿ ತಾಲೂಕಿನ 59 ಹಳ್ಳಿಗಳಿಗೆ ಕೆರೆಗಳ ಮೂಲಕ ನೀರು ಹರಿಸಲು 44 ಕೋಟಿ ರೂ ಮಂಜೂರಾಗಿದ್ದು 15 ದಿವಸದೊಳಗಾಗಿ ಎಲ್ಲಾ ಹಳ್ಳಿಗಳ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

        ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಜನರಿಂದ ದೂರವಿರದೇ ಗ್ರಾ.ಪಂ.ಯ ಕೇಂದ್ರ ಸ್ಥಾನದಲ್ಲಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಕಛೇರಿಯಲ್ಲಿ ಖಡ್ಡಾಯವಾಗಿ ತಾವು ನಿರ್ವಹಿಸುವ ಕೆಲಸದ ದಿನಚರಿ ಹಾಗೂ “ಚಲನ-ವಲನ ರಿಜಿಸ್ಟರ್” ನಿರ್ವಹಣೆ ಮಾಡುವಂತೆ ಸಚಿವರು ಸೂಚನೆ ನೀಡಿದರು.

      ಒಟ್ಟಾರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಒತ್ತು ನೀಡಿ, ಅಧಿಕಾರಿಗಳು ಪೋನ್ ಸ್ವೀಚ್‍ಆಫ್ ಮಾಡದೇ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.

         ತಾ.ಪಂ. ಅಧ್ಯಕ್ಷೆ ಕೆ.ಶಾರದಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ತಾ.ಪಂ. ಇ.ಓ. ಯು.ಎಚ್.ಸೋಮಶೇಖರ್, ತಹಶೀಲ್ದಾರ್ ಕೆ.ರಾಘವೇಂದ್ರರಾವ್, ಪುರಸಭೆ ಅಧ್ಯಕ್ಷೆ ಮರ್ದಾನ್‍ಬೀ, ಹೆಚ್.ಬಿ.ಹಳ್ಳಿ ತಾ.ಪಂ. ಇ.ಓ. ಮತ್ತು ತಹಶೀಲ್ದಾರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap