ಎಸ್‍ಯುಸಿಐ(ಸಿ) ಅಭ್ಯರ್ಥಿಯಿಂದ ಮತ ಯಾಚನೆ

ದಾವಣಗೆರೆ:

        ಎಸ್.ಯು.ಸಿ.ಐ. (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಮಧು ತೊಗಲೇರಿಯವರು ನಗರ ವಿವಿಧ ಪ್ರದೇಶಗಳಲ್ಲಿ ಮತ ಯಾಚನೆ ನಡೆಸಿದರು.

        ನಗರದ ಅಖ್ತರ್ ರಜ್ಹಾ ಸರ್ಕಲ್, ಬಾಷಾ ನಗರ, ಕಬ್ಬೂರು ಬಸಪ್ಪ ನಗರ, ಶೇಖರಪ್ಪ ನಗರ, ಶಾಂತಿ ನಗರ, ವಿನಾಯಕನಗರ, ಲೆನಿನ್ ನಗರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಎಸ್‍ಯುಸಿಐ ಅಭ್ಯರ್ಥಿ ಮಧು ತೊಗಲೇರಿ ಮಾತನಾಡಿ, ಸ್ವತಂತ್ರ ನಂತರದ ಸುಮಾರು 70 ವರ್ಷಗಳ ಕಾಲ ದೇಶದಲ್ಲಿ ಬಿ.ಜೆ.ಪಿ., ಕಾಂಗ್ರೆಸ್ ಇನ್ನಿತರೆ ಪಕ್ಷಗಳು ಆಡಳಿತ ನಡೆಸಿದರೂ ಜನರ ಸಮಸ್ಯೆಗಳು ಬಗೆಹರಿದಿಲ್ಲ. ಬಡತನ, ನಿರುದ್ಯೋಗ, ಮಹಿಳಾ ದೌರ್ಜನ್ಯ, ರೈತರ ಸಮಸ್ಯೆ, ಕಾರ್ಮಿಕರ ಬವಣೆಗಳು ಹೆಚ್ಚುತ್ತಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಬಂಡವಾಳಶಾಹಿಗಳ ಸೇವೆ ಮಾಡುತ್ತಾ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ ಎಂದು ಆರೋಪಿಸಿದರು.

         ದಾವಣಗೆರೆ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರರವರ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ನೀರಾವರಿ ಯೋಜನೆ ಕೊರತೆ, ಯುವಕರಿಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಶ್ರಮಾಧಾರಿತ ಕಾರ್ಖಾನೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಹಲವಾರು ಸಮಸ್ಯೆಗಳು ಕಾಡುತ್ತಿವೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಜನ ಹೋರಾಟಗಳನ್ನು ಕಟ್ಟುತ್ತಿರುವ ಎಸ್.ಯು.ಸಿ.ಐ. (ಕಮ್ಯುನಿಸ್ಟ್) ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

       ಈ ಸಂದರ್ಭದಲ್ಲಿ ಎಸ್.ಯು.ಸಿ.ಐ. (ಕಮ್ಯುನಿಸ್ಟ್)ನ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಜಿಲ್ಲಾ ಸಮಿತಿಯ ಸದಸ್ಯರಾದ ರಾಜು ಟಿ.ವಿ.ಎಸ್., ಪರಶುರಾಮ, ನಾಗಜ್ಯೋತಿ, ಭಾರತಿ, ಸ್ಮೀತಾ, ತಿಪ್ಪೇಸ್ವಾಮಿ, ಕಾವ್ಯ, ಸ್ವಪ್ನ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link