ಹರಪನಹಳ್ಳಿ:
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ತೊಗರಿಕಟ್ಟೆ ಕ್ಷೇತ್ರದ ಹೋಳೆಯಾಚೆ ಬೀರಪ್ಪ, ಉಪಾಧ್ಯಕ್ಷರಾಗಿ ಬಿ.ಆರ್.ನಳಿನಾ ಅವರು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಎಪಿಎಂಸಿಯ ಈ ಹಿಂದಿನ ಅಧ್ಯಕ್ಷರಾಗಿ ಚಿಗಟೇರಿ ಡಿ.ಜಂಬಣ್ಣ ಹಾಗೂ ಉಪಾಧ್ಯಕ್ಷ ಬೆನಕಶೆಟ್ಟಿ ಅಜ್ಜಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬೀರಪ್ಪ ಹಾಗೂ ನಳಿನಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಚುನಾವಣಾಧಿಕಾರಿ, ತಹಶೀಲ್ದಾರ ಡಾ. ಮಧು ಅವಿರೋಧ ಎಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಭೀರಪ್ಪ, ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನನ್ನ ಆಯ್ಕೆಗೆ ಆಶೀರ್ವಾದಿಸಿದ್ದಾರೆ. ಎಪಿಎಂಸಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನೂತನ ಕುರಿ ಸಂತೆ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ಕುರಿ ಸಂತೆ ಆರಂಭಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಪಿಎಂ ಸಿ ಕಾರ್ಯದರ್ಶಿ ಶಿಲ್ಪಾಶ್ರೀ, ಜಿಲ್ಲಾ ಪಂಚಾಯಿತಿ ಎಚ್. ಬಿ.ಪರಶುರಾಮಪ್ಪ, ಮಾಜಿ ಅಧ್ಯಕ್ಷ ಜಂಬಣ್ಣ, ಸದಸ್ಯರಾದ ಪಿ.ಸುರೇಶ, ಡಿ.ಅಶೋಕ, ತವರ್ಯಾ ನಾಯ್ಕ, ಬಿ.ರಾಮಣ್ಣ, ಮುದಗಲ್ಲ ಗುರುನಾಥ, ಮುಖಂಡರಾದ ಬೇಲೂರು ಅಂಜಪ್ಪ, ಪೋಮ್ಯಾ ನಾಯ್ಕ, ಎಚ್.ಮಂಜುನಾಥ್, ಹಲಗೇರಿ ಮಂಜಪ್ಪ, ಪ್ರೇಮ್, ಬರಮನಗೌಡ, ಕುಲಮಿ ಅಬ್ದುಲ್, ಓ ರಾಮಣ್ಣ, ಮುತ್ತಗಿ ಜಂಬಣ್ಣ, ಲಾಟಿ ದಾದಾಪೀರ್ ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
