ಸಮಾಜದ ಅಭಿವೃದ್ಧಿಗಿಂತ ಸ್ವಾರ್ಥಹಿತಾಸಕ್ತಿಯೇ ಹೆಚ್ಚಾಗಿದೆ “: ಕಾನನಕಟ್ಟೆ ಪ್ರಭು

ಜಗಳೂರು :

      ತಾಲ್ಲೂಕಿನಲ್ಲಿ ಕತ್ತಲಿನಲ್ಲಿದ್ದ ನಾಯಕ ಸಮಾಜವನ್ನು ಬೆಳೆಕಿನತ್ತ ತಂದ ಕೀರ್ತಿ ದಿ||ತಿಪ್ಪನಾಯಕ ಅವರಿಗೆ ಸಲ್ಲುತ್ತದೆ. ಸಮಾಜದ ಅಭಿವೃದ್ಧಿಗಿಂತ ಸ್ವಾರ್ಥಹಿತಾಸಕ್ತಿಯೇ ಹೆಚ್ಚಾಗಿದ್ದು ನಾಯಕರ ಸಂಘವನ್ನು ಕೆಲವರು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆಂದು ನಾಯಕ ಸಮಾಜದ ಮುಖಂಡ ಕಾನನಕಟ್ಟೆ ಪ್ರಭು ಆರೋಪಿಸಿದರು.

       ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾಯಕ ಸಮಾಜವನ್ನು ಅಂದು 1971ನೇ ಸಾಲಿನಲ್ಲಿ ಕಾನನಕಟ್ಟೆ ತಿಪ್ಪನಾಯಕ ಅವರು ಜಿಲ್ಲಾ ನೊಂದಣಿ ಕಛೇರಿಯಲ್ಲಿ ನೊಂದಣಿಮಾಡಿಸಿ ಕಟ್ಟಿ ಬೆಳೆಸಿದ್ದಾರೆ ಕಾಲ್ನಡಿಗೆ ಮುಖಾಂತರ ಪ್ರತಿಹಳ್ಳಿಗಳನ್ನು ಸಂಪರ್ಕಿಸಿ ಸಮುದಾಯವನ್ನು ಸಂಘಟಿಸಿ ಸಮಾನ ಮನಸ್ಕರೊಂದಿಗೆ ಸೇರಿ ಸಂಘವನ್ನು ಕಟ್ಟಿದರು ಇದಲ್ಲದೆ ಅತ್ಯಂತ ಬಡನತಿಂದ ಕೂಡಿದ್ದರು ಸಮಾಜಕ್ಕೊಂದು ಕೊಡುಗೆಯನ್ನು ನೀಡಬೇಕೆನ್ನುವ ಉದ್ದೇಶದಿಂದ ತಮ್ಮ ಸ್ವಂತ ಜಮೀನಿನಲ್ಲಿ ಪದವಿ ಕಾಲೇಜನ್ನು ನಿರ್ಮಿಸಿ ವಿದ್ಯಾಧಾನವನ್ನು ಮಾಡಿದರು ಆದರೆ ಇಂದು ನಾಯಕರ ಸಂಘ ಇವರ ಸಾಧನೆಯನ್ನು ಮರೆತುಕುಂತಿದೆ ಸಂಕಷ್ಟದಲ್ಲಿದ್ದ ತಿಪ್ಪನಾಯಕ ಅವರ ಕುಟುಂಬವನ್ನು ಬೆದರಿಸಿ ತಮ್ಮ ಸ್ವಂತ ಜಮೀನಿನ ಆಸ್ತಿಯನ್ನು ಕಬಳಿಸಲು ಹೊರಟಿದ್ದಾರೆಂದು ಅವರು ಹೇಳಿದರು.

        ಯಾವುದೇ ಕಾರಣಕ್ಕೂ ತಿಪ್ಪನಾಯಕ ಅವರ ಕ್ರಯದ ಸ್ವಂತ ಜಮೀನನ್ನು ನಾಯಕ ಸಮಾಜದ ಸಂಘಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಈಗಾಗಲೇ ನ್ಯಾಯಾಲದ ತೀರ್ಪುಸಹ ನಮ್ಮಂತೆಹೆ ಆಗಿದೆ ಸಂಘವು ಕೂಡಲೇ ನಮ್ಮ ಜಮೀನನ್ನು ಬಿಟ್ಟು ತೆರಳಬೇಕು ಯಾರೋ ಮಾಡಿದ ಆಸ್ತಿಯನ್ನು ತಮ್ಮದೆಂದು ಹೇಳಿಕೊಳ್ಳುವ ನಾಯಕ ಸಂಘಕ್ಕೆ ನೌತಿಕತೆಯಿಲ್ಲ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನಮ್ಮ ಬಳಿ ಇದ್ದು ನ್ಯಾಯಾಲಯದ ಮುಖಾಂತರ ನಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳುತ್ತೇವೆಂದರು.

        ಹಾಲಿ ಮತ್ತು ಮಾಜಿ ಶಾಸಕರು ನೊಂದಣಿಯಿಲ್ಲದ ಸಂಘಕ್ಕೆ ಅಧಿಕಾರಕ್ಕಾಗಿ ನಾನು ಸಂಸ್ಥೆಗೆ ಗೌರವಾಧ್ಯಕ್ಷರುಗಳು ಎಂದು ಹೇಳಿಕೊಳ್ಳುತ್ತಾರೆ ಆದರೆ ಇವರುಗಳ ನಾಯಕ ಸಮಾಜಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ ಹಾಗೂ ನಾಯಕ ಸಂಘಕ್ಕೆ ಈ ಹಿಂದೆ ಕಾರ್ಯದರ್ಶಿಗಳಿದ್ದ ಕೆ.ಪಿ.ಪಾಲಯ್ಯ ಮತ್ತು ಬಿ.ಲೋಕೇಶ್ ಪ್ರಸ್ತುತ ಕಾರ್ಯದರ್ಶಿ ಸೂರಲಿಂಗಪ್ಪ ಅವರ ಕೊಡುಗೆಗಳು ಅಷ್ಟಕ್ಕಷ್ಟೆ ಕೇವಲ ತಮ್ಮ ಸ್ವಾರ್ಥಸಾಧನೆಗಳಿಗಾಗಿ ಸಂಘವನ್ನು ಮತ್ತು ಕಾಲೇಜನ್ನು ಬಳಸಿಕೊಳ್ಳುತ್ತಿದ್ದಾರೆ ಸಮಾಜವನ್ನು ಮತ್ತು ಸಂಘವನ್ನು ಕಟ್ಟಿಬೆಳೆಸಿದ ದಿ||ತಿಪ್ಪನಾಯಕ ಅವರ ಕುಟುಂಬಕ್ಕೆ ಕನಿಷ್ಠ ಸ್ವಾಂತ್ವಾನದ ಮಾತು ಹೇಳಿದ ಇವರು ಅವರನ್ನು ಮತ್ತು ಕುಟುಂಬವನ್ನು ಅತ್ಯಂತ ನಿರ್ಲಕ್ಷ್ಯತೆಯಿಂದ ಕಂಡಿದ್ದಾರೆ ಯಾವುದೇ ಕಾರಣಕ್ಕೂ ತಿಪ್ಪನಾಯಕ ಅವರ ಕ್ರಯದ ಆಸ್ತಿಯನ್ನು ಸಮಾಜಕ್ಕೆ ಕೊಡಲು ಸಾಧ್ಯವಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link