ಹಾನಗಲ್ಲ :
ರೈತನ ತಪ್ಪಿಲ್ಲದೆ ಹೆಸ್ಕಾಂ ಜಾಗೃತದಳ ಕೃಷಿ ಪಂಪಸೆಟ್ ಬಳಕೆದಾರ ರೈತನಿಗೆ 20 ಸಾವಿರ ರೂ ದಂಡ ಹಾಕಿದ್ದನ್ನು ಖಂಡಿಸಿ ಹಾನಗಲ್ಲ ಹೆಸ್ಕಾಂ ಅಧಿಕಾರಿಗಳೋಂದಿಗೆ ವಾಸ್ತವ ಚರ್ಚಿಸಿದ ಬಳಿಕ ಇಲಾಖೆ ಹಣ ಮರುಪಾವತಿಸಲು ಮುಂದಾಗಿದೆ.
ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ರೈತ ನೀಲಪ್ಪ ಕತ್ತಿ ಎಂಬುವವರು ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ತಂತಿಗೆ ತಮ್ಮ ಕೃಷಿ ನೀರಾವರಿ ಪಂಪಸೆಟ್ಟಿನ ಸಂಪರ್ಕ ಪಡೆದಿರುವುದು ಕಾನೂನು ಬಾಹೀರ ಎಂದು ಹೆಸ್ಕಾಂ ವಿಚಕ್ಷಣ ದಳದ ಸಿಬ್ಬಂದಿ ಪ್ರಕರಣ ದಾಖಲಿಸಿ 20 ಸಾವಿರ ರೂ ದಂಡ ವಸೂಲಿ ಮಾಡಿತ್ತು.
ಎರಡು ದಿನಗಳ ಹಿಂದೆ ನಡೆದ ಈ ಘಟನೆ ರೈತ ಸಂಘದ ಗಮನಕ್ಕೆ ಬಂದಾಗ ಹಾನಗಲ್ಲಿನ ಹೆಸ್ಕಾಂ ಇಲಾಖೆ ಕಛೇರಿಗೆ ತೆರಳಿದ ರೈತ ಸಂಘದ ಪದಾಧಿಕಾರಿಗಳು ಈ ಪ್ರಕರಣದ ಹಿಂದು ಮುಂದಿನ ಘಟನೆಗಳನ್ನು ಚರ್ಚಿಸಿದರು. ಆದರೆ ರೈತ ನೀಲಪ್ಪ ಕತ್ತಿ ತನ್ನ ಕೃಷಿ ಪಂಪಸೆಟ್ಟಿಗೆ ತಾನಾಗಿಯೇ ನಿರಂತರ ಜ್ಯೋತಿ ಲೈನ್ ಮೂಲಕ ವಿದ್ಯುತ್ ಪಡೆದಿಲ್ಲ. ಆದರೆ ಹೆಸ್ಕಾಂ ಅಧಿಕಾರಿಗಳೆ ನಿರಂತರ ಜ್ಯೋತಿ ಅಳವಡಿಸಿದಾಗ ಈ ರೈತನ ಪಂಪಸೆಟ್ಟಿಗೆ ಬೇರೆ ವ್ಯವಸ್ಥೆ ಮಾಡದೆ, ಇರುವ ನಿರಂತರ ಜ್ಯೋತಿ ವಾಹಕದಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದರು.
ಆದರೆ ವಿಚಕ್ಷಕದಳದವರು ರೈತನ ತಪ್ಪೆಂದು ಅದಕ್ಕೆ ಸಲ್ಲಬೇಕಾದ ಕಾನೂನಾತ್ಮಕ ದಂಡ ವಿಧಿಸಬೇಕೆಂದು ರೈತನಿಗೆ ಒತ್ತಾಯಿಸಿದರು. ಆದರೆ ರೈತ ಇದು ನನ್ನ ತಪ್ಪಲ್ಲ. ನಾನು ಈ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿದರೂ ಕೂಡ ವಿಚಕ್ಷಕ ದಳದವರು ವಿದ್ಯುತ್ ಕನೆಕ್ಷನ್ ತಪ್ಪಿಸಿ ಕನೆಕ್ಷನ್‍ಗೆ ಸಂಬಂದಿಸಿದ ಬೋರ್ಡ ಹಾಗೂ ವೈರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ನಂತರ ತನ್ನ ಪೈರು ನಾಶವಾಗುತ್ತದೆ ಎಂಬ ಭೀತಿಯಿಂದ ಹೆಸ್ಕಾಂ ಹೇಳಿದ 20 ಸಾವಿರ ದಂಡ ನೀಡಿ ರೈತ ನೀಲಪ್ಪ ಕತ್ತಿ ವಿದ್ಯುತ್ ಮರುಜೋಡಣೆಗೆ ವಿನಂತಿಸಿದ್ದಾನೆ.
ಇದಕ್ಕೂ ಮಣಿಯದ ಅಧಿಕಾರಿಗಳ ನಡುವಳಿಕೆಯಿಖದ ಬೇಸತ್ತ ರೈತ, ರೈತ ಸಂಘದ ಮೊರೆಹೋದಾಗ ರೈಥ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹಾಗೂ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ರೈತನ ತಪ್ಪಿಲ್ಲದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಹೆಸ್ಕಾಂ ಹಾವೇರಿ ಹಾಗೂ ಹುಬ್ಬಳ್ಳಿ ಕಛೇರಿಯಲ್ಲಿರುವ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದಾಗ ದಂಡವಾಗಿ ಪಡೆದ ಹಣವನ್ನು ಮರುಪಾವತಿಸಲು ಒಪ್ಪಿಕೊಂಡಿದ್ದಾರೆ. ತಕ್ಷಣ ರೈತನ ಪಂಪಸೆಟ್ಟಿಗೆ ವಿದ್ಯುತ್ ಸಂಪರ್ಕ ನೀಡಲು ಇಲಾಖೆ ಮುಂದಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಮಹಲಿಂಗಪ್ಪ ಅಕ್ಕಿವಳ್ಳಿ, ಲಕ್ಷ್ಮಣ ದಾಳೇರ, ಅಬ್ದುಲ್‍ಖಾದರ ಮುಲ್ಲಾ. ಚನ್ನಬಸನಗೌಡ, ಶಿವು ಮೂಡಿ, ಮಾಲತೇಶ ಗೊಂದಿ, ಕನ್ನಪ್ಪ ಕಾಮನಹಳ್ಲಿ, ಕೆ.ಎಸ್.ಬಾಳಂಬೀಡ, ಮುಕ್ತಾರಅಹ್ಮದ ಬಾಳೂರ, ಹೆಸ್ಕಾಂ ಅಧಿಕಾರಿಗಳಾದ ಎಂ.ಬಿ.ಪಾಟೀ, ಎಚ್.ಮಹೇಶ್ವರ, ವಿಜಯಕುಮಾರ, ಕಿರಣಕುಮಾರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ