ಸಮುದ್ರನ ಕೋಟೆಗೆ ತಾಪಂ ಸಿಇಒ ಭೇಟಿ

ಎಂ ಎನ್ ಕೋಟೆ

       ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸಮುದ್ರನಕೋಟೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಜಾಪ್ರಗತಿ ಪತ್ರಿಕೆ ಬುಧವಾರ ಸಮಗ್ರ ವರದಿ ಪ್ರಕಟ ಮಾಡಿತ್ತು. ವರದಿಗೆ ಎಚ್ಚೆತುಕೊಂಡ ತಾಲ್ಲೂಕ್ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯ ಗುರುವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

        ನಂತರ ಮಾತನಾಡಿದ ಅವರು ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಗ್ರಾಮಗಳಲ್ಲಿ ಚರಂಡಿಗಳು ಸ್ವಚ್ಛವಾಗಿಲ್ಲ , ಟ್ಯಾಂಕರ್‍ಗಳನ್ನು ಸ್ವಚ್ಛಮಾಡಿಲ್ಲ, ಶೀಘ್ರದಲ್ಲಿ ಪಿಡಿಓ ಜೊತೆ ಚರ್ಚಿಸಿ ಕೂಡಲೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳ ಸಭೆ ಕರೆದು ಸಮುದ್ರನಕೋಟೆ ಗ್ರಾಮಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಲು ಪಿಡಿಓಗೆ ತಿಳಿಸುತ್ತೇನೆ ಎಂದು ತಿಳಿಸಿದರು. 14ನೇ ಹಣಕಾಸಿನ ಅನುದಾನ ಈಗ ಬಂದಿದೆ. ಪಿಡಿಓ ಹಾಗೂ ಸದಸ್ಯರ ಸಹಕಾರ ಪಡೆದು ಈ ಗ್ರಾಮಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಕಾರ ಮಾಡುತ್ತೇವೆ. ಜೊತೆಗೆ ರಸ್ತೆಯ ಪಕ್ಕದಲ್ಲಿ ತಿಪ್ಪೆಯನ್ನು ಮಾಡಿಕೊಂಡಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ನಾಳೇನೆ ಸಂಬಂಧಪಟ್ಟವರಿಗೆ ನೋಟೀಸ್ ಕೊಡುವುದಕ್ಕೆ ಪಿಡಿಓಗೆ ತಿಳಿಸುತ್ತೇನೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತ್ರಿವೇಣಿ ನಟರಾಜು , ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ , ನೀಲಮ್ಮ ಸಿದ್ದರಾಮೇಶ್ , ಮಾಜಿ ಅಧ್ಯಕ್ಷ ನಟರಾಜು , ಪಿಡಿಓ ಶಿವಸ್ವಾಮಿ , ಕಾರ್ಯದರ್ಶಿ ಎಸ್ ವೀರಪ್ಪ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap