ಹಾನಗಲ್ಲ :
ಹೈನುಗಾರಿಕೆಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಜೊತೆಗೆ ತಮ್ಮ ಬದುಕು ಕಟ್ಟಿಕೊಳ್ಳುಲು ಹಾಲು ಒಕ್ಕೂಟ ಸಹಕಾರಿ ಸಂಘಗಳು ಸಹಾಯಕಾರಿಯಾಗಿವೆ ಎಂದು ಶಾಸಕ ಸಿ.ಎಮ್.ಉದಾಸಿ ಹೇಳಿದರು.
ಮಂಗಳವಾರ ಪಟ್ಟಣದ ಅವರ ನಿವಾಸದಲ್ಲಿ 2018-19 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ತಾಲೂಕಿನ ಏಳು ಸಹಕಾರಿ ಸಂಘಗಳಿಗೆ ತಲಾ 3 ಲಕ್ಷ ರೂ ಕಟ್ಟಡ ಕಾಮಗಾರಿಗೆ ಅನುದಾನ ವಿತರಿಸುವ ಮೂಲಕ ಮಾತನಾಡಿದ ಅವರು, ಒಂದು ಕಾಲಕ್ಕೆ ಹಾಲು ಒಕ್ಕೂಟ ಸಂಘಗಳು ಕ್ಷೀಣಗತಿಯಲ್ಲಿದ್ದವು ಕೆಲವು ಬಂದಾಗಿರುವುದನ್ನು ನಾವು ಗಮನಿಸಿದ್ದೆವೆ. ಅವುಗಳು ಈಗ ಹೆಚ್ಚಾಗಿರಬೇಕಾದರೆ ಅದಕ್ಕೆ ಮಹಿಳೆಯರ ಪರಿಶ್ರಮ ಕಾರಣ.
ತಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸ, ಜನರ ಭವಿಷ್ಯ, ಆರ್ಥೀಕ ವಿಕಾಸಕ್ಕೆ ಜೇನು ಸಾಗಾಣಿಕೆ, ಕುರಿ ಸಾಗಾಣಿಕೆ, ಕೋಳಿ ಸಾಗಣಿಕೆ, ಮೊಲಸಾಗಾಣಿಕೆ ಜೊತೆಗೆ ಹೈನುಗಾರಿಕೆಯಿಂದ ತಮ್ಮ ಜೀವನ ವೃದ್ದಿಸಬಹುದಾಗಿದೆ. ತಾವು ಸಾಕಿದ ವಿವಿಧ ತಳಿಯ ಮತ್ತು ಹಸುಗಳ ಸಂರಕ್ಷಣೆ, ಆರೋಗ್ಯ ತಪಾಸಣೇ, ಆಹಾರ ಪೂರೈಕೆ ಗುಣ ಮಟ್ಟದ ಬಗ್ಗೆ ತಮ್ಮ ಗಮನಕ್ಕೆ ತನ್ನಿ ಎಂದರು.
ಧಾರವಾಡ ಕೆಎಮ್ಎಫ್ ಹಾಲು ಘಟಕದ ನಿರ್ದೆಶಕ ಹನುಮಂತಗೌಡ ಪಾಟೀಲ ಮಾತನಾಡಿ, s ಹಾವೇರಿ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸಹಕಾರಿ ಸಂಘಗಳು ಉಳಿಯಬೇಕಾದರೆ ಪ್ರತಿ ಸಂಘಕ್ಕೆ ಹಾನಗಲ್ಲ ತಾಲೂಕಿಗೆ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನೆಚ್ಚಿನ ನಾಯಕರಾದ ಸಿ.ಎಮ್.ಉದಾಸಿಯವರು ಎಂದು ಹೇಳುವುದಕ್ಕೆ ತಪ್ಪಾಗಲಾರದು. ಹಾನಗಲ್ಲ ತಾಲೂಕಿನಲ್ಲಿ ಮೊದಲು ಕೇವಲ 54 ಒಕ್ಕೂಟಗಳಿದ್ದವು ಅದೀಗ 84 ಕ್ಕೆ ಏರಿಕೆಯಾಗಲಿಕ್ಕೆ ಉದಾಸಿಯವರು ಕಾರಣೀಕರ್ತರು.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 978 ಹಾಲೂ ಒಕ್ಕೂಟ ಸಂಘಗಳಿದ್ದು, ಹಾನಗಲ್ಲ ತಾಲೂಕ 84, ಹಿರೇಕೆರೂರ ತಾಲೂಕಿನಲ್ಲಿ 104 ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ 430 ಹಾಲು ಒಕ್ಕೂಟ ಸಂಘಗಳಿದ್ದು ಧಾರವಾಡ ಕೆ.ಎಮ್.ಎಫ್ ನಾಲ್ಕು ಜಿಲ್ಲೆಗಳಿಂದ 2.60.000 ಸಾವಿರ ಲೀಟರ್ಷ್ಟು ಹಾಲು ರವಾನೆಯಾಗುತ್ತಿದೆ. ಅದರಲ್ಲಿ ಹಾನಗಲ್ಲಿನಿಂದ 21.000 ಸಾವಿರ ಲೀಟರ್ ಹಿರೆಕೆರೂರಿನಿಂದ 43.000ಸಾವಿರ ಲೀಟರ್ ಹಾಲು ಧಾರವಾಡ ಕೆ.ಎಮ್.ಎಫ್. ಗೆ ರವಾನೆಯಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಹಾನಗಲ್ಲ ತಾಲೂಕಿನ ಕೂಡಲ, ಜಕ್ಕನಾಯಕನಕೊಪ್ಪ, ಕರಗುದರಿ, ಕೆಲವರಕೊಪ್ಪ, ಮಾರೇನಬೀಡ, ಗೊಂದಿ, ಅಕ್ಕಿಆಲೂರ 7 ಹಾಲು ಒಕ್ಕೂಟ ಸಂಘಗಳ ಕಟ್ಟಡಕ್ಕೆ 3 ಲಕ್ಷ ರೂ ಪರಿಹಾರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪಂಚಾಯತಿ ಸದಸ್ಯ ಮಾಲತೇಶ ಸೊಪ್ಪಿನ. ತಾಲೂಕಧ್ಯಕ್ಷ ನಿಂಗಪ್ಪ ಗೊಬ್ಬೇರ. ಶಿವಲಿಂಗಪ್ಪ ತಲ್ಲೂರ. ಹಾಗೂ ತಾಲೂಕಿನ ಎಲ್ಲ ಹಾಲು ಒಕ್ಕೂಟ ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ