ದಾವಣಗೆರೆ:
ತಾತ ಎಂದು ಪ್ರೀತಿಯಿಂದ ಕರೆಯುವ ಇನ್ನೂ ಏನು ಅರಿಯದ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು.
ನಿಟ್ಟುವಳ್ಳಿ ನಿವಾಸಿಯಾದ ಅಜೀಜ್ (58) ಅತ್ಯಾಚಾರ ಮಾಡಲು ಯತ್ನಿಸಿದ ವೃದ್ಧ ,ಈತ ಬಾಲಕಿ ಟ್ಯೂಷನ್ ಗೆಂದು ಬಂದಾಗ ಈ ರೀತಿ ನೀಚ ಕೃತ್ಯ ಎಸಗಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಜೀಜ್ ನ ಮಗ ಮಕ್ಕಳಿಗೆ ಪ್ರತಿನಿತ್ಯ ಟ್ಯೂಷನ್ ಕೊಡುತ್ತಿದ್ದನು. ಟ್ಯೂಷನ್ ಗೆ ಮಕ್ಕಳು ಬರುತ್ತಿದ್ದರು. ಇದೇ ರೀತಿ ಟ್ಯೂಷನ್ ಗೆಂದು ಎಂಟು ವರ್ಷದ ಬಾಲಕಿ ಕೂಡ ಬಂದಿದ್ದಳು. ಆಗ ಆರೋಪಿ ವೃದ್ಧ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಬಳಿಕ ಹೇಗೋ ತಪ್ಪಿಸಿಕೊಂಡು ಬಾಲಕಿ ಮನೆಗೆ ಓಡಿ ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/raped-girl-clipart-9.gif)