ಚಿತ್ರದುರ್ಗ
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಜಿಲ್ಲಾ ಶಾಖೆ ಚಿತ್ರದುರ್ಗ ವತಿಯಿಂದ ನಗರದ ತ.ರಾ.ಸು ರಂಗಮಂದಿರದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ಶೈಕ್ಷಣಿಕ ಸಮಾವೇಶದ ಜ್ಞಾಪಕಾರ್ಥ ವಿಧಾನ ಪರಿಷತ್ ಸದಸ್ಯರು ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕರಾದ ಡಾ.ವೈ.ಎ.ನಾರಾಯಣಸ್ವಾಮಿಯವರನ್ನು ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಸಂಘದ ವತಿಯಿಂದ ಇದೇ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಉಪನ್ಯಾಸಕರ ಶೈಕ್ಷಣಿಕ ಸಮಾವೇಶವನ್ನು ನಗರದಲ್ಲಿ ಏರ್ಪಡಿಸಿ ಅದಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದರು.
ಹಾಗೆಯೇ ಉಪನ್ಯಾಸಕರ ಪ್ರಮುಖ ಬೇಡಿಕೆಗಳಾದ ವೇತನಾ ತಾರತಮ್ಯಕ್ಕೆ ಸಂಬಂಧಿಸಿದಂತೆ ಕುಮಾರನಾಯಕ ವರದಿ ಅನ್ವಯ. 2ನೇ ವಾರ್ಷಿಕ ವೇತನ ಬಡ್ತಿ ಮಂಜೂರು, ಬಡ್ತಿ ಉಪನ್ಯಾಸಕರ ಸಮಸ್ಯೆ, ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ, ಪರೀಕ್ಷೆ ಕರ್ತವ್ಯ ಸಂಭಾವನೆ, ಖಾಸಗಿ ಅನುದಾನಿತ ಕಾಲೇಜು ಉಪನ್ಯಾಸಕರುಗಳಿಗೆ 6ನೇ ವೇತನ ಆಯೋಗದನ್ವಯ ಡಿಸೆಂಬರ್ ತಿಂಗಳಿನಿಂದ ಬರುವ ಬಾಕಿ ಹಣ ಮಂಜೂರು ಮುಂತಾದ ಸಮಸ್ಯೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ತರುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ, ಖಜಾಂಚಿ ಕೆ.ತಿಪ್ಪೇಸ್ವಾಮಿ, ಕಾನೂನು ಸಲಹೆಗಾರ ಆರ್.ಮುಸ್ತಫ್, ಸಲಹಾ ಸಮಿತಿ ಸದಸ್ಯರಾದ ಎನ್.ದೊಡ್ಡಪ್ಪ, ಪಿ.ಎಂ.ಜಿ.ರಾಜೇಶ್ ಉಪನ್ಯಾಸಕರಾದ ರಮೇಶರೆಡ್ಡಿ ಇತರರು ಉಪಸ್ಥಿತರಿದ್ದರು.