ಚಿಕ್ಕನಾಯಕನಹಳ್ಳಿ
ಕಳೆದ ಮೂರು ದಿನಗಳಿಂದ ಪಟ್ಟಣದ ಖಾಸಗಿ ಬಸ್ಟ್ಯಾಂಡ್‍ನಲ್ಲಿ ಅನಾಥವಾಗಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ರಕ್ಷಿಸಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ದರು.
ಸದರಿ ವ್ಯಕ್ತಿಯು ನಿಂಗೇಗೌಡ (63) ಇವರು ನಿವೃತ್ತ ಉಪಾಧ್ಯಾಯರು ಎಂದು ಹೇಳುತ್ತಿದ್ದು ತಿಪಟೂರು ತಾಲ್ಲೂಕು ಹೊನ್ನವಳ್ಳಿಯವರು ಎಂದು ಮಾಹಿತಿ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈವರೆವಿಗೂ ಯಾರೂ ಅವರ ನೋಡಲು ಬಂದಿಲ್ಲ, ಸದರಿ ನಿಂಗೇಗೌಡರವರಿಗೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಸಂಬಂಧಿಕರು ಬರದೆ ಇದ್ದಲ್ಲಿ ತುಮಕೂರಿನ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ತಿಳಿಸಿದ್ದಾರೆ.