ಬೆಂಗಳೂರು
ನೀಲಿ ಚಿತ್ರ ವ್ಯಸನಿಯೊಬ್ಬ ನೀಲಿ ಚಿತ್ರಗಳಲ್ಲಿ ನೀನು ನಟಿಸಿರುವ ದೃಶ್ಯವನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆತಂದಿದ್ದರಿಂದ ನೊಂದ ತುಂಬು ಗರ್ಭಿಣಿ ಪತ್ನಿ ಪತಿಯಿಂದ ದೂರವಾಗಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆಸಿದೆ.
ಸೈಬರ್ ಅಪರಾಧ ವಿಭಾಗದ ಪೊಲೀಸರು ವ್ಯಕ್ತಿ ತಂದಿದ್ದ ನೀಲಿ ಚಿತ್ರವನ್ನು ಪರಿಶೀಲಿಸಿ ಇದರಲ್ಲಿರುವುದು ನಿನ್ನ ಪತ್ನಿಯಲ್ಲ ಎಂದು ದೃಢಪಡಿಸಿದರಾದರೂ ಒಪ್ಪದೇ ರಂಪಾಟ ಮಾಡಿದ್ದು ಆತನ ವಿಕೃತ ಮನಸ್ಥಿತಿಗೆ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸುವಂತೆ ಹೇಳಿ ಕಳುಹಿಸಿದ್ದಾರೆ ಪತಿಯ ಈ ವರ್ತನೆಯಿಂದ ಬೇಸತ್ತ ಪತ್ನಿಯು ಪತಿಯನ್ನು ತೊರೆದು ತವರು ಸೇರಿಕೊಂಡಿದ್ದಾರೆ.
ಪತಿಯಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿ ಆಂಧ್ರ ಪ್ರದೇಶದ ತವರು ಮನೆಗೆ ತೆರಳಿರುವ 31 ವರ್ಷದ ಪತ್ನಿಯು 4 ತಿಂಗಳ ಗರ್ಭಿಣಿಯಾಗಿದ್ದು ಆಕೆಗೆ ಈಗಾಗಲೇ ಒಂದು ಮಗು ಇದೆ. ಆರೋಪಿ ಪತಿ ವೆಂಕಟೇಶ ಬೆಂಗಳೂರು ನಿವಾಸಿಯಾಗಿದ್ದು, `ಇ-ಕಾಮರ್ಸ್ ಪೋರ್ಟಲ್’ (ಅಂತರ್ಜಾಲ ವ್ಯಾಪಾರ ತಾಣ) ಸಾಮಗ್ರಿ ವಿತರಕನಾಗಿದ್ದಾನೆ.
ಆರು ವರ್ಷದ ಹಿಂದೆ ವಿವಾಹವಾಗಿದ್ದ
ಅಶ್ಲೀಲ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ ಆರೋಪಿಯು ಪತ್ನಿಯ ಶೀಲ ಶಂಕಿಸುತ್ತಿದ್ದ ಅಶ್ಲೀಲ ಚಿತ್ರ ತುಣುಕೊಂದರ ಸಹಿತ ಕಳೆದ ತಿಂಗಳು ಬಂದು ದೃಶ್ಯದಲ್ಲಿರುವುದು ತನ್ನ ಪತ್ನಿಯೇ ಇರಬಹುದು ಎಂಬ ಶಂಕೆಯಿದೆ ಏಕೆಂದರೆ ದೃಶ್ಯದಲ್ಲಿರುವ ಮಹಿಳೆ ಹಾಗೂ ತನ್ನ ಪತ್ನಿ ಇಬ್ಬರ ದೇಹದ ಮೇಲೂ ಒಂದೇ ರೀತಿಯ ಮಚ್ಚೆ ಇದೆ ಎಂದು ವಾದಿಸಿದ್ದನು.
ದೃಶ್ಯದಲ್ಲಿನ ವ್ಯಕ್ತಿಯೊಂದಿಗೆ ತನ್ನ ಪತ್ನಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂಬುದನ್ನು ಸಾಬೀತು ಮಾಡಬೇಕೆಂದು ಕೋರಿ ಆತ ಎಚ್‍ಎಎಲ್ ಪೊಲೀಸ್ ಠಾಣೆಗೆ ಹೋಗುವಾಗ ಆಕೆಯನ್ನೂ ಜತೆಗೆ ಎಳೆದೊಯ್ದಿದ್ದ ಎಂದು ಪೊಲೀಸ್ ಆಯುಕ್ತರ `ವನಿತಾ ಸಹಾಯವಾಣಿ’ (ಮಹಿಳೆಯರ ಹೆಲ್ಪ್ ಲೈನ್) ಹಿರಿಯ ಆಪ್ತ ಸಮಾಲೋಚಕರೊಬ್ಬರು ವಿವರಿಸಿದ್ದಾರೆ.
ಎಚ್‍ಎಎಲ್ ಪೊಲೀಸರು ದಂಪತಿಯನ್ನು ಆಪ್ತ ಸಮಾಲೋಚನೆಗೆಂದು ಕಮೀಷನರ್ ಕಚೇರಿಯ ವನಿತಾ ಸಹಾಯವಾಣಿಗೆ ಕಳುಹಿಸಿದ್ದರು. ವೀಡಿಯೋದಲ್ಲಿರುವುದು ತನ್ನ ಪತ್ನಿಯೇ ಎಂದು ಖಾತ್ರಿಪಡಿಸಿಕೊಳ್ಳಲು ಆತ ಕಾತರನಾಗಿದ್ದ. ಹೀಗಾಗಿ ನಾವು ವೀಡಿಯೋ ತಪಾಸಣೆಗಾಗಿ ಸೈಬರ್ ಕ್ರೈಂ ವಿಭಾಗದ ನೆರವು ಕೋರಿದೆವು. ದೃಶ್ಯದಲ್ಲಿರುವುದು ಆಕೆಯಲ್ಲ ಎಂದು ನಂತರ ಖಾತ್ರಿಯಾಯಿತು ಅಲ್ಲದೆ ಈ ವೀಡಿಯೋ ವಿದೇಶದ್ದು ಎಂದೂ ಆರೋಪಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದರು.
ಆದರೂ ಮೊಂಡುತನ ಬಿಡದ ಆರೋಪಿ ವೆಂಕಟೇಶನು, ದೃಶ್ಯದಲ್ಲಿರುವ ವ್ಯಕ್ತಿ ಯಾರೆಂದು ತಿಳಿಯಲು ಬಯಸಿದ್ದ. ಅಶ್ಲೀಲ ಚಿತ್ರ ನಟಿ ಹಾಗೂ ತನ್ನ ಪತ್ನಿಯ ನಡುವೆ ಇಲ್ಲಸಲ್ಲದ ಹೋಲಿಕೆ ಮಾಡಿಕೊಳ್ಳುವಷ್ಟು ಆತ ಅಶ್ಲೀಲ ಚಿತ್ರ ವೀಕ್ಷಣೆಯ ದುರಭ್ಯಾಸ ಹೊಂದಿರುವ ಕಾರಣಕ್ಕಾಗಿಯೇ ಆತ ತನ್ನ ಪತ್ನಿಯ ಶೀಲ ಶಂಕಿಸುವಷ್ಟು ದುರ್ಮಾರ್ಗಕ್ಕೆ ಇಳಿದಿದ್ದಾನೆ ಕೂಡಲೇ ಆತನಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿರುವುದರಿಂದ `ನಿಮ್ಹಾನ್ಸ್’ಗೆ ದಾಖಲಾಗುವಂತೆ ಸಲಹೆ ನೀಡಲಾಗಿದೆ; ಆದರೆ ಈ ಸಲಹೆ ಆತನಿಗೆ ಪಥ್ಯವಾಗಿಲ್ಲ’ ಎಂದು ಸಹಾಯವಾಣಿ ಮೂಲಗಳು ವಿವರಿಸಿವೆ.ನಾನು ಚೆನ್ನಾಗಿಯೇ ಇದ್ದೇನೆ ಎಂಬುದು ಆರೋಪಿಯ ವಾದವಾಗಿದ್ದು, ಪತ್ನಿ ಮಾತ್ರ ತನ್ನ ತವರು ಮನೆಗೆ ಹಿಂದಿರುಗಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
