ಮೈತ್ರಿ ಸರ್ಕಾರ ಐದು ವರ್ಷ, ಅಧಿಕಾರ ಅವದಿ ಪೂರ್ಣಗೊಳಿಸುತ್ತದೆ: ಸತೀಶ್ ಜಾರಕಿಹೊಳಿ

ಹರಿಹರ:

       ಮೈತ್ರಿ ಸರ್ಕಾರ ಐದು ವರ್ಷಗಳಕಾಲ ಯಾವುದೇ ಆತಂಕವಿಲ್ಲದೆ, ಸುಭದ್ರವಾದ ಅಧಿಕಾರ ಪೂರ್ಣಗೊಳಿಸುತ್ತದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲವು ಶಾಕರ ವೈಯಕ್ತಿಕ ಅಭಿಪ್ರಾಯದಂತೆ ಕೆಲವೊಂದು ವ್ಯವಸ್ಥೆ ಸರಿಯಿಲ್ಲ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಹೇಳುತಿದ್ದಾರೆ ಎಂದರು .

       ಆದರೆ ಇತ್ತೀಚಿಗೆ ಎಲ್ಲಾ ತಾಲ್ಲೂಕುಗಳಿಗೆ ಪಿಡಬ್ಲ್ಯೂಡಿ ಮತ್ತು ನೀರಾವರಿ ಇಲಾಖೆಗೆ ಅನುದಾನ ಮಂಜೂರು ಮಾಡಲಾಗಿದೆ. ರಾಜಕಾರಣದಲ್ಲಿ ಸಮಸ್ಸೆಗಳು ಇದ್ದೆ ಇರುತ್ತವೆ, ಮೋಡ ಕವಿದಾಗ ಗುಡುಗು ಸಾಮಾನ್ಯ. ಅದನ್ನು ಸರಿ ಪಡಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಪಕ್ಷದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುತ್ತಾರೆ ಎಂದರು.

        ಸರ್ಕಾರ ರಚನೆಯಾದ ದಿನದಿಂದಲೂ ಬಿಜೆಪಿ ಅವರು ಸರ್ಕಾರವನ್ನು ಏನಾದರೂ ಮಾಡಿ ಅಭದ್ರಗೊಳಿಸಬೇಕು ಎಂಬ ಅವರ ಅಲೋಚನೆ ಈಡೇರಿಸುವದಿಲ್ಲ, ಸಮ್ಮೀಶ್ರ ಸರ್ಕಾರವು ಸುಭಧ್ರವಾಗಿದೆ ಏನೇ ಸಮಸ್ಯೆಯಾದರೂ ಎರಡು ಪಕ್ಷದವರು ಸಮಸ್ಯೆ ನಿಭಾಯಿಸುವ ಶಕ್ತಿಇದೇ ಬಿಜೆಪಿ ಅವರು ಹಗಲುಗನಸು ಕಾಣುವುದನ್ನು ಬಿಡಬೇಕು ಎಂದರು.

        ನನ್ನ ಸಹೋದರ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ದೊರೆತಿಲ್ಲ. ಆದರೆ, ಅವರು ಪಕ್ಷದಲ್ಲಿರುವುದಾಗಿ ಪತ್ರ ಬರೆದು ಕೊಟ್ಟಿದ್ದಾರೆ. ಹಾಗಾಗಿ, ಅವರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದ ಅವರು, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ರಾಜಕಾರಣಿಯಾಗುವ ಪ್ರತಿಯೊಬ್ಬರಿಗೆ ಈ ಆಸೆ ಇದ್ದೇ ಇರುತ್ತದೆ. ಆದರೆ, ಅದಕ್ಕೆ ಈ ಅವಧಿ ಸರಿಯಲ್ಲ, ಕಾಲ ಕೂಡಿಬಂದಾಗ ಆಗುತ್ತೇನೆ. ಅಲ್ಲದೆ, ನಮ್ಮ ಸಮುದಾಯದವರೂ ಸಿಎಂ ಆಗಬೇಕು. ಅದಕ್ಕಾಗಿ ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

         ಗಣೇಶ್ ಹಾಗೂ ಅನಂದ್ ಸಿಂಗ್ ಅವರು ವೈಯಕ್ತಿಕ ಹಲ್ಲೆ ಪ್ರಕರಣದಲ್ಲಿ, ಹಲ್ಲೆ ಪ್ರಕರಣ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತಿದ್ದು, ಇದರಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು? ಎಂಬುದು ನಂತರ ತಿಳಿಯಲಿದೆ ಎಂದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link