ಬೆಂಗಳೂರು
ಕಲಿಯುಗದ ನಡೆದಾಡುವ ದೇವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ನಡೆದಾಡುವ ದೇವರು ನಡಿಗೆ ನಿಲ್ಲಿಸಿದ್ದಾರೆ. ಶ್ರೀಗಳು ಜಗತ್ತಿನಲ್ಲಿಯೇ ಐದನೇ ದೀರ್ಘಾಯು ಎನಿಸಿದ್ದ ಹಿರಿಯ ಜೀವ. ಭಾರತದ ಮತ್ತು ಕನ್ನಡನಾಡಿನ ಜೀವರತ್ನ. ಲಕ್ಷಾಂತರ ಜನರಿಗೆ ನೆರಳು, ಅಕ್ಷರ ಜ್ಞಾನ ನೀಡಿ ಹಸಿವು ಹಿಂಗಿಸಿದವರು. ಆರೋಗ್ಯ ನೀಡಿ, ಮಾರ್ಗದರ್ಶನ ಮಾಡಿ ಹರಸಿದ ಪುಣ್ಯಜೀವಿ ಎಂದಿದ್ದಾರೆ.
ಶ್ರೀಗಳು ಈ ಜಗತ್ತು ಕಂಡ ಜ್ಞಾನ ಭಂಡಾರ. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರೂ ಆದ ಅವರ ಸಾನಿಧ್ಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಈ ದಿನ ಉನ್ನತ ಮಟ್ಟಕ್ಕೇರಿದ್ದಾರೆ.ಶ್ರೀಗಳು ಜನಿಸಿದ ಈ ಪುಣ್ಯಭೂಮಿಯಲ್ಲಿ ನಾವೆಲ್ಲ ಜನಿಸಿರುವುದೇ ನಮ್ಮ ಅದೃಷ್ಟ.ಅವರು ಹಾಕಿಕೊಟ್ಟಿರುವ ಮಾರ್ಗದರ್ಶನ ದಲ್ಲಿ ನಾವೆಲ್ಲ ಮುಂದೆ ಸಾಗಬೇಕಾಗಿದೆ. ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶಿವಕುಮಾರ ಸ್ವಾಮಿಗಳ ಆಶಿರ್ವಾದ ಈ ಜಗತ್ತಿಗೆ ಸದಾಕಾಲ ಇರುತ್ತದೆ ಎಂದು ಎಚ್.ಡಿ. ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ