ತುಮಕೂರು :
ತಮ್ಮ ನಿವೇಶನದ ಹಕ್ಕು ಪತ್ರ ನೀಡಲು ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಬಳಿ ಹಕ್ಕು ಪತ್ರ ನೀಡಲು 60 ಸಾವಿರ ಲಂಚದ ಹಣಕ್ಕೆ ಬೇಡಿಕೆಯಿಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಈಗ ಭ್ರಷ್ಟಚಾರ ನಿಗ್ರಹ ದಳದ ಅತಿಥಿಯಾಗಿದ್ದಾರೆ.
ದಿನಾಂಕ 24/01/2019 ರಂದು ನಿವೇಶನದ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಂದ ಗುಬ್ಬಿ ತಾಲ್ಲೂಕು, ಚೇಳೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯು 50 ಸಾವಿರ ಲಂಚದ ಹಣವನ್ನು ಪಡೆಯುವಾಗ ಬಂಧಿಸಲಾಗಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು, ಲಂಚವಾಗಿ ಪಡೆದಿದ್ದ 50 ಸಾವಿರ ರೂ.ಗಳನ್ನು ವಶಪಡಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ