ಹಾವೇರಿ:
ಮಹಾಮಾರಿ ಕೊರೊನಾ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ಸವಣೂರಿನಲ್ಲಿ ಕೊರೊನ್ ಸೊಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸದ್ಯ ವರದಿ ಬಂದಿದ್ದು, ಮತ್ತೋರ್ವ ವ್ಯಕ್ತಿಗೆ ಸೋಂಕು ಕಂಡು ಬಂದಿದೆ. ಆತನ ಅಂತಿಮ ಪರೀಕ್ಷಾ ವರದಿ ಬರಬೇಕಿದೆ. ಒಟ್ಟು ಮೂವರು ಮುಂಬೈ ಯಿಂದ ಲಾರಿಯಲ್ಲಿ ಸವಣೂರಿಗೆ ಆಗಮಿಸಿದ್ದರೆಂದು ಈ ಮೂವರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಇದರಲ್ಲಿ ತಂದೆ ಹಾಗೂ ಮಗನಿಗೆ ಹಾಗೂ ಸೋಂಕು ಕಂಡು ಬಂದಿದೆ. ಸಂಜೆ ವೇಳೆಗೆ ಲ್ಯಾಬ್ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
