ಜಂಗಿ ಕುಸ್ತಿಯಲ್ಲಿ ಬೆಳ್ಳಿಗದೆ ಪಡೆದ ಎನ್. ಶಮ್ಮುರಿಗೆ ವಿಶೇಷ ಗೌರವ

ಹರಪನಹಳ್ಳಿ:

        ವಾರದೊಳಗೆ ಜಂಗೀ ಕುಸ್ತಿಯಲ್ಲಿ ಎರಡು ಗದೆಗಳನ್ನು ಪಡೆದ ನಾಲಬಂದ್ ಶಮಾನ್ ಅಮೀರ್ ( ಶಮ್ಮು) ಅವರಿಗೆ ಮುಸ್ಲಿಂ ಬಾಂಧವರು ಹಾಗೂ ಕುಸ್ತಿ ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು.

         ಪಟ್ಟಣದ ಇಜಾರಿ ಸಿರಸಪ್ಪ ಬಡಾವಣೆಯ ಬೈಪಾಸ್ ರಸ್ತೆಯಲ್ಲಿನ ಪೈಲ್ವಾನರ ಮನೆಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಜನವರಿ 24 ರಂದು ಹೊನ್ನಾಳಿಯಲ್ಲಿ ನಡೆದ ಬಯಲು ಜಂಗಿ ಕುಸ್ತಿಯಲ್ಲಿ ಪ್ರಥಮಸ್ಥಾನ ಪಡೆದು ಬೆಳ್ಳಿ ಗದೆಯನ್ನು ಪಡೆದರೆ, 25 ಜನವರಿಯಂದು ಚಿತ್ರದುರ್ಗದ ಮಾಚೂರು ನಲ್ಲಿ ನಡೆದ ಕುಸ್ತಿಯಲ್ಲಿ ಪ್ರಥಮ ಸ್ಥಾನಕ್ಕೆ ಹಿತ್ತಾಳೆ ಗದೆಯನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ ಶಮಾನ್‍ಅಮೀರ್.

        ತಂದೆ ಜಹಾಂಗೀರ್ ಮಾತನಾಡಿ. ಪೂರ್ವಜರಿಂದ ಕುಸ್ತಿಕಲೆಯನ್ನು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದು, ನನ್ನ ಮಗ ರಾಜ್ಯದ ವಿವಿದೆಡೆಯಲ್ಲಿ ಕುಸ್ತಿ ಆಡುವ ಮೂಲಕ ಅನೇಕ ಪ್ರಶಸ್ತಿ, ಗದೆಗಳು ಹಾಗೂ ನಗದು ಬಹುಮಾನಗಳನ್ನು ಪಡೆದು ಮುಂದೆಯೂ ಸಹ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿ ತಾಲೂಕಿಗೆ ಹೆಸರು ಮಾಡವ ನಿರೀಕ್ಷೆಯಿದೆ. ಇದಕ್ಕಾಗಿ ಕುಟುಂಭದ ಎಲ್ಲಾ ಸದಸ್ಯರ ಪ್ರೋತ್ಸಾಹವಿದೆ ಎಂದರು.

         ಮುಖಂಡ ಶರೀಪ್ ಸಾಹೇಬ್ ಮಾತನಾಡಿ. ಎನ್.ಶಮ್ಮು ರವರ ಗೆಲುವು ತಾಲೂಕಿನ ಜನರ ಆಶೀರ್ವಾದ, ಕುಟುಂಭದ ಸದಸ್ಯರು, ಬಾಣಗೇರಿ ದೈವಸ್ಥರು, ಸರ್ವ ಜನಾಂಗದವರ ಪ್ರೋತ್ಸಾಹವೇ ಕಾರಣ. ಇನ್ನು ಹೆಚ್ಚಿನ ಸಾಧನೆ ಮಾಡಲು ಆದೇವರು ಇವನಿಗೆ ಶಕ್ತಿ ನೀಡಲಿ ಎಂದು ಹೇಳಿದರು.

          ಪುರಸಭೆ ಮಾಜಿ ಸದಸ್ಯ ಎನ್.ಮಜೀದ್ ಮಾತನಾಡಿ. ಕ್ರಿಕೇಟ್, ಮೊಬೈಲ್ ಹಾಗೂ ಕಂಪ್ಯೂಟರ್ ಯುಗದಲ್ಲೂ ಗ್ರಾಮೀಣ ಗಂಡುಕ್ರೀಡೆಯಾದ ಕುಸ್ತಿ ಕಣ್ಮರೆಯಾಗುತ್ತಿದ್ದು ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಕುಸ್ತಿಗೆ ಅನುದಾನ ಸೇರಿದಂತೆ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯತೆಯಿದೆ. ಶಮ್ಮುವಿನ ಸಾಧನೆಗೆ ಕುಟುಂಭದ ಬೆಂಬಲ ಸದಾ ಇರುತ್ತದೆ ಎಂದರು.ಮೆರವಣೆಗೆಯಲ್ಲಿ ಮುಖಂಡರಾದ ನಾಲಬಂದ್ ಮಾಬೂಸಾಬ್, ಬಿ.ಖಾದರ್, ಎನ್.ಚಮನ್‍ವಲಿಸಾಬ್, ಕೆ.ಪಕ್ರುಸಾಬ್, ಕೆ.ಜಿಲಾನ್, ಕೆ.ದಾದಾಪೀರ್ ಸೇರಿದಂತೆ ಅನೇಕ ಸಮಾಜ ಬಾಂಧವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap