ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಬೀದಿ ದೀಪಗಳು ಬೆಳಿಗ್ಗೆ ಹೊತ್ತಿನಲ್ಲಿ ಉರಿಯುತ್ತಿದ್ದೇವೆ ನಿರಂತರವಾಗಿ ದಿನದ 24ಗಂಟೆಗಳಲ್ಲೂ ಕೂಡ ಉರಿಯುತ್ತಿವೆ ಇದರ ಬಗ್ಗೆ ತ್ಯಾಗಟೂರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮುದ್ದಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ನಾಗರಾಜು ಮಾತನಾಡಿ ಪ್ರತಿ ನಿತ್ಯವೂ ಕೂಡ ಬೀದಿ ದೀಪಗಳು ಉರಿಯತ್ತಿವೆ.ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ವಿದ್ಯುತ್ ದೀಪಗಳು ರಾತ್ರಿವತ್ತು ಎಲ್ಲ ಹಳ್ಳಿಗಳಲ್ಲಿ ಉರಿಯುತ್ತಿವೆ ಆದರೆ ಈ ಗ್ರಾಮದಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಜರುಗುತ್ತಿವೆ ಎಂದು ಆರೋಪಿಸಿದ್ದಾರೆ.ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ