ಆರೋಗ್ಯದ ರಕ್ಷಣೆ ದೇಶದ ರಕ್ಷಣೆ- ಶಾಸಕ ನೆಹರು ಓಲೇಕಾರ

ಹಾವೇರಿ

        ಆರೋಗ್ಯದ ರಕ್ಷಣೆ ದೇಶದ ರಕ್ಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಿತ ಆಹಾರ ಸೇವಿಸಬೇಕು ಹಾಗೂ ಉಪ್ಪು, ಸಕ್ಕರೆ ಹಾಗೂ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

       ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ.ಎನ್.ಡಿ.ಓ ತಾಲೂಕಾ ಆರೋಗ್ಯಾಧಿಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ಆಹಾರ ಸುರಕ್ಷತೆ ಹಾಗೂ ಆಹಾರ ಗುಣಮಟ್ಟ ಕುರಿತಂತೆ ಜಾಗೃತಿ ಮೂಡಿಸಲು ನಗರದ ಹುಕ್ಕೇರಿಮಠದ ಆವರಣದಲ್ಲಿ ಆಯೋಜಿಸಲಾದ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

         ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಸ್ಯಾಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಸೊಪ್ಪು, ಹಾಲಿನ ಉತ್ಪನ್ನಗಳು, ಹಣ್ಣುಗಳನ್ನು ದ್ವಿದ್ವಳ ಧಾನ್ಯಗಳು, ಸಿರಿಧಾನ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸುವ ಮೂಲಕ ರಕ್ತದೊತ್ತಡ, ಮಧುಮೇಹದಂತಹ ರೋಗಗಳಿಂದ ದೂರವಿರಬಹುದು ಎಂದು ಹೇಳಿದರು.

ಉಚಿತ ತಪಾಸಣೆ:

       ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರ ಹಾಗೂ ಜಾತಾದಲ್ಲಿ ಭಾಗವಹಿಸಿದ ಎಲ್ಲರ ಮಧುಮೇಹ ಹಾಗೂ ಬಿಪಿ ತಪಾಸಣೆ ಮಾಡಲಾಯಿತು.

       ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕಾರ ಕುಂದೂರ, ಕೇಂದ್ರ ಸರ್ಕಾರದ ಜಾತಾ ಸಂಚಾಲಕ ಅಶೋಕ ಕುಮಾರ ಮಿಶ್ರಾ, ರಾಜ್ಯ ಸಂಚಾಲಕ ಕೆ.ವಿ.ಶ್ರೀನಿಧಿ, ಅಂಕಿತ ಅಧಿಕಾರಿ ಡಾ.ಜಗದೀಶ ಪಾಟೀಲ, ಆಹಾರ ಸುರಕ್ಷತಾ ಅಧಿಕಾರಿಗಳಾದ ಗಂಗಣ್ಣ ರಾಠೋಡ, ಕುಂದಗೋಳ, ಕೋರಿ, ಭಾರತೀಯ ವೈದ್ಯಕೀಯ ಸಂಸ್ಥೆಯ ಹಾವೇರಿ ಶಾಖೆಯ ಕಾರ್ಯದರ್ಶಿ ಡಾ.ಬಸವರಾಜ ಕೊಳ್ಳಿ, ಡಾ.ವಿಜಯಕುಮಾರ ಬಳಿಗಾರ, ಆರೋಗ್ಯ ಇಲಾಖೆಯ ಶಂಕರ ಸುತಾರ, ಎನ್.ಸಿ.ಸಿ. ವಿದ್ಯಾರ್ಥಿಗಳು, ಆಶಾಕಾರ್ಯಕರ್ತೆಯರು ಹಾಗೂ ಆಹಾರ ಸುಕ್ಷರತೆ ಮತ್ತು ಗುಣಮಟ್ಟ ಕಾಯ್ದೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

        ಜಾಗೃತಿ ಜಾತಾಕ್ಕೆ ಚಾಲನೆ : ನವದೆಹಲಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನದ ಜ್ಞಾಪಕಾರ್ತವಾಗಿ ಹಮ್ಮಿಕೊಳ್ಳಲಾದ “ಸ್ವಸ್ಥ ಭಾರತ ಯಾತ್ರಾ” ಸೈಕಲ್ ಜಾತಾಕ್ಕೆ ನಗರದ ಗಾಂಧಿ ವೃತ್ತದಲ್ಲಿ ಶಾಸಕರಾದ ನೆಹರು ಓಲೇಕಾರ ಅವರು ಚಾಲನೆ ನೀಡಿದರು. ನಗರದ ಹುಕ್ಕೇರಿಮಠದವರೆಗೆ ಜಾತಾದಲ್ಲಿ ಶಾಸಕರು ಕಾಲ್ನಡಿಗೆ ಮೂಲಕ ತೆರಳಿ ಸಾರ್ವಜನಿಕರ ಗಮನ ಸೆಳೆದರು. ಜಾತಾದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕಾರ ಕುಂದೂರ, ಕೇಂದ್ರ ಸರ್ಕಾರದ ಜಾತಾ ಸಂಚಾಲಕ ಅಶೋಕ ಕುಮಾರ ಮಿಶ್ರಾ, ರಾಜ್ಯ ಸಂಚಾಲಕ ಕೆ.ವಿ.ಶ್ರೀನಿಧಿ, ಅಂಕಿತ ಅಧಿಕಾರಿ ಡಾ.ಜಗದೀಶ ಪಾಟೀಲ, ಆಹಾರ ಸುರಕ್ಷತಾ ಅಧಿಕಾರಿಗಳಾದ ಗಂಗಣ್ಣ ರಾಠೋಡ, ಕುಂದಗೋಳ, ಕೋರಿ, ಭಾರತೀಯ ವೈದ್ಯಕೀಯ ಸಂಸ್ಥೆಯ ಹಾವೇರಿ ಶಾಖೆಯ ಕಾರ್ಯದರ್ಶಿ ಡಾ.ಬಸವರಾಜ ಕೊಳ್ಳಿ, ಡಾ.ವಿಜಯಕುಮಾರ ಬಳಿಗಾರ, ಆರೋಗ್ಯ ಇಲಾಖೆಯ ಶಂಕರ ಸುತಾರ, ಎನ್.ಸಿ.ಸಿ. ವಿದ್ಯಾರ್ಥಿಗಳು, ಆಶಾಕಾರ್ಯಕರ್ತೆಯರು ಹಾಗೂ ಆಹಾರ ಸುಕ್ಷರತೆ ಮತ್ತು ಗುಣಮಟ್ಟ ಕಾಯ್ದೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಜಾಗೃತಿ ಕಾರ್ಯಕ್ರಮ:

         ಕೇಂದ್ರ ಬಸ್ ನಿಲ್ದಾಣದಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ, ಗಾಂಧಿ ವೃತ್ತದಲ್ಲಿ ಕಡಿಮೆ ಉಡುಪು, ಸಕ್ಕರೆ ಹಾಗೂ ಎಣ್ಣೆ ಬಳೆಸುವ ಕುರಿತಂತೆ ಆಹಾರದ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿದವು. ಸದರಿ ಕಾರ್ಯಕ್ರಮದ ಪೌಷ್ಠಿಕಾಂಶ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link