ಹೊಸಪೇಟೆ :
ತುಂಗಭದ್ರಾ ಎಡದಂಡೆ ಕೆಳಮಟ್ಟದ ಕಾಲುವೆಗಳಿಗೆ ಕರ್ನಾಟಕದ ಜೊತೆ ಆಂಧ್ರಕ್ಕೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಕಾರ್ಯಕರ್ತರು ತುಂಗಭದ್ರಾ ಮಂಡಳಿಯ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಮಾತನಾಡಿ, ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಡಿ.26ರಿಂದ ಮಾರ್ಚ್ 30, 2019ರ ವರೆಗೆ ತುಂಗಭದ್ರಾ ಎಡದಂಡೆ ಕೆಳಮಟ್ಟದ ಕಾಲುವೆಗೆ ನೀರು ಹರಿಸಲು ಕರ್ನಾಟಕ ನೀರಿನ ಜೊತೆಗೆ ಆಂಧ್ರಕ್ಕೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಎಲ್.ಎಲ್.ಸಿ.ಕಾಲುವೆಯ ತೂಬುಗಳು 3 ಅಡಿ ಎತ್ತರದಲ್ಲಿರುವುದರಿಂದ ಆಂಧ್ರದ ಪಾಲಿನ ನೀರನ್ನು ಮಾತ್ರ ಬಿಟ್ಟರೆ ಉಪಯೋಗವಾಗುವುದಿಲ್ಲ. ಹಾಗಾಗಿ ಕರ್ನಾಟಕ ಹಾಗು ಆಂಧ್ರದ ರಾಜ್ಯಗಳ ನೀರು ಒಟ್ಟಿಗೆ ಹರಿಸಿದಲ್ಲಿ ಮಾತ್ರ ಕರ್ನಾಟಕ ಕಾಲುವೆಗಳ ತೂಬುಗಳಿಗೆ ನೀರು ತಲುಪುತ್ತದೆ ಎಂದರು.
ನೀರು ಬಿಡುವುದರಲ್ಲಿ ತುಂಗಭದ್ರಾ ಮಂಡಳಿ ತಾರತಮ್ಯ ಮಾಡಬಾರದು. ಒಂದು ವೇಳೆ ತಾರತಮ್ಯ ಮಾಡಿದರೆ ಅದಕ್ಕೆ ಅವರೇ ಹೊಣೆಗಾರರಾಗಿ ರೈತರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ. ರೈತರ ಬೆಳೆಗಳನ್ನು ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುವುದರಿಂದ ಸರಿಯಾದ ಸಮಯಕ್ಕೆ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಎಸ್.ರುದ್ರಪ್ಪ, ಪದಾಧಿಕಾರಿಗಳಾದ ಬಿ.ಝಾಕೀರ್, ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ನಾಗೇಶ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
