ಕಾಂಗ್ರೇಸ್ ಕಾರ್ಯಕರ್ತರ ಸಭೆ

ಶಿಗ್ಗಾವಿ :

         ರಾಜಕೀಯದಲ್ಲಿ ಸೋಲು, ಗೆಲುವು ಸಹಜ ಹೀಗಾಗಿ ನಾನು ಸೋಲನ್ನು ಸಹಿಸಬಹುದು ಆದರೆ ಭಯೋತ್ಪಾದಕನೆಂಬ ಆರೋಪ ಮಾತ್ರ ಸಹಿಸಲಾಗುತ್ತಿಲ್ಲ, ಸತ್ಯಕ್ಕೆ ಜಯವಿದೆ ಎಂದು ನಂಬಿದ್ದೇನೆ, ಆ ದೇವರೇ ಅವರಿಗೆ ಶಿಕ್ಷೆ ನೀಡಲಿ ಎಂದು ಮಾಜಿ ಶಾಸಕ ಸಯ್ಯದ್ ಅಜ್ಜಪೀರ್ ಎಸ್ ಖಾದ್ರಿ ನುಡಿದರು.

         ಶುಕ್ರವಾರ ಪಟ್ಟಣದ ಶರೀಫ ಭವನದಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ರಾಜಕೀಯ ರಂಗದಲ್ಲಿ ಅತಿರಥ ಮಾರಥರು ಸಹ ಸೋಲು ಕಂಡಿದ್ದಾರೆ, ಸೋಲು ಮುಂದಿನ ಗೆಲುವಿನ ದಾರಿಯಾಗಿದೆ ಸುಳ್ಳು ಮೋಸ ಮಾಡಿ ಗೆದ್ದವರಿಗೆ ಕ್ಷೇತ್ರದ ಜನ ಪಾಠ ಕಲಿಸಲಿದ್ದಾರೆ ಎಂದರು.

          ಗುರು ಪರಂಪರೆ ನಮ್ಮದಾಗಿದ್ದು ನಾಲ್ಕು ಬಾರಿ ಸೋಲುಂಡರೂ ಜನರ ಮದ್ಯವಿದ್ದು ಸೇವೆ ಮಾಡಿದ್ದೇನೆ ಕ್ಷೇತ್ರದ ಜನರಿಗೆ ಮೋಸ ಮಾಡಿ ಸುಳ್ಳಿನ ರಾಜಕಾರಣ ಮಾಡಿದವರು ನೇರವಾಗಿ ನನ್ನನ್ನ ಸೋಲಿಸಲಾಗದೇ ದುಸ್ಕøತ್ಯದ ರಾಜಕಾರಣಕ್ಕೆ ಕೈ ಹಾಕಿ ಭಯೋತ್ಪಾದಕನಿಗೆ ಹೋಲಿಸಿದಿರಿ ದೇವರ ಮುಂದೆ ಪ್ರತಿಯೋಬ್ಬರೂ ತಲೆ ಬಾಗಲೇಬೇಕು ಅಲ್ಲಿ ಸತ್ಯದ ಅರಿವಾಗಲಿದೆ ಎಂದರು, ಶಾಸಕನಾಗಿದ್ದಾಗ ಶಿಗ್ಗಾವಿ, ಸವಣೂರ, ಬಂಕಾಪೂರ ಪಟ್ಟಣದ ಬಡವರಿಗೆ ತಲಾ ಎರಡು ಸಾವಿರ ಮನೆಗಳ ವ್ಯವಸ್ಥೆ ಕಲ್ಪಿಸಿದ್ದೆ ನಂತರದ ದಿನಗಳಲ್ಲಿ ಮನೆಗಳನ್ನೇ ಕಾಣದ ಬಡವರು ಸೂರಿಗಾಗಿ ಅಲೆದಾಡುತ್ತಿದ್ದಾರೆ ಎಂದು ಖಾದ್ರಿ ಆರೋಪಿಸಿದರು.

           ಮುಖಂಡ ಗುರುನಗೌಡ ಪಾಟೀಲ ಮಾತನಾಡಿ ಅಧಿಕಾರದ ದುರಾಶೆಗೆ ಸ್ಥಳಿಯ ಶಾಸಕರು ಕಾಂಗ್ರೇಸ್ ಅಭ್ಯರ್ಥಿಗೆ ಭಯೋತ್ಪಾದಕನೆಂಬ ಪಟ್ಟ ಕಟ್ಟಿ ಜಾತಿ ವಿಷಬೀಜ ಬಿತ್ತಿ ಗೆದ್ದಿದ್ದಾರೆ ಇನ್ನುಮುಂದೆ ಅವರ ಆಟ ನಡೆಯುವುದಿಲ್ಲ ಸವಣೂರ ಪುರಸಭೆ ಚುನಾವಣೆಯಲ್ಲಿ ಮನೆಮನೆಗೆ ಹೋಗಿ ದುಡಿಯುವರಿದ್ದರೂ ಜನ ಬೆಂಬಲ ಸಿಗಲಿಲ್ಲ ಕಾಂಗ್ರೇಸ್ ಪರ ಫಲಿತಾಂಶ ಬಂದ ಬಳಿಕ ತಲೆ ತಗ್ಗಿಸುವಂತಾಗಿದೆ ಎಂದರು.

           ಮುಖಂಡ ಫಕ್ಕೀರಗೌಡ ಪಾಟೀಲ ಮಾತನಾಡಿ ಪಕ್ಷದ ತತ್ವ ಸಿದ್ದಾಂತಗಳಡಿ ಶಕ್ತಿ ಕೇಂದ್ರ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕರೆ ನೀಡಿದರು.

         ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಮ್ ಎನ್ ವೆಂಕೋಜಿ ಕ್ಷೇತ್ರದಲ್ಲಿ ಹುಬ್ಬಳ್ಳಿ ಜನರ ಅಧಿಕಾರ ನಡೆಯುತ್ತಿದೆ ಕ್ಷೇತ್ರದ ಜನರದಲ್ಲ ಈ ವರ್ತನೆಯಿಂದ ಬಿಜೆಪಿ ಮುಂಖಂಡರು ದಿನಕ್ಕೊಬ್ಬರಂತೆ ಪಕ್ಷದ ಕಾಲು ಕೀಳುತ್ತಿದ್ದಾರೆ ಎಂದರು.

          ಎಪಿಎಮ್‍ಸಿ ಉಪಾದ್ಯಕ್ಷ ಹನುಮರೆಡ್ಡಿ ನಡುವಿನಮನಿ, ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಸವಣೂರ ಅದ್ಯಕ್ಷ ಬಾಗಪ್ಪ ತಿಪ್ಪಕ್ಕನವರ, ಎಸ್ ಎಫ್ ಮಣಕಟ್ಟಿ ಮಾತನಾಡಿದರು.ಜಿಲ್ಲಾ ಅದ್ಯಕ್ಷ ಎಸ್ ಸಿ ಶಿಡೇನೂರ, ಜಿಪಂ ಸದಸ್ಯ ಬಸವರಾಜ ದೇಸಾಯಿ, ವೀರೇಶ ಆಜೂರ, ಕೇದಾರಪ್ಪ ಬಗಾಡೆ, ಈರಪ್ಪ ಅಂಗಡಿ, ಎನ್ ಬಿ ಕಟಗಿ, ಎ ಸಿ ಜಮಾದಾರ, ಅಹಮದ ಜಾನ್ ಫಠಾಣ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು..

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link