ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

ತುಮಕೂರು:

         ಗಂಡ ಹಾಗೂ ಆತನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ, ಮಾನಸಿಕ ದೌರ್ಜನ್ಯ ಆಗುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದು, ದೂರನ್ನು ಆಧರಿಸಿ ಪ್ರಕರಣ ದಾಖಲಾಗಿದೆ.

        ಉಪ್ಪಾರಹಳ್ಳಿಯ ಶಾರೀಕ ಅವರ ವಿವಾಹವು 2015 ರಂದು ಫಾಸಿಲ್ ಅಹಮದ್ ಎಂಬುವರೊಂದಿಗೆ ನೆರವೇರಿತ್ತು. ವಿವಾಹದ ಸಮಯದಲ್ಲಿ ಗೃಹೋಪಯೋಗಿ ವಸ್ತುಗಳು, ಬಂಗಾರದ ಚೈನು, ಉಂಗುರ, ಒಂದು ದ್ವಿಚಕ್ರ ವಾಹನ ಸೇರಿದಂತೆ 17ಲಕ್ಷ ರೂ.ಗಳನ್ನು ಖರ್ಚು ಮಾಡಿ ವಿವಾಹ ಮಾಡಿಕೊಡಲಾಗಿತ್ತು.

           ಪತಿ ಬೆಸ್ಕಾಂ ಕಛೇರಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದು, ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಆನಂತರ ಕಿರುಕುಳ ನೀಡಲು ಪ್ರಾರಂಭಿಸಿದರು. ಅತ್ತೆ ತಾಹೀರಾ ಬೇಗಂ, ಅಣ್ಣ ವಾಸೀಂ ಅಹಮದ್ ಇವರೆಲ್ಲ ಸೇರಿಕೊಂಡು ನನ್ನನ್ನು ನಿರ್ಲಕ್ಷಿಸುತ್ತಾ ಬಂದರು. ಮಗು ಹುಟ್ಟಿದ ನಂತರವೂ ಕಿರಕುಳ ತಪ್ಪಲಿಲ್ಲ. ಸೈಟು ಬರೆಸಿಕೊಡಲು ಒತ್ತಾಯ ಮಾಡಿದರು. ನನಗೆ ಪ್ರಾಣ ಭಯವೂ ಉಂಟಾಯಿತು ಇತ್ಯಾದಿಯಾಗಿ ಮಹಿಳೆ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 498 ಎ, 506, 34, ಡಿ.ಪಿ.ಕಾಯ್ದೆ ಕಲಂ 3 ಮತ್ತು 4 ರ ಅನ್ವಯ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link