ಹಾನಗಲ್ಲ :
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿರುವುದಕ್ಕೆ ಹಾನಗಲ್ಲಿನ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಮಂಗಳವಾರ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ಅವರು ಮುಂಬರುವ ದೇಶದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಘೋಷಣೆಗಳನ್ನು ಕೂಗಿದರು.
ಹಾನಗಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟೀಲ, ಅಕ್ಕಿಆಲೂರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಹಾನಗಲ್ಲ ನಗರಾಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ಯುಥ್ ಕಾಂಗ್ರೆಸ್ ಅಧ್ಯಕ್ಷ ಬಸಲಿಂಗಯ್ಯ ಕಂಬಾಳಿಮಠ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ವಿಷ್ಣುಕಾಂತ ಜಾಧವ, ಮಂಜು ನೀಲಗುಂದ, ದಾನಪ್ಪ ಗಂಟೇರ, ಇನಾಂದಾರ, ರಾಜಕುಮಾರ ಶಿರಪಂಥಿ, ವಿಕಾಸ ನಿಂಗೋಜಿ, ಗುರುರಾಜ ನಿಂಗೋಜಿ, ಗುಡ್ಡಪ್ಪ ಗೋಯಿಕಾಯಿ, ರಾಮೂ ಯಳ್ಳೂರ, ರಾಜೂ ಗುಡಿ, ಶಕೀಲ ಬಾಳೂರ, ಸುಲೇಮಾನ, ಶಿವು ಭದ್ರವಾತಿ, ಬಸವರಾಜ ಹಾದಿಮನಿ, ಸಂತೋಷ ಸುಣಗಾರ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








