ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ್

ಹರಪನಹಳ್ಳಿ,

        ಭಾರತದ ಗೌರವ ಹೆಚ್ಚಿಸಲು ನರೇಂದ್ರ ಮೋದಿ ವಿದೇಶಕ್ಕೆ ಹೋಗುತ್ತಾರೆ, ಆದರೆ ರಾಹುಲ್ ಗಾಂಧಿ ಯಾರಿಗೂ ಗೊತ್ತಿಲ್ಲದಂತೆ ನಾಪತ್ತೆ ಯಾಗುತ್ತಾರೆ, ಯಾವಾಗ ರಾಹುಲ್ ಗಾಂಧಿ ದೇಶದಲ್ಲಿ ಇರುವುದಿಲ್ಲವೊ, ರಮ್ಯ ಸಹ ಭಾರತದಲ್ಲಿ ಇರುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ,ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

        ಅವರು ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಅವರ ಪರವಾಗಿ ಮತ ಯಾಚನೆ ಮಾಡಿ ಶುಕ್ರವಾರ ಮಾತನಾಡಿದರು.

        ರಾಹುಲ್ ಗಾಂಧಿ ಮೂರು ತಿಂಗಳಿಗೊಮ್ಮೆ ಎಲ್ಲಿ ಹೋಗುತ್ತಾರೊ ಗೊತ್ತಿಲ್ಲ, ನೋಡಿ ಬೇಕಾದರೆ ಚುನಾವಣೆ ಮುಗಿದ ಮೇಲೆ 15 ದಿವಸ ಗಪ್ ಆಗಿರುತ್ತಾರೆ, ಇವರು ವಿದೇಶಕ್ಕೆ ಚೈನಿ ಹೊಡೆಯಲಿಕ್ಕೆ ಹೋಗುತ್ತಾರೆ,ಎಂದು ದೂರಿದರು.5 ವರ್ಷದಲ್ಲಿ ಮೋದಿ ಜಗತ್ತು ಸುತ್ತಿ 500 ಕೋಟಿ ರು.ಗಳನ್ನು ಖರ್ಚು ಮಾಡಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಾರೆ, ಆದರೆ ಯುಪಿಎ ಸರ್ಕಾರ ವಿದ್ದಾಗ ಸೋನಿಯಾಗಾಂಧಿಯವರನ್ನು ಯುಪಿಎ ಛೇರಮನ್ ಮಾಡಿದರು, ಆದೇನು ಅಧಿಕೃತ ಫೋಸ್ಟ ಅಲ್ಲ, ಹೀಗೆ ಸೃಷ್ಠಿ ಮಾಡಿ ವಿದೇಶzಲ್ಲಿ ಅವರ ಚಿಕಿತ್ಸೆಗೆ 200 ಕೋಟಿ ಖರ್ಚು ಮಾಡಿದ್ದರು ಎಂದು ದೂರಿದರು.

       ಪುಲ್ವಾಮ ಘಟನೆ ನಂತರ 40 ಸೈನಿಕರು ಹುತಾತ್ಮರಾಗಿದ್ದು, ಅದರ ಸೇಡನ್ನು 11 ದಿವಸ ದ ನಂತರ ಪಾಕಿಸ್ಚಾನಕ್ಕೆ ನುಗ್ಗಿ ಭಯೋತ್ಪಾದನೆ ಕಾರ್ಖಾನೆ ಮೇಲೆ ಬಾಂಬ್ ದಾಳಿ ನಡೆಸಿ ಉಗ್ರರನ್ನು ಸದೆ ಬಡಿದು, ನಾವು ಪ್ರಬಲ ಎಂದು ತೋರಿಸಿದರು.
ಬಡವರಿಗೆ ನೇರವಾಗಿ ಸಹಾಯವಾಗುವ ಜನೌಷದಿ, ಗ್ಯಾಸ್ ಸಿಲಿಂಡ,ರ, ರಸಗೊಬ್ಬರದ ಸಬ್ಸಿಡಿ, ವಾಜಪೇಯಿ ವಸತಿ ಇರಬಹುದು ನೇರವಾಗಿ ಅವರ ಖಾತೆಗೆ ಹಣ ಹಾಕುವ ಕೆಲಸ ಮೋದಿ ಮಾಡಿದ್ದಾರೆ ಮದ್ಯಮ ರೈತರಿಗೆ 6 ಸಾವಿರ ಕೊಡುವ ಕಾರ್ಯಕ್ರಮ ಹೀಗೆ ಅನೇಕ ಯೋಜನೆಗಳನ್ನು ಮೋದಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

       ಇದು ಜಿ.ಪಂ, ತಾ.ಪಂ ಚುನಾವಣೆಯಲ್ಲ, ಬೀಗರಿದ್ದಾರೆ , ಬಿಜ್ಜರಿದ್ದಾರೆ ಎಂದು ಹೇಳಲು, ಇದು ದೇಶದ ಚುನಾವಣೆ, ದೇಶ ಉಳಿದರೆ ಜನ ಉಳಿಯುತ್ತಾರೆ ಎಂದ ಅವರು ಜನರ ಹಿತಕ್ಕಾಗಿ ಇರುವ ಪ್ರಧಾನ ಮಂತ್ರಿಗಳು ಮೋದಿಯವರು. ಆದ್ದರಿಂದ ದೇಶಕ್ಕೆ ನರೇಂದ್ರ ಮೋದಿ, ದಾವಣಗೆರೆಗೆ ಸಿದ್ದೇಶ್ವರ ಅಗತ್ಯ, ಬಿಜೆಪಿಗೆ ಮತ ಕೊಡಿ ಎಂದು ಅವರು ಕೋರಿದರು.

       ಶಾಸಕ ಜಿ.ಕರುಣಾಕರರೆಡ್ಡಿ, ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿದರು. . ಪುರಸಭಾ ಮಾಜಿ ಅಧ್ಯಕ್ಷ ಎಚ್ .ಕೆ. ಹಾಲೇಶ, ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ,, ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣ ಹಾಲಪ್ಪ, ಬಿ.ವೈ,.ವೆಂಕಟೇಶನಾಯ್ಕ, ಯು.ಪಿ.ನಾಗರಾಜ, ಸಂತೋಷ, ಲಿಂಬ್ಯಾನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap