ತುಮಕೂರು:
ಲಾರಿಯೊಂದು ಅಪರಿಚಿತ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ. ಮೃತ ವ್ಯಕ್ತಿ ತಿಮ್ಮರಾಜನಹಳ್ಳಿ ಗ್ರಾಮದ ಬಳಿ ಸಿರಾ ತುಮಕೂರು-ಎನ್.ಎಚ್.48 ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ.
ಸುಮಾರು 45 ವರ್ಷದ ಈ ವ್ಯಕ್ತಿ ದುಂಡುಮುಖ, ಎಣ್ಣೆಗೆಂಪು, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ಶಾಂತಮ್ಮ, ದಿವ್ಯದತ್ತ ಎಂತ ಕಪ್ಪು ಹೆಚ್ಚೆ ಇರುತ್ತೆ. ಮೃತನ ಮೈಮೇಲೆ ಹಳದಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್, ಒಂದು ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಒಂದು ಕಪ್ಪನೆಯ ಬರ್ಮಡ ನಿಕ್ಕರ್ ಧರಿಸಿದ್ದಾನೆ. ಈ ಚಹರೆಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ತುಮಕೂರು ಗ್ರಾಮಾಂತರ ಪೊಲೀಸರನ್ನಾಗಲಿ ಅಥವಾ 9480802931 ಇವರನ್ನು ಸಂಪರ್ಕಿಸುವುದು.