ಕೂರಿಗೆ ಭತದ್ತ ಬೆಳೆಯಿಂದ ಹೆಚ್ಚಿನ ಲಾಭ

ಹರಿಹರ:

        ಕಡಿಮೆ ಖರ್ಚು ಮಾಡಿ ಉತ್ತಮವಾದ ಬೆಳೆಯನ್ನು ಬೆಳೆಯಬಹುದಾಗಿದೆ ಹಾಗೂ ಕೂರಿಗೆ ಭತ್ತ ಬಿತ್ತನೆ ಮಾಡಿದ ಫಲಾನುಭವಿಗೆ ಪ್ರತಿ ಹೆಕ್ಟೇರ್‍ಗೆ ರೂ.4000/- ಪ್ರೋತ್ಸಾಹಧನ ನೀಡಲಾಗುವುದು ಎಂದುಜಂಟಿ ಕೃಷಿ ನಿರ್ದೇಶಕರಾದ .ಶರಣಪ್ಪ ಮುದಗಲ್ ಹೇಳಿದರು.
ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಆತ್ಮ ಯೋಜನೆಯಡಿ ಶ್ರೀ.ಹನುಮಂತಪ್ಪ ಇವರ ಜಮೀನಿನಲ್ಲಿ ಕೂರಿಗೆ ಭತ್ತದ ಕ್ಷೇತ್ರೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೂರಿಗೆ ಭತ್ತದ ಬೇಸಾಯದಿಂದಾಗುವ ಲಾಭಗಳನ್ನು ರೈತರು ಉತ್ತಮ ಇಳುವರಿಯನ್ನು ಪಡೆಯಬಹುದು ಎಂದರು.

          ಬಿತ್ತನೆಗೆ 8-12ಕಿ.ಗ್ರಾಂ ಬೀಜ ಸಾಕಾಗುತ್ತದೆ ನೀರಿನ ಉಳಿತಾಯ ಮತ್ತು ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಕಡಿಮೆ ರಸಗೊಬ್ಬರ ಬಳಕೆ ರೋಗ ಕೀಟಭಾದೆ ಇರುವುದಿಲ್ಲ ಉತ್ತಮವಾದ ಬೆಳೆಗಳನ್ನು ಬೆಳೆದು ಹೆಚ್ಚಿನ ಲಾಭವನ್ನು ರೈತರು ಸಮಯವನ್ನು ಉಳಿಸಬಹುದು ಎಂದು ತಿಳಿಸಿದರು.

         ನಂತರ ಕೃಷಿ ನಿರ್ದೇಶಕರಾದ .ವಿ.ಪಿ.ಗೋವರ್ಧನ್ ಮಾತನಾಡಿ ಕೂರಿಗೆ ಭತ್ತದ ಬಿತ್ತನೆ ಮಾಡುವುದರಿಂದ ರೈತರ ಸಮಯ ಹಣವನ್ನು ಉಳುತಾಯ ಮಾಡಬಹುದು ಹಾಗೂ ಕೊಂಡಜ್ಜಿ ಗ್ರಾಮದಲ್ಲಿನ ಹೆಚ್ಚಿನ ರೈತರು ಸಹ ಈಪದ್ದತೆಯನ್ನು ಆಳವಡಿಸಿಕೊಂಡು ಈಗಿನ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ಬೇಸಾಯ ಮಾಡುವುದರಿಂದ ಹೆಚ್ಚಿನ ಲಾಭವನ್ನು ರೈತರು ಕಂಡುಕೊಳ್ಳಬಹುದು ಎಂದರು.
ನಂತರ ರೈತರಾದ ಬಿ.ಎಸ್.ರವಿಕುಮಾರ ಮತ್ತು ಎಂ.ಜಿ.ಜಗದೀಶ್ ಇವರು ತಾವು ಬೆಳೆದಂತಹ ಕೂರಿಗೆ ಭತ್ತದ ಬೆಳೆಯ ಕುರಿತು ತಮ್ಮ ಅನುಭವ ಮತ್ತು ಅದರಿಂದ ಆಗುವ ಲಾಭನಷ್ಟಗಳ ಬಗ್ಗೆ ರೈತರಗೆ ಈ ರೀತಿಯ ಬೆಳೆಗಳನ್ನು ಬೆಳೆದು ಸಾಲದಿಂದ ಮುಕ್ತಿ ಹೊಂದಿ ನೆಮದಿಯ ಜೀವನ ನಡೆಸಬಹುದು ಎಂದರು.

         ಕೃಷಿ ವಿಜ್ಞಾನಿಗಳಾದ ಡಾ||ರಾಮಪ್ಪ ಪಾಟೀಲ್ ಮತ್ತು ಡಾ||ಮಲ್ಲಿಕಾರ್ಜುನ ಇವರು ಕೂರಿಗೆ ಭತ್ತದ ಬೇಸಾಯ ಕುರಿತು ಉಪನ್ಯಾಸ ನೀಡಿದರು. ಮತ್ತು ಕ್ಷೇತ್ರೋತ್ಸವಕ್ಕೆ ಆಗಮಿಸಿದ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.

        ಈ ಸಂದರ್ಭದಲ್ಲಿ ಕೊಂಡಜ್ಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪ ಕೃಷಿ ನಿರ್ದೇಶಕ ಶಿವಕುಮಾರ,ಇಲಾಖೆಯ ಅಧಿಕಾರಿಗಳಾದ .ಎಸ್.ನಟರಾಜ್,.ಮೊಹಮ್ಮದ್ ರಫಿವುಲ್ಲಾರಿಜ್ವಿ, ಸಹಾಯಕ ಸಿ.ಕೆ.ಮಲ್ಲಿಕಾರ್ಜುನಯ್ಯ, ಎಂ.ಎಂ.ಹುಣಸೀಕಟ್ಟಿ, ದೇವೇಂದ್ರಪ್ಪ ಮತ್ತು ಆತ್ಮ ಯೋಜನೆಯ ಚಂದ್ರಶೇಖರಪ್ಪ ಜಿ.ಎಂ.ರಾಕೇಶ ಎಂ.ವಿ.ಪ್ರಸಾದ ಬಿ.ಎಂ. ಹಾಗೂ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಬೆಳ್ಳೂಡಿ, ಬಿಳಸನೂರು, ಉಕ್ಕಡಗಾತ್ರಿ, ಹಿಂಡಸಘಟ್ಟ, ಹಳ್ಳಿಹಾಳು, ಕುಂಬಳೂರು, ಕಮಲಾಪುರ, ಡಿ.ಬಿ.ಕೆರೆ., ಹೊಳೆಸಿರಿಗೆರೆ ಗ್ರಾಮದ ರೈತರು. ಮತ್ತಿತರರು ಉಪಸ್ಥಿತರಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link