ಹಾವೇರಿ :
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯತೆ ಕಂಡಿದ್ದು, ಉತ್ತರ ಪ್ರದೇಶದಲ್ಲಿ ದೀನ, ದಲಿತರ ಹಿಂದುಳಿದ ಹಾಗೂ ಬಡವರಿಗೆ ಅನೇಕ ಜನೋಪಯೋಗಿ ಯೋಜನೆಗಳ ಕೆಲಸಗಳಿಗೆ ಹೆಸರುವಾಸಿಯಾದ ಮಾಜಿ ಮುಖ್ಯಮಂತ್ರಿಗಳಾದ ಅಕ್ಕ ಮಾಯಾವತಿಯವರು ಜನನಾಯಕರಾಗಿ ಬೆಳೆದಿದ್ದು, ಉತ್ತಮ ಆಡಳಿತಕ್ಕೆ ಅಕ್ಕ ಮಾಯಾವತಿಯವರ ಅವಶ್ಯಕತೆ ಇದೆ
ಈ ಲೋಕಸಭಾ ಚುನಾವಣೆಯಲ್ಲಿ ಇವರ ಕೈ ಬಲಪಡಿಸಲು ನಾನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು,ಕ್ಷೇತ್ರದ ಹಾವೇರಿ-ಗದಗ ಜಿಲ್ಲೆಯಗಳ ಎಲ್ಲ ವರ್ಗದ ಮತದಾರರು ನಮ್ಮನ್ನು ಬೆಂಬಲಿಸಿ ಜಯಶಾಲಿಯಾಗುವಂತೆ ಮಾಡಲಿದ್ದಾರೆ ಎಂದು ಬಿಎಸ್ಪಿ ಪಕ್ಷದ ಅಭ್ಯರ್ಥಿ ಅಯೂಬಖಾನ ಪಠಾಣ ಹೇಳಿದರು. ನಗರದ ಖಾಸಗಿ ಹೋಟೆಲಿನಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ.
ಕಾಂಗ್ರೇಸ್ ಬಡವರ ಹೆಸರು ಹೇಳಿ ಓಟು ಪಡೆಯುವ ಹಾಗೂ ಬಿಜೆಪಿ ಪಕ್ಷದವರು ಸುಳ್ಳು ಹೇಳಿ ಭಾವನಾತ್ಮಕ ವಿಚಾರದಲ್ಲಿ ಓಟು ಪಡೆಯುವ ಕಾಲ ಮುಗಿದಿದೆ. ಈಗ ಬಹುಜನರ ಪರವಾಗಿರುವ ಬಿಎಸ್ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಡಳಿತದ ಬಗ್ಗೆ ಜನರು ಒಲವು ತೊರುತ್ತಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಸಂಸದರಾದ ಶಿವಕುಮಾರ ಉದಾಸಿ ಇಲ್ಲಿನ ಸಮಸ್ಯೆಗಳ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಉದಾಸಿಯವರಿಗೆ ಚುನಾವಣೆ ಬಂದರೆ ಮಾತ್ರ ಜನರ ನೆನಪು ಆಗುತ್ತದೆ. ಕಾಂಗ್ರೇಸ್ ಪಕ್ಷದವರಿಗೂ ಹಾಗೆ ಇವರನ್ನು ಜನರ ನೋಡಿದ್ದಾರೆ.
ನಾನು ಕ್ಷೇತ್ರದಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದು ಜನರ ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ಆಲಿಸಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಿ ಗೆಲ್ಲಿಸಿದರೆ ಮಾದರಿ ಕ್ಷೇತ್ರ ಮಾಡಲು ದುಡಿಯುತ್ತೇನೆ ಎಂದು ಬಿಎಸ್ಪಿ ಪಕ್ಷದ ಅಭ್ಯರ್ಥಿ ಅಯೂಬಖಾನ ಪಠಾಣ ಹೇಳಿದರು.
ಬಿಎಸ್ಪಿ ಪಕ್ಷ ಎಲ್ಲ ವರ್ಗದ ಜನರ ಆಶೋತ್ತರಗಳ ಇಡೇರಿಕೆಗೆ ಒತ್ತು ನೀಡುತ್ತದೆ.ಜನಪರ ಕೆಲಸ ಮಾಡಲು ಅಕ್ಕ ಮಾಯಾವತಿ ಸಿದ್ದರಾಗಿದ್ದಾರೆ.ಪ್ರತಿ ಕುಟುಂಬದವರಿಗೂ ಸರ್ಕಾರಿ ನೌಕರಿ,ಭೂರಹಿತರಿಗೆ 2 ಎಕರೆ ಜಮೀನು,ಶಿಕ್ಷಣ ಉದ್ಯೋಗ, ಜನರ ಮತ್ತು ದೇಶದ ರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರಗಳ ಬಲವರ್ದನೆ ಹೆಚ್ಚು ಒತ್ತು ನೀಡಿ ಯುವಕರಿಗೆ, ಮಹಿಳೆಯರಿಗೆ ನೂತನ ಯೋಜನೆಗಳ ಮೂಲಕ ಸುಭದ್ರ ರಾಷ್ಟ ನಿರ್ಮಾಣಕ್ಕೆ ಬಿಎಸ್ಪಿ ಪಕ್ಷದ ಆಡಳಿತ ಅವಶ್ಯಕ.
ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರು ಮತ ಯಂತ್ರದ 1 ನೇ ನಂಬರಿನ ಆನೆ ಗುರುತಿಗೆ ಮತ ಹಾಕುವ ಮೂಲಕ ಗೆಲ್ಲಿಸಿಸುವಂತೆ ಅಯೂಬಖಾನ ಪಠಾಣ ವಿನಂತಿಸಿಕೊಂಡರು. ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಮಾತನಾಡಿ ಹಾವೇರಿ ಲೋಕಸಭಾ ಕ್ಷೇತ್ರದ ಗದಗ-ಹಾವೇರಿ ಜಿಲ್ಲೆಗಳ ಮತದಾರ ಬಂದುಗಳು ನಮ್ಮ ಪಕ್ಷದ ಅಭ್ಯರ್ಥಿ ಅಯೂಬಖಾನ ಪಠಾಣ ಬೆಂಬಲಿಸಿ ಮತಯಂತ್ರದ 1 ನೇ ನಂಬರಿನ ಆನೆ ಗುರುತಿಗೆ ಮತ ಹಾಕುವ ಮೂಲಕ ಗೆಲ್ಲಿಸುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ಮುಖಂಡರಾದ ಅಬ್ದುಲಖಾದರ ಧಾರವಾಡಕರ.ಶಿವಕುಮಾರ ತಳವಾರ.ಅಬ್ದುಲ್ ಎಂಕೆ. ಶಂಭುಲಿಂಗ ಎಚ್. ಮಂಜುನಾಥ ಟಿ. ವಿಜಯಕುಮಾರ ವಿರಕ್ತಮಠ ಅನೇಕರು ಪಾಲ್ಗೊಂಡಿದ್ದರು.