ಹಾವೇರಿ 
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ 19 ಅಭ್ಯರ್ಥಿಗಳಿಂದ 30 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಬಿಜೆಪಿ., ಬಿಎಸ್‍ಪಿ ಸೇರಿದಂತೆ 11 ಅಭ್ಯರ್ಥಿಗಳಿಂದ 17 ನಾಮಪತ್ರಗಳು ಸಲ್ಲಿಕೆಯಾದವು.
ಗುರುವಾರ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಶಿವಕುಮಾರ ಚನ್ನಬಸಪ್ಪ ಉದಾಸಿ (ನಾಲ್ಕು ನಾಮಪತ್ರ), ಬಿ.ಎಸ್.ಪಿ. ಅಭ್ಯರ್ಥಿ ಆಯೂಬಖಾನ್ ಪಠಾಣ(ನಾಲ್ಕು ನಾಮಪತ್ರ) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಕೂರಗುಂದ ಗ್ರಾಮದ ಚಂದ್ರಪ್ಪ ಅಡ್ಡಿಕಾರ, ಹಾನಗಲ್ ತಾಲೂಕಿನ ದ್ಯಾಮನಕೊಪ್ಪದ ಹಾಶಂಪೀರಾ ಇನಾಂದಾರ, ರಾಮತೀರ್ಥ ಹೊಸಕೊಪ್ಪದ ಮಖ್ಬೂಲ್ ಅಹ್ಮದ ಮುಲ್ಲಾ, ಸವಣೂರಿನ ನಜೀರ್ ಅಹ್ಮದ್, ಬ್ಯಾತನಹಳ್ಳಿಯ ರಾಮಮಪ್ಪ ಸಿದ್ದಪ್ಪ ಬೊಮ್ಮಾಜಿ, ಮೂಡುರಿನ ವಿರೇಶ ಮಲ್ಲಪ್ಪ ಕಿರವಾಡಿ, ಬೊಮ್ಮನಹಳ್ಳಿಯ ಶಿದ್ದಪ್ಪ ಕಲ್ಲಪ್ಪ ಪೂಜಾರ, ರಾಣೇಬೆನ್ನೂರಿನ ಡಾ.ಟೀಪುಸಾಬ ಹುಸೇನಸಾಬ ಕಲಕೋಟಿ, ಶಿಗ್ಗಾಂವಿಯ ಇಸ್ಮಾಯಿಲ್ ಮುತ್ತುಬಾಯಿ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣಾ ಬಾಜಪೇಯಿ ಅವರಿಗೆ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.ಎಪ್ರಿಲ್ 5 ರಂದು ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ, ಎಪ್ರಿಲ್ 8 ರಂದು ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








