ರಾಣಿಬೆನ್ನೂರು
ಭವ್ಯ ಭಾರತವು ಆರ್ಥಿಕವಾಗಿ ಸಬಲತೆ ಸಾಧಿಸಲು ಚಾರ್ಟೆಡ್ ಅಕೌಂಟೆಂಟ್‍ರ್‍ಗಳ ಸೇವೆ ಅಮೂಲ್ಯವಾಗಿದೆ ಎಂದು ಕೇರ್ ಅಕಾಡೆಮಿ ನಿರ್ಧೇಶಕ ಬಿ.ವಿ. ರಮಣಕುಮಾರ ಹೇಳಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಶಿಕ್ಷಣದ ನಂತರ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮನೆ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು ವಿದ್ಯಾರ್ಥಿಗಳು ಈ ದ್ವಂದ್ವದಿಂದ ಹೊರಬರಲು ಕೇರ್ ಅಕಾಡೆಮಿ ಸಂಸ್ಥೆಯು ಡಾವಣಗೇರೆಯಲ್ಲಿ ಕಳೆದ 5 ವರ್ಷದಿಂದ ಸಿಎ ವ್ಯಾಸಾಂಗಕ್ಕೆ ಸಮಾನವಾದ ಸಿಎಮ್‍ಎ ಕೋರ್ಸನ್ನು ನೀಡುತ್ತಿದ್ದು ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.
ಮಾಸ್ಟರ್ಸ್ ಎಜ್ಯುಕೇಶನ್ ಟ್ರಸ್ಟ್‍ನ ಕೇರ್ ಅಕಾಡೆಮಿ ಸಂಸ್ಥೆಯು ಉತ್ಕ್ರಷ್ಟವಾದ ಶಿಕ್ಷಣ ಒದಗಿಸುತ್ತಿದ್ದು ಪ್ರಶಂಸೆಗೆ ಒಳಗಾಗಿದ್ದು ಇದನ್ನು ರಾಣೇಬೆನ್ನೂರು ನಗರದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಲು ತಿರ್ಮಾನಿಸಿದ್ದು ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಸಿಎ ಮತ್ತು ಸಿಎಮ್‍ಎ ಕೋರ್ಸ ಪಡೆದವರು ಇದುವರೆಗೂ ನಿರುದ್ಯೋಗಿಗಳಾದ ಒಂದು ಉದಾಹರಣೆ ಇಲ್ಲ. ಸಮಾಜದಲ್ಲಿ ಈ ಕೋರ್ಸ್ ಪಡೆದವರಿಗೆ ಸಂಪಾದನೆಯ ಜೊತೆಗೆ ಗೌರವ ಸ್ಥಾನ ಇದ್ದು ಕನಿಷ್ಠವೆಂದರೂ ವಾರ್ಷಿಕವಾಗಿ 10 ಲಕ್ಷ ರೂ. ಸಂಪಾದಿಸಬಹುದು ಆದ್ದರಿಂದ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಪಡೆದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.