ಹಾವೇರಿ :
ತಾಲೂಕಿನ ನೆಲೋಗಲ್ ಗ್ರಾಮದ ಹತ್ತಿರವಿರುವ ರೈಲ್ವೇ ಬ್ರಿಜ್ ಮೇಲೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಯ ಅಕ್ಕಪಕ್ಕದಲ್ಲಿ ಸಾಕಷ್ಟು ಕಸದೊಂದಿಗೆ ಮುಳ್ಳಿನ ಗಿಡಗಳ ಟೊಂಗೆಗಳು ಬೆಳೆದು ನಿಂತು ವಿವಿಧ ವಾಹನಗಳ ಸಂಚಾರರಿಗೆ ತೀವ್ರವಾದ ತೊಂದರೆಯನ್ನು ಕೊಡುತ್ತಲಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಮೇಲ್ಸೇತುವೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಕಂಟಿಯ ಟೊಂಗೆಗಳು ದ್ವಿಚಕ್ರ ವಾಹನ ಹಾಗೂ ಟಾಂಟಾಂ ವಾಹನ ಸೇರಿದಂತೆ ಇತರೇ ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿಯನ್ನು ಮಾಡುತ್ತಲಿವೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಲಿವೆ.
ದೊಡ್ಡವಾಹನಗಳು ರಸ್ತೆಯ ಅಂಚಿನತ್ತ ಸಂಚರಿಸುತ್ತಿರುವ ಸಂದರ್ಭದಲ್ಲಿ ಮತ್ತು ದೊಡ್ಡ ವಾಹನಗಳು ಎದರು ಬದರು ಕೂಡಿದ ಸಮಯದಲ್ಲಿ ದ್ವೀಚಕ್ರ ಹಾಗೂ ಟಾಂಟಾಂ ವಾಹನ ಚಾಲಕರು ಸಂಚಾರಿಸಲು ಭಯ ಪಡುವಂತಾಗಿದೆ. ಇನ್ನೂ ರಾತ್ರಿಯಾದರಂತೂ ಕೆಲ ದ್ವೀಚಕ್ರವಾಹನ ಸವಾರರು ಮುಳ್ಳಿನ ಗಿಡಗಂಟಿಯ ಟೊಂಗೆಯಲ್ಲಿ ಸಿಲಿಕಿಕೊಂಡಿರುವ ಘಟನೆಗಳು ಜರುಗಿ ಮುಳ್ಳಿನ ಗಿಡಗಂಟಿಗಳ ಟೊಂಗೆಗಳು ಮೈಕೈ ಪರಚಿ ಘಾಯಗಳನ್ನು ಮಾಡಿದ ಉದಾಹರಣೆಗಳು ಸಾಕಷ್ಟಿವೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಮೇಲ್ಸೇತುವೆಯ ಹತ್ತಿರವಿರುವ ರಸ್ತೆಯ ಅಂಚಿಗೆ ಹೊಂದಿಕೊಂಡು ಬೆಳೆದಿರುವ ಮುಳ್ಳಿನ ಟೊಂಗೆಗಳಿಂದ ದ್ವೀಚಕ್ರ ವಾಹನ ಸವಾರರು ತಪ್ಪಿಸಿಕೊಳ್ಳಲು ದಿನ ನಿತ್ಯ ನಾನಾ ಕಸರತ್ತನ್ನು ಮಾಡುತ್ತಿದ್ದಾರಲ್ಲದೇ ಇದರಿಂದಾಗಿ ಅನೇಕ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲಿವೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಇನ್ನಾದರೂ ಎಚ್ಚರಗೊಂಡು ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆರವು ಗೊಳಿಸಿ ದ್ವಿಚಕ್ರ, ಟಾಂಟಾಂ ವಾಹನ ಸೇರಿದಂತೆ ಇನ್ನಿತರೇ ವಾಹನ ಸವಾರರಿಗೆ ಸುಗಮವಾಗಿ ಪ್ರವಾಣಿಸಲು ಅನುಕೂಲ ಕಲ್ಪಿಸಿ ಕೊಡುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
