ನವದೆಹಲಿ:
ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಮೇಲೆ ಕ್ಯಾಮೆರಾಗಳ ಮುಂದೆಯೇ ನಿಂದಿಸುವ ಮೂಲಕ ಅವಮಾನಿಸಿದ್ದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಲಖನೌ ತಂಡ ಹೀನಾಯವಾಗಿ ಸೋತಿತ್ತು. ಇದರಿಂದ ಕೋಪಗೊಂಡಿದ್ದ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲೇ ಕೆಎಲ್ ರಾಹುಲ್ ಅವರನ್ನು ಪ್ರಶ್ನಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟೀಕೆಗಳು ವ್ಯಕ್ತವಾಗಿದ್ದವು. ಇದೇ ಅಲ್ಲದೆ ಕರ್ನಾಟಕದ ಬ್ಯಾಟರ್ LSG ನಾಯಕತ್ವ ತೊರೆಯಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿತ್ತು.