ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್‌….!

ತುಮಕೂರು: 

       ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಕ್ಯಾತಸಂದ್ರ ಟೋಲ್‌ ಬಳಿ ಇಂದು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.ಇಂದು ಚೆನ್ನಗಿರಿ ಇಂದ ಬೆಂಗಳೂರು ಕಡೆ ಪಣಸುವಾಗ ಲೋಕಾಯುಕ್ತಾ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

 ಕರ್ನಾಟಕ ಸಾಬೂನು ಮತ್ತು ಮಾರ್ಜಾಕ ನಿಗಮದ(ಕೆಎಸ್‌ಡಿಲ್) ಟೆಂಡರ್ ಹಂಚಿಕೆಗೆ ಸಂಬಂಧಿಸಿದಂತೆ 81 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ A1 ಆರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಸೋಮವಾರ ಹೈಕೋರ್ಟ್ನಲ್ಲ್ಲಿ ವಜಾಗೊಂಡ ಬೆನ್ನಲ್ಲೆ, ತುಮಕೂರು ಹೊರವಲಯದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗಿದೆ.

ಸೋಮವಾರ ಸಂಜೆ 7ರ ಸಮಯದಲ್ಲಿ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ಕ್ಯಾತ್ಸಂದ್ರ ಟೋಲ್ ಬಳಿ ಲೋಕಾಯುಕ್ತ ಪೊಲೀಸರು ಬಲೆಬೀಸಿ ಆರೋಪಿತ ಶಾಸಕನನ್ನು ಸೆರೆಹಿಡಿದಿದ್ದು, ಬೆಂಗಳೂರಿನ ತನಿಖಾ ತಂಡ ವಿಚಾರಣೆಗೆ ಕರೆದೊಯ್ದಿದೆ.

ಜಾಮೀನು ಅರ್ಜಿ ವಜಾ ಬೆನ್ನಲ್ಲೆ ಮಾಡಾಳ್ ಅವರನ್ನು ಚನ್ನಗಿರಿಯ ನಿವಾಸದಲ್ಲೆ ಬಂಧಿಸಲು ಲೋಕಾಯುಕ್ತ ಪೊಲೀಸರು ಸೋಮವಾರ ಮಧ್ಯಾಹ್ನವೇ ಅವರ ಮನೆಗೆ ತೆರಳಿದ್ದರಾದರೂ ಶಾಸಕ ಸಿಕ್ಕಿರಲಿಲ್ಲ. ಕಡೆಗೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಾಪಸ್ ಬಂದಿದ್ದ ಲೋಕಾಯುಕ್ತ ಪೊಲೀಸರು, KA17-Z-7929 ಸಂಖ್ಯೆಯ ಬಿಳಿಬಣ್ಣದ ಇನ್ನೋವಾ ಕಾರಿನಲ್ಲಿ ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿರುವ ಮಾಹಿತಿ ಅರಿತು ತುಮಕೂರು ಲೋಕಾಯುಕ್ತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

ಕೂಡಲೇ ಕಾರ್ಯಕ್ರವೃತ್ತರಾದ ತುಮಕೂರು ಲೋಕಾಯುಕ್ತ ಪೊಲೀಸರು ಎಸ್ಪಿ ವಲೀಸಾಬ್ ನೇತೃತ್ವದಲ್ಲಿ ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಅವರ ತಂಡ ಕ್ಯಾತ್ಸಂದ್ರ ಟೋಲ್ ಬಳಿ ಸೋಮವಾರ ಸಂಜೆ 7ರ ಸಮಯದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಕಾರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಲೋಕಾಯುಕ್ತ ತನಿಖಾತಂಡಕ್ಕೆ ಶಾಸಕರನ್ನು ಒಪ್ಪಿಸಿದ್ದು, ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ.

ಲಂಚ ಪ್ರಕರಣದಲ್ಲಿ A1 ಆರೋಪಿ

ಕರ್ನಾಟಕ ಸಾಬೂನು ಮತ್ತು ಮಾರ್ಜಾಕ ನಿಗಮದ ಅಧ್ಯಕ್ಷರೂ ಆಗಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿಗಮದ ಟೆಂಡರ್ ಹಂಚಿಕೆಗೆ ಸಂಬAಧಿಸಿದAತೆ 81 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇರೆಗೆ, ಮಾರ್ಚ್ ಮೊದಲ ವಾರದಲ್ಲಿ ಶಾಸಕರ ಬೆಂಗಳೂರಿನ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಲಂಚದ ಮುಂಗಡ ಸ್ವೀಕರಿಸುತ್ತಿದ್ದ ವೇಳೆ ಪುತ್ರ ಪ್ರಶಾಂತ್ ಮಾಡಾಳ್ ಸಹಿತ ಹಣವನ್ನು ವಶಕ್ಕೆ ಪಡೆದಿದ್ದರು. ಮುಂದುವರಿದು ಅವರ ಮನೆ ಕಚೇರಿ ಮೇಲೆ ಶೋಧ ತೀವ್ರಗೊಳಿಸಿದಾಗ 8 ಕೋಟಿಗೂ ಅಧಿಕ ಹಣ, ನೂರಾರು ಎಕರೆ ಜಮೀನು ನಿವೇಶನ, ಮನೆ ಆಸ್ತಿಪತ್ರಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಎ೧ ಆರೋಪಿಯಾಗಿದ್ದರು. ತಲೆಮರೆಸಿಕೊಂಡಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಮಾ.೭ರಂದು ಮಧ್ಯಂತರ ಜಾಮೀನು ಸಹ ದೊರೆತಿತ್ತು. ಜಾಮೀನು ದೊರೆತ ಕೂಡಲೆ ಕ್ಷೇತ್ರಕ್ಕೆ ಮೆರವಣಿಗೆಯೊಂದಿಗೆ ಎಂಟ್ರಿಕೊಟ್ಟಿದ್ದ ಶಾಸಕರ ನಡೆ ಆಕ್ಷೇಪಕ್ಕೆ ಗುರಿಯಾಗಿತ್ತು. ಜಾಮೀನು ರದ್ದು ಕೋರಿ ಲೋಕಾಯುಕ್ತ ಪೊಲೀಸರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಹ ಸಲ್ಲಿಸಿದ್ದರು. ಈ ಮಧ್ಯೆ ಸೋಮವಾರ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ರದ್ದುಗೊಳಿಸಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ವಿರೂಪಾಕ್ಷಪ್ಪ ಬಂಧನಕ್ಕೆ ದಾರಿಮಾಡಿಕೊಟ್ಟಿತು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ