ಸಂವಿಧಾನ ಎಲ್ಲಾ ವರ್ಗದವರಿಗೆ ಸೇರಿದ್ದು : ಮಾದಾರ ಚೆನ್ನಯ್ಯ ಸ್ವಾಮೀಜಿ

ನಾಯಕನಹಟ್ಟಿ :

     ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನವನ್ನು ದಲಿತರಿಗೆ ಮಾತ್ರ ಬರೆದಿಲ್ಲ, ಎಲ್ಲಾ ವರ್ಗದ ಜನರಿಗೆ ಸಂವಿಧಾನವನ್ನು ಬರೆದಿದ್ದಾರೆ ಎಂದು ಶ್ರೀ ಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

   ಸಮೀಪದ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ವಿಶ್ವ ಮಹನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸಂಘ (ರಿ,) ಶಿವಶರಣ ಬಸವಮೂರ್ತಿ ಮಾದಾರ ಚನ್ನಯ್ಯ ಸೇವಾ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಹಾಗೂ ಬಾಬು ಜಗಜೀವನ್ ರಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್‌ರವರ ಕಸನು ನನಸಾಗಲು ಪ್ರತಿಯೊಬ್ಬ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು ಎಂದರು. ಕೆರೆ ನೀರು ಮುಟ್ಟುವುದಕ್ಕೆ, ದೇವಾಲಯ ಪ್ರವೇಶಕ್ಕೆ ದೊಡ್ಡಮಟ್ಟದ ಹೋರಾಟ ಮಾಡಿದರು.

    ಶೋಷಿತ ಸಮುದಾಯಕ್ಕೆ ಜೀವನವನ್ನೆ ಮುಡುಪಾಗಿಟ್ಟರು. ಬಾಬಾ ಸಾಹೇಬರು ಕೊಲಂಬಿಯ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೊತ್ತರ ಪದವಿ ಪಡೆದರು. ಲಂಡನ್ ಸ್ಕೂಲ್ ಆಫ್ ಸೈನ್ಸ್ನ ಪ್ರತಿಷ್ಠಿತ ಡಾಕ್ಟರ್ ಅಫ್ ಆಲ್ ಸೈನ್ಸ್ ಡಾಕ್ಟರ್ ಡಿಗ್ರಿ ಪಡೆದ ವಿಶ್ವದ ಏಕೈಕ ವ್ಯಕ್ತಿ ಅಂಬೇಡ್ಕರ್, ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಇಡೀ ದೇಶದ ಪ್ರತಿಯೊಬ್ಬರು ಪ್ರೀತಿಗೆ ಗೌರವಿಸುವ ಮಹಾನ್ ವ್ಯಕ್ತಿ. ಉನ್ನತ ವಿದ್ಯಾಭ್ಯಸಕ್ಕೆ ಬರೋಡ ಮಹರಾಜರ ಗಾಯಕವಾರ್ಡರು ಸಹಾಯ ಮಾಡಿದರು. ಅಮೇರಿಕಾದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಮುಗಿಸಿ ಬಂದ ಬರೋಡದ ನಾಗರೀಕರ ಸೇವೆಯಲ್ಲಿ ಹುದ್ದೆ ದೊರಕಿತು. ಬಾಡಿಗೆ ಕಟ್ಟಡವಿಲ್ಲ, ಅವರು ಕೆಲಸ ಮಾಡುವುದಕ್ಕಾಗಿ ಗುಮಸ್ತ ಫೈಲ್‌ಗಳನ್ನು ಎಸೆದು ಹೋಗುತ್ತಿದ್ದ ಎಂದು ಅವರು ಹೇಳಿದರು. ಮತ್ತು ಎಲ್ಲಾ ಸಮಾಜಗಳಿಗೂ ಮೀಸಲಾತಿ ಕೊಟ್ಟು ಮಹಾನ್ ಚೇತನರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೇಳಿದರು.

  ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ಸದಸ್ಯರು ಹಾಗೂ ವಕೀಲರಾದ ಹಿರೇಹಳ್ಳಿ ಮಲ್ಲೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಾಕಷ್ಟು ನೋವುಗಳನ್ನು ಅನುಭವಿಸಿ ವಿದ್ಯಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಶಿಕ್ಷಣ ಪಡೆದರು. ಪ್ರಪಂಚಕ್ಕೆ ಮಾದರಿಯಾಗಿರುವ ಸಂವಿಧಾನವನ್ನು ನಮ್ಮ ಭಾರತ ದೇಶಕ್ಕೆ ಕೊಟ್ಟಿದ್ದಾರೆ. ಆದ್ದರಿಂದ ಪೋಷಕರು ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ, ನಿಮ್ಮ ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್‌ರAತೆ ಆಗಲಿ ಎಂದು ಆಷಿಸಿದರು. ನಿಮ್ಮ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದುಳಿದರೆ ಬದುಕಿನಲ್ಲಿ ಹಿಂದುಳಿಯುತ್ತಾರೆ. ಸಂವಿಧಾನದ ಮೂಲಕ ದೇಶದಲ್ಲಿ ಮಹಿಳೆಯರಿಗೆ ಸಮಾನತೆ ತಂದು ಕೊಟ್ಟ ವ್ಯಕ್ತಿ ಅಂಬೇಡ್ಕರ್ ಎಂದರು.

   ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಕನಾಯಕ ಪತ್ರಿಕೆಯ ಸಂಪಾದಕರಾಗಿದ್ದರು. ವಿಶ್ವಮಾನವರು ಇಂತಹ ಮಹಾನ್ ನಾಯಕರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ರವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.

   ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು ಡಾ ಬಿ.ಆರ್. ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದು ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನೀಡಿ ಜಗತ್ತಿಗೆ ಜ್ಞಾನದ ಸಂಕೇತವಾಗಿದ್ದಾರೆ ಇಂತಹ ಮಹಾತ್ಮರನ್ನು ಸ್ಮರಿಸಬೇಕು ಎಂದರು.

   ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಸೂರನಹಳ್ಳಿ ಶ್ರೀನಿವಾಸ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಪಟೇಲ್ ಬಿ.ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜಮ್ಮ ದುರುಗೇಶ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ರಾಧಮ್ಮ ಎ.ಪಿ. ರೇವಣ್ಣ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್ ತಿಪ್ಪೇಸ್ವಾಮಿ ಜೆಸಿಬಿ, ಕೆ.ಟಿ. ಮಲ್ಲಿಕಾರ್ಜುನ್, ದಾನಸಾಲಮ್ಮ, ಪಟ್ಟಣ ಪಂಚಾಯತಿ ಸದಸ್ಯ ಎಂ ಟಿ ಮಂಜುನಾಥ್, ವಕೀಲ ಹಿರೇಹಳ್ಳಿ ಮಲ್ಲೇಶ್, ಕುದಾಪುರ ತಿಪ್ಪೇಸ್ವಾಮಿ, ಆರ್ ಬಸವರಾಜ್, ಮಧು, ಊರಿನ ಮುಖಂಡರಾದ ಮೀಸೆ ಓಬಯ್ಯ, ಗೋಚಿಗಾರ್ ಪಾಲಯ್ಯ, ವಕೀಲ ವೈ, ಮಲ್ಲೇಶ್, ಬೂಟ್ ತಿಪ್ಪೇಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ ಎಸ್ ಸಿದ್ದಲಿಂಗಪ್ಪ, ಶಿಕ್ಷಕ ಎನ್ ಮಹಾಂತೇಶ್, ಅಬ್ಬೇನಹಳ್ಳಿ ಬಿಲ್ ಕಲೆಕ್ಟರ್ ಎಸ್. ಶಿವತಿಪ್ಪೇಸ್ವಾಮಿ, ಟಿ. ಬೋರಯ್ಯ, ಹೊಸ ಕಪಿಲೆ ಬೋರಯ್ಯ, ಹಟ್ಟಿ ಯಜಮಾನರಾದ ಎ.ಕೆ. ಭೀಮಪ್ಪ, ದುರುಗೇಶ್, ಸಣ್ಣಪ್ಪ, ನರಸಿಂಹ, ಸೇರಿದಂತೆ ಗುಂತಕೋಲಮ್ಮನಹಳ್ಳಿ ವಿಶ್ವ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸಮಸ್ತ ಗುಂತಕೋಲಮ್ಮನಹಳ್ಳಿ ಊರಿನ ಗ್ರಾಮಸ್ಥರು ಇದ್ದರು.