ಮಡೆನೂರು ಮನು ಮತ್ತೊಂದು ಆಡಿಯೋ ವೈರಲ್‌!

ಬೆಂಗಳೂರು:

    ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು  ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನವಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಇದೀಗ ಮಡೆನೂರು ಮನುವಿನದ್ದು ಎನ್ನಲಾದ ಮತ್ತೊಂದು ಆಡಿಯೋ ಒಂದು ವೈರಲ್ ಆಗಿದೆ. ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತ ಯುವತಿ, ಮನುವಿನದ್ದು ಎನ್ನಲಾದ ಆಡಿಯೋನ ಪೂರ್ಣಭಾಗವನ್ನು ಹಂಚಿಕೊಂಡಿದ್ದಾರೆ.

    ಜಾಮೀನಿನ ಮೇಲೆ ಹೊರ ಬಂದ ಬಳಿಕ ಮಡೆನೂರು ಮನು, ಆ ಆಡಿಯೋ ನನ್ನದಲ್ಲ ಎಂದಿದ್ದರು. ಈ ಹಿಂದೆ ಬಿಡುಗಡೆ ಆಗಿದ್ದ ಆಡಿಯೋನಲ್ಲಿ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆದರೆ, ಇದೀಗ ಬಿಡುಗಡೆ ಆಗಿರುವ ಆಡಿಯೋನಲ್ಲಿ ನಾನು ಮಹಿಳೆಯೊಬ್ಬಳಿಗೆ ಮೋಸ ಮಾಡಿದ್ದೀನಿ, ಅದನ್ನು ಮರೆಯಲು ಕುಡಿಯುತ್ತಿದ್ದೀನಿ ಎಂದಿದ್ದಾರೆ. ಅಲ್ಲದೇ ಶಿವರಾಜ್‌ ಕುಮಾರ್‌ ಬಗ್ಗೆಯೂ ಮಾತನಾಡಿದ್ದಾರೆ.

    ಸಂತ್ರಸ್ತೆ ಹಂಚಿಕೊಂಡಿರುವ ಆಡಿಯೋದಲ್ಲಿ ಮಾತನಾಡಿರುವ ಮಡೆನೂರು ಮನು “ನಾನು ಬೆಳೀಬೇಕು ಅಂತಿದ್ದೀನಿ ಎಂದು ಹೇಳಿದ್ದಾರೆ. ಆಗ ವ್ಯಕ್ತಿಯೊಬ್ಬರು ಬೆಳೀಬೇಕು ಅಂದರೆ ಬೆಳೀಬೇಕು, ಯಾಕೆ ಸುಮ್ಮನೆ ಈ ತರ ಎಲ್ಲ ಮಾಡ್ಕೊಬೇಕು ಎನ್ನುತ್ತಾರೆ. ಇದಕ್ಕೆ ಮಡೆನೂರು ಮನು ಶಿವರಾಜ್ ಕುಮಾರ್ ಇವರೆಲ್ಲ ಸಾಯೋ ಅಷ್ಟರಲ್ಲಿ ನಾನು ನಿಂತ್ಕೋಬೇಕು ಎಂದಿದ್ದಾರೆ. ಇದಕ್ಕೆ ಕೆರಳುವ ಸಂತ್ರಸ್ತ ಯುವತಿ ಥೂ… ಇನ್ನೊಬ್ಬರ ಸಾವಿನ ಮೇಲೆ ಸಾಧನೆ ಮಾಡಿ ಏನು ಕಟ್ಟಿಕೊಡ್ತೀಯಾ ಎಂದು ಪ್ರಶ್ನೆ ಮಾಡುತ್ತಾರೆ.

    ಸಂತ್ರಸ್ತ ಯುವತಿಯ ಮಾತುಗಳಿಗೆ ಮಡೆನೂರು ಮನು, ತನ್ನೆದುರು ಕುಳಿತ ವ್ಯಕ್ತಿಗೆ ಅವಳು ದುಡ್ಡಿಗೆ ಆಸೆ ಪಡೋಳಲ್ಲ. ನಾನು ಇಷ್ಟ ಪಟ್ಟರೆ ಕೋಟಿಗಟ್ಟಲೆ ಖರ್ಚು ಮಾಡುವ ವ್ಯಕ್ತಿ ಎನ್ನುತ್ತಾರೆ. ಆ ನಂತರ ಈ ಹಿಂದೆ ವೈರಲ್ ಆಗಿದ್ದ ಆಡಿಯೋದಲ್ಲಿ ಹೇಳಿದ್ದ ಮಾತುಗಳನ್ನು ಹೇಳುತ್ತಾರೆ.

   ಶಿವರಾಜ್ ಕುಮಾರ್ ಇನ್ನೊಂದು ಆರು ವರ್ಷ, ಸತ್ತು ಹೋಗ್ತಾರೆ ಅಂತ ನಂಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದೆಂಟು ವರ್ಷ. ದರ್ಶನ್ ಸತ್ತೋದ. ದರ್ಶನ್ ಸರ್ ಇನ್ನೊಂದು ಆರು ವರ್ಷ. ಕ್ರೇಜ್ ಇರುತ್ತೆ, ಸಿನಿಮಾ ಓಡಲ್ಲ. ಅವರು ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನು ಎಂದು ಹೇಳುತ್ತಾರೆ.

   ಆ ನಂತರ ತಾನು ಮತ್ತೆ ಕುಡಿಯಲು ಶುರುಮಾಡಿದ್ದೇಕೆ ಎಂದು ಹೇಳುವ ಮಡೆನೂರು ಮನು ನಾನು ಜಿಮ್ ಮಾಡಿಕೊಂಡು ಇಷ್ಟೆಲ್ಲಾ ಮಾಡಿ, ನೆನ್ನೆಯಿಂದ ಕುಡಿಯೋಕೆ ಸ್ಟಾರ್ಟ್ ಮಾಡಿದ್ದೀನಿ. ಯಾಕೆ ಅಂತ ಕೇಳಿದ್ದಾರೆ? ಒಂದು ಹುಡುಗಿಗೆ ಅನ್ಯಾಯ ಮಾಡಿದ್ದೀನಿ. ಮರೆತು ಬಿಡಬೇಕು, ಆಗ್ತಿಲ್ಲ. ಇನ್ನೂ 2-3 ಸಿನಿಮಾ ಹೀರೋ ಆಗೋಕು. 50 ಸಿನಿಮಾಗೆ ಹೀರೋ ಆಗಬೇಕು ಅಂತ ಕನಸಿದೆ ಎಂದು ಹೇಳುತ್ತಾರೆ.

  ಮುಂದುವರಿದು ಸಂತ್ರಸ್ತ ಯುವತಿಯ ಕುರಿತು ಮಾತನಾಡುವ ಮಡೆನೂರು ಮನು ಇವಳೇನು ದುಡ್ಡು ಕೇಳಿಲ್ಲ ರೀ. ಒಳ್ಳೆ ಪ್ರಾಣಿ ಇದು ಎಂದು ಹೇಳುತ್ತಾರೆ. ಆಗ ಸಂತ್ರಸ್ತ ಯುವತಿ ಅಣ್ಣಾ ಎದ್ದು ಹೋಗಣ್ಣ ಇವನದ್ದು ಇದ್ದಿದ್ದೇ ಕಥೆ ಎಂದು ಹೇಳುತ್ತಾರೆ.ಆಗ ಮಡೆನೂರು ಮನು ಸಂತ್ರಸ್ತ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾರೆ. ಸದ್ಯ ಸಂತ್ರಸ್ತೆ ಹಂಚಿಕೊಂಡ ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಡೆನೂರು ಮನು ವಿರುದ್ಧ ಮತ್ತೊಮ್ಮೆ ಆಕ್ರೋಶವೂ ವ್ಯಕ್ರವಾಗುತ್ತಿದೆ

Recent Articles

spot_img

Related Stories

Share via
Copy link