ಕೊರಟಗೆರೆ :-
ಕುತೂಹಲ ಕೆರಳಿಸಿದ್ದ ಎಲೇರಾಂಪುರ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಮಧುಕುಮಾರ್ ಉಪಾಧ್ಯಕ್ಷರಾಗಿ ಚಂದ್ರಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊರಟಗೆರೆ ತಾಲೂಕಿನ ಎಲೇ ರಾಂಪುರ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ನೂತನವಾಗಿ ಇತ್ತೀಚಿಗೆ ಜರುಗಿದ ಚುನಾವಣೆಯಲ್ಲಿ 12 ಜನ ಸದಸ್ಯರಕ ಆಯ್ಕೆಯಾಗಿದ್ದು , ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನೂತನವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಮಧು ಕುಮಾರ್ ಉಪಾಧ್ಯಕ್ಷರಾಗಿ ಚಂದ್ರಣ್ಣ ಆಯ್ಕೆಯಾಗಿದ್ದಾರೆ,
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಧುಕುಮಾರ್ ಮಾತನಾಡಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವರಾದ ಡಾ.ಪರಮೇಶ್ವರ್, ಸಹಕಾರ ಸಚಿವರಾದ ಕೆಎನ್ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರಣ್ಣ , ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್ ಸೇರಿದಂತೆ ಸ್ಥಳೀಯರ ಸಹಕಾರದಿಂದ ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಪ್ರತಿಕ್ರಿಸಿದರು.
ರೈತಾಪಿ ವರ್ಗದ ಏಳಿಗೆಗಾಗಿ ವ್ಯವಸಾಯ ಸೇವಾ ಸಹಕಾರ ಸಂಘದ ಮತ್ತಷ್ಟು ಶ್ರೇಯಸ್ಗಾಗಿ ಎಲ್ಲಾ ಸದಸ್ಯರುಗಳ ಮಾರ್ಗದರ್ಶನದಂತೆ ಕೆಲಸ ಮಾಡುವುದಾಗಿ ನೂತನ ಅಧ್ಯಕ್ಷ ಮುದುಕುಮಾರ್ ತಿಳಿಸಿದರು.
ನೂತನ ಉಪಾಧ್ಯಕ್ಷ ಚಂದ್ರಣ್ಣ ಮಾತನಾಡಿ ವ್ಯವಸಾಯ ಸೇವಾ ಸಹಕಾರ ಸಂಘ ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಸದೃಢತೆಗೆ ಬಹಳಷ್ಟು ಸಹಕಾರ ನೀಡುತ್ತಿದ್ದು, ಬಡ್ಡಿ ರಹಿತ ಸಾಲದಿಂದ ಬಹಳಷ್ಟು ಬಡ ಕುಟುಂಬಗಳು ಆರ್ಥಿಕವಾಗಿ ಬಲಿಷ್ಠವಾಗಲು ಸಹಕಾರಿಯಾಗಿದೆ ರೈತ ಪರವಾಗಿ ಕೆಲಸ ಮಾಡುವುದಾಗಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಸೂಪರ್ವೈಸರ್ ಬೋರಣ್ಣ, ನಿರ್ದೇಶಕರುಗಳಾದ ಆರ್ ಆರ್ ರಾಜಣ್ಣ, ವೈ ಸಿ ಮಲ್ಲೇಶ್, ಉಮೇಶ್, ಹೊಸಾಲಪ್ಪ, ಆರ್ ಸಿ ಚಿಕ್ಕರಂಗಯ್ಯ, ಅಪ್ಪಾಜಪ್ಪ, ರಾಮುಸ್ವಾಮಿ, ಸೌಭಾಗ್ಯ, ವೇದಾಂಬ ಮುಖಂಡರುಗಳಾದ ತಾ.ಪಂ ಮಾಜಿ ಅಧ್ಯಕ್ಷರು ಸುಧಾ ಹನುಮಂತ್ರಾಯಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಗ್ರಾಪಂ ಸದಸ್ಯ ಕಾಮಣ್ಣ, ನಾಗರಾಜು, ಮಂಜುನಾಥ್, ಕುಮಾರ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
