ಮಧುಗಿರಿ:
ನಿರುದ್ಯೋಗಿ ಯುವಕರಿಗೆ ವರವಾಗುತ್ತಿರುವ ಮೀನು ಸಾಕಾಣಿಕೆ
ಬರವೆಂಬ ಹಣೆಪಟ್ಟಿ ಹೊತ್ತುಕೊಂಡಿರುವ ಏಕಶಿಲಾ ಬೆಟ್ಟದ ನಾಡಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆ ಕಟ್ಟೆಗಳು ಭರ್ತಿಯಾಗಿ, ಸದ್ದಿಲ್ಲದೆ ಮತ್ಸ್ಯ ಕೃಷಿಯು ನೀಲಿಕ್ರಾಂತಿಯನ್ನು ಸೃಷ್ಟಿಸಿ ಯುವಕರನ್ನು ತನ್ನತ್ತ ಆಕರ್ಷಿಸಿ ತಾಲ್ಲೂಕು ಮೀನುಗಾರಿಕೆ ಇಲಾಖೆಯು ಲಕ್ಷಾನು ಗಟ್ಟಲೆ ಆದಾಯವನ್ನು ಗಳಿಸುತ್ತಿದೆ.
ಆರೋಗ್ಯಕ್ಕೂ ಉತ್ತಮ ಆಹಾರವಾಗಿರುವುದರಿಂದ ಮೀನು ಇತ್ತೀಚಿನ ದಿನಗಳಲ್ಲಿ ಮಾರಾಟವು ಹೆಚ್ಚಾಗತೊಡಗಿ ನಿರುದ್ಯೋಗಿ ಯುವಕರಿಗೆ ಈ ಕ್ಷೇತ್ರ ಉದ್ಯೋಗವನ್ನು ರೂಪಿಸಿಕೊಡುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 48 ಕೆರೆಗಳಿದ್ದು, 15,83,878 ಹೆಕ್ಟೇರ್ ಜಲ ವಿಸ್ತೀರ್ಣ ಹೊಂದಿದ್ದು, ಮಾಸಿಕ 10 ಲಕ್ಷ ಟನ್ ಮೀನು ಮಾರುಕಟ್ಟೆಯ ಮೂಲಕ ಮಾರಾಟವಾಗುತ್ತಿದೆ.
ನೀಲಿ ಕ್ರಾಂತಿಯ ಒಂದು ಭಾಗವಾಗಿರುವ ಮತ್ಸ್ಯ ಕೃಷಿಯಲ್ಲಿ ತಾಲ್ಲೂಕಿನಲ್ಲಿ ಕೆರೆ ಕಟ್ಟೆಗಳಲ್ಲಿ ಸ್ವದೇಶಿ ಮೀನು ತಳಿಗಳಾದ ರೋಹು, ಕಟ್ಲಾ, ಮೃಗಾಲ್ ಮತ್ತು ವಿದೇಶಿ ತಳಿಗಳಾದ ಬೆಳ್ಳಿ ಗೆಂಡೆ ( ಸಿಲ್ವರ್ ಕ್ರಾಫ್) ಹುಲ್ಲು ಗೆಂಡೆ ( ಗ್ರ್ಯ್ರಾಸ್ ಕ್ರಾಫ್) ಎಂಬ ತಳಿಯ ಮೀನುಗಳಿವೆ.
4 ರಿಂದ 6 ತಿಂಗಳಲ್ಲಿ ಕೃಷಿ ಮಾಡಬಹುದಾಗಿದ್ದು ಈ ಮೀನುಗಳಿಗೆ ಉತ್ತಮ ಆಹಾರ ಒದಗಿಸಿದರೆ ಸಾಕು ಸುಮಾರು ಅರ್ಧ ಕೆಜಿ ಯಿಂದ ಮೂಕ್ಕಾಲು ಕೆ.ಜಿ.ಗಳ ವರೆಗೆ ಒಂದು ಮೀನು ತೂಗುವ ಬೆಳೆಯ ಜತೆಗೆ ದ್ವಿಗುಣ ಲಾಭಾಂಶವನ್ನು ಗಳಿಸುತ್ತಿದ್ದಾರೆ.
ತಾಲ್ಲೂಕಿನ ಮೀನುಗಾರಿಕೆ ಇಲಾಖೆಯು ರಾಜ್ಯದ ವಿವಿಧೆಡೆ ಉತ್ಪಾದನೆ ಮಾಡಿದ, ವೇಗವಾಗಿ ಬೆಳೆಯುವ ಮೀನುಗಳಾದ ರೋಹು, ಕಟ್ಲಾ, ಸಾಮಾನ್ಯ ಗೆಂಡೆಯ 35 ಮಿ.ಮೀ ನಿಂದ 40ಮಿ.ಮೀ. ಉದ್ದದ ಬಿತ್ತನೆ ಮೀನು ಮರಿಗಳನ್ನು ಬಿತ್ತನೆಗೆ ನೀಡುತ್ತಿದೆ. ತನ್ನ ವ್ಯಾಪ್ತಿಯಲ್ಲಿ 45 ದಿನಗಳ ಕಾಲ ಕಡಲೆ ಕಾಯಿ ಹಿಂಡಿ, ಅಕ್ಕಿಯ ಪಾಲಿಷ್, ತೌಡು, ಕಲಸಿದ ಸಗಣಿ ಬಗ್ಗÀಡವನ್ನು ಮಾಡಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ತೊಟ್ಟಿಗಳಲ್ಲಿ ಸಂಗ್ರಹಿಸಿದೆ.
ರೋಹು ತಳಿಯ 1000 ಬಿತ್ತನೆ ಮರಿಗಳಿಗೆ 300 ರೂ. ಕಟ್ಲಾ ತಳಿಗೆ 400 ರೂ, ಮೃಗಾಲ್‍ಗೆ 250 ರೂ, ಸಾಮಾನ್ಯ ಗೆಂqಗೆÉ 3000, ಹುಲ್ಲುಗೆಂಡೆ ಹಾಗೂ ಬೆಳ್ಳಿ ಗೆಂಡೆಯ ತಳಿಯ 1000 ಬಿತ್ತನೆ ಮರಿಗಳಿಗೆ 500 ರೂ. ದರವನ್ನು ನಿಗದಿ ಮಾಡಿದೆ. ಆಸಕ್ತ ಫಲಾನುಭವಿಗಳಿಗೆ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದೆ. ಆದರೆ ಹುಲ್ಲು ಮತ್ತು ಬೆಳ್ಳಿಗೆಂಡೆಯ ತಳಿಗಳ ಬಿತ್ತನೆ ಮರಿಗಳನ್ನು ತಾಲ್ಲೂಕಿನಲ್ಲಿ ಯಾರು ಬೆಳೆಯುತ್ತಿಲ್ಲ.
ಹೆಚ್ಚು ಮೀನು ಮರಿ ಉತ್ಪಾದನೆ ಹಾಗೂ ಅಭಿವೃದ್ಧಿ ಹೊಂದುವ ಉದ್ದೇಶದಿಂದ ಪ್ರತಿಯೊಬ್ಬ ಆಸಕ್ತ ಫಲಾನುಭವಿಗಳಿಗೆ ಮೀನು ಹಿಡಿಯಲಿಕ್ಕೆ 10 ಸಾವಿರ ಮೌಲ್ಯದ ಸಲಕರಣೆಯ ಕಿಟ್ ಮತ್ತು ಫೈಬರ್ ಗ್ಲಾಸ್ ದೋಣಿಯನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ.
ಜಿ.ಪಂ.ಯೋಜನೆಯಡಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಹಾಗೂ ಮಹಿಳೆಯರಿಗೆ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನ ಕೊಂಡುಕೊಳ್ಳಲು ಗರಿಷ್ಠ ಶೇ. 25 ರಷ್ಟು 10 ಸಾವಿರ ರೂ. ಮತ್ತು ಮೀನು ಮರಿ ಖರೀದಿಗಾಗಿ ಗರಿಷ್ಠ 5 ಸಾವಿರ ರೂ. ಸಹಾಯ ಧನವನ್ನು ನೀಡಲಾಗುತ್ತಿದೆ.
ನೇರವಾಗಿ ಟೆಂಡರ್ ಮೂಲಕ ಭಾಗವಹಿಸಿ ಕೆರೆಗಳಲ್ಲಿ ಮೀನು ಉತ್ಪಾದನೆಯ ಹಕ್ಕುಗಳನ್ನು ಪಡೆದವರಿಗೆ ಆಯಾ ಕೆರೆಗಳ ಹಂಚಿನಲ್ಲಿ ಹೂಡಿಕೆಯ ವೆಚ್ಚದ ಆಧಾರದ ಮೇಲೆ ಮೀನು ಮರಿ ಉತ್ಪಾದನೆಗಾಗಿ ಸಹಾಯಧನ ಕೇಂದ್ರ ಪುರಸ್ಕಾರ ಮತ್ತು ರಾಜ್ಯ ಸರಕಾರ ಗಳ ಮತ್ಸ್ಯ ಸಂಪದ (ಪಿ.ಎಂ.ಎಂ.ಎಸ್) ಯೋಜನೆಯಡಿ ಕ್ರಮವಾಗಿ 20, 25, 50 ಲಕ್ಷ ರೂ.
ವೈಜ್ಞಾನಿಕ ಮೀನು ಸಾಗಾಣಿಕೆ ಘಟಕ (ಆರ್.ಎ.ಎಸ್) ಯೋಜನೆಯಡಿ ಎಸ್.ಸಿ ಮತ್ತು ಎಸ್.ಟಿ. ಇತರೆ ಮಹಿಳಾ ಫಲಾನುಭವಿಗಳಿಗೆ ಶೇ.50 ರಷ್ಟು ಹಾಗೂ ಪುರುಷ ಫಲಾನುಭವಿಗಳಿಗೆ ಶೇ. 40 ರಷ್ಟು ಸಹಾಯ ಧನ ಹಾಗೂ ನೇರ ಸಾಲ ಸೌಲಭ್ಯಗಳನ್ನು ಮೀನು ಅಭಿವೃದ್ದಿ ಮತ್ತು ಉತ್ಪಾದನೆಗೆ ನೀಡಲಾಗುತ್ತಿದೆ.
ಮೀನು ಅಭಿವೃದ್ದಿ ಮತ್ತು ಉತ್ಪಾದನೆಯ ಕೆರೆಗಳ ಹಕ್ಕು ಪಡೆದವರಿಗೆ ಆಕಸ್ಮಿಕ ಘಟನೆಗಳಿಗೆ ಕೆರೆಗಳು ತುತ್ತಾಗಿ ಹೊಡೆದು ಹೋದರೆ ಅಂತಹ ಸಂದÀರ್ಭದಲ್ಲಿ ಕೆರೆಯು ಅಭಿವೃದ್ದಿ ಹೊಂದಿದ ನಂತರ ಟೆಂಡರ್‍ದಾರರಿಗೆ ಉಳಿಕೆಯ ವರ್ಷಗಳನ್ನು ಹಿಂದಿನ ದರಗಳಂತೆ ಉಳಿಕೆಯ ವರ್ಷಗಳಿಗೆ ಮುಂದುವರೆಸಲು ಇಲಾಖೆಯು ಅವಕಾಶ ನೀಡುತ್ತದೆ.
ತಾಲ್ಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ 4 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮತ್ತು ಮಾರಾಟ ಮಾಡುವಂತಹ ವ್ಯವಸ್ಥೆ ಇದ್ದು, ಇಲ್ಲಿ 2 ತಿಂಗಳಿಗೆ 1 ಬೆಳೆಯ ಲೆಕ್ಕಾಚಾರದಲ್ಲಿ ಮೊಟ್ಟೆಯಿಂದ ಬಂದಂತಹ ಬಿತ್ತನೆ ಮೀನು ಮರಿಗಳನ್ನು ಪೆÇೀಷಿಸಿ 2021- 22 ನೆ ಸಾಲಿನಲ್ಲಿ ಸರಕಾರಕ್ಕೆ 46,440 ರೂ. ಗಳನ್ನು ಪಾವತಿಸಿ 1 ಲಕ್ಷದ 45 ಸಾವಿರ ಬಿತ್ತನೆ ಮೀನು ಮರಿಗಳನ್ನು ಮಾರಾಟ ಮಾಡಿದೆ. 4 ನೆ ಬೆಳೆಯ ಬಿತ್ತನೆ ಮರಿಗಳ ಮಾರಾಟಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
2013- 14 ನೇ ಸಾಲಿನಲ್ಲಿ ಕೇವಲ 83,449 ರೂ. ಗಳಿಸಿದ್ದ ಇಲಾಖೆಯು ಕಾಲ ಕ್ರಮೇಣ ಮೀನು ಮಾರಾಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದರಿಂದ, 2014 -15 ನೇ ಸಾಲಿನಲ್ಲಿ 18 ಕೆರೆಗಳಿಗೆ ಟೆಂಡರ್ ಕರೆದು, ಇಲಾಖೆಗೆ 11 ಲಕ್ಷದ 32 ಸಾವಿರದ 286 ರೂ. ಗಳು ಸಂದಾಯವಾಗಿತ್ತು.
ಕೇವಲ ಸಾವಿರ ರೂ. ಗಳಿಂದ 1 ಲಕ್ಷ ರೂ. ಗಳಿಗೂ ಗಳಿಸದ ಇಲಾಖೆ ಇಂದಿನ ದಿನಗಳಲ್ಲಿ 2021- 22 ನೇ ಸಾಲಿನಲ್ಲಿ 20 ಕೆರೆಗಳ ಹರಾಜಿನಿಂದಾಗಿ 18 ಲಕ್ಷ 42 ಸಾವಿರ 625 ರೂ.ಗಳನ್ನು ಗಳಿಸಿದ್ದು, ಜಿಲ್ಲೆಯಲ್ಲಿಯೇ ಟೆಂಡರ್ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಖ್ಯಾತಿ ಪಡೆದಿದೆ ಎನ್ನಲಾಗುತ್ತಿದೆ.
ಬರಗಾಲದ ಸಮಯದಲ್ಲಿಯೂ ತಾಲ್ಲೂಕಿನ 07 ಕೆರೆಗಳಲ್ಲಿ ನೀರಿದ್ದುದನ್ನು ಮನಗಂಡು ಇಂತಹ ಸಂದÀರ್ಭದಲ್ಲಿಯೂ 3 ಲಕ್ಷದ 64 ಸಾವಿರದ 550 ರೂಪಾಯಿಗಳನ್ನು ಗಳಿಸಿತ್ತು.
2017-18 ನೇ ಸಾಲಿನಲ್ಲಿ ಮತ್ಸ್ಯ ಆಶ್ರಯ ಯೋಜನೆಯಡಿ 30 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗ ನಿರ್ಮಾಣವಾಗುತ್ತಿರುವ ಮನೆಗಳು ಕೇವಲ 13 ಮಾತ್ರ. ನಂತರ ದಿನಗಳಲ್ಲಿ ಇಲ್ಲಿಯವರೆವಿಗೂ ಯಾವುದೇ ಮನೆಗಳ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಯಾರೂ ಸೂಕ್ತ ಕ್ರಮ ವಹಿಸದಿರುವುದು ಬೇಸರದ ಸಂಗತಿಯಾಗಿದೆ.
ಒಟ್ಟಾರೆ ಈ ಬಾರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಅತಿ ಹೆಚ್ಚು ನೀರು ಸಂಗ್ರಹವಾಗಿದ್ದು ಕೆರೆ ಕಟ್ಟೆಗಳಲ್ಲಿ ಮೀನುಗಳಿಗೆ ದೊರೆಯಬಹುದಾದ ಆಹಾರವು ಸಂಗ್ರಹವಾಗಿದೆ. ಕೆರೆ ಕಟ್ಟೆಗಳು ಬಂಗಾರ ಬೆಳೆಯನ್ನು ನೀಡುವಂತಹ ಅಕ್ಷಯ ಪಾತ್ರೆಗಳಾವುದರಲ್ಲಿ ಯಾವುದೇ ಸಂಶಯಗಳಿಲ್ಲ.
ನಮ್ಮ ಬರದ ತಾಲ್ಲೂಕಿನಲ್ಲಿ ಮೀನು ಉತ್ಪಾದನೆ ಮತ್ತು ಅಭಿವೃದ್ದಿಗೆ ಯುವಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅನುಭವಸ್ಥ ಆರ್ಹರಿಗೆ ಹಾಗೂ ಯುವಕರಿಗೆ ಇಲಾಖೆಯಿಂದ ದೊರೆಯ ಬೇಕಾದ ಸೌಲಭ್ಯ ಮಾಗದರ್ಶನ ನೀಡುತ್ತಾ ನಮ್ಮ ಹಿರಿಯ ಅಧಿಕಾರಗಳ ಸಹಕಾರದಿಂದ ಮೀನು ಕೃಷಿಗೆ ಆದ್ಯತೆ ನೀಡಲಾಗುವುದು.
-ರಂಗಸ್ವಾಮಿ ಆರ್. ಮೇಲ್ವಿಚಾರಕರು.
ಹಿಂದಿನ ಶಾಸಕರಾಗಿದ್ದ ರಾಜಣ್ಣ ನವರ ಅವಧಿಯಲ್ಲಿ ನಮ್ಮ ತಾಲ್ಲೂಕಿನ ಮೀನುಗಾರರಿಗೆ ಎಲ್ಲಾ ಸೌಲಭ್ಯಗಳು ಸಕಾಲಕ್ಕೆ ತಲುಪುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಇಲಾಖೆಯ ವತಿಯಿಂದ ಕಾಲ ಕಾಲಕ್ಕೆ ಕಡಿಮೆ ದರದಲ್ಲಿ ಉತ್ತಮ ಮೀನು ಮರಿಗಳು ಬಿಟ್ಟರೆ ಅಂತಹ ಸೌಲಭ್ಯಗಳು ದೊರೆಯುತ್ತಿರುವುದು ಮರೀಚಿಕೆಯಾಗಿದೆ.
-ಗೋವಿಂದರಾಜು, ಮೀನು ಕೃಷಿಕ.
– ರಾಜೇಂದ್ರ ಎಂ.ಎನ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
